ತುಮಕೂರು (www.vknews.in): ತುಮಕೂರಿನ ವಿಶ್ವಾಸ್ ಜ್ಯುವೆಲ್ಲರ್ಸ್ನಲ್ಲಿ ಸುಮಾರು ₹10 ಲಕ್ಷ ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿದ್ದ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದೆ. ಆರಂಭದಲ್ಲಿ ಕಳ್ಳತನ ಎಂದು ಶಂಕಿಸಿದ್ದ ಸಿಬ್ಬಂದಿಗೆ, ಸಿಸಿಟಿವಿ ದೃಶ್ಯ ಪರಿಶೀಲಿಸಿದ ಬಳಿಕ ನಿಜವಾದ ‘ಕಳ್ಳ’ ಇಲಿ ಎಂಬುದು ಗೊತ್ತಾಗಿ ಆಶ್ಚರ್ಯವಾಗಿದೆ.
ಅಂಗಡಿ ತೆರೆದ ವೇಳೆ ಸುಮಾರು 10 ಚಿನ್ನದ ಉಂಗುರಗಳು ಹಾಗೂ ಎರಡು ಚಿನ್ನದ ಹಾರಗಳು ಕಾಣೆಯಾಗಿದ್ದವು. ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಆಭರಣಗಳಿಗೆ ಜೋಡಿಸಿದ್ದ ಬೆಲೆ ಟ್ಯಾಗ್ಗಳೂ ನಾಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಯಿತು.
“ಯಾರಾದರೂ ಕಳ್ಳತನ ಮಾಡಿದ್ದರೆ ಚಿನ್ನವನ್ನು ಮಾತ್ರ ತೆಗೆದುಕೊಂಡು ಟ್ಯಾಗ್ಗಳನ್ನು ಅಲ್ಲೇ ಬಿಟ್ಟು ಹೋಗುತ್ತಿದ್ದರು. ಆದರೆ ಟ್ಯಾಗ್ಗಳೂ ಕಾಣೆಯಾಗಿದ್ದರಿಂದ ಏನೋ ವಿಚಿತ್ರ ನಡೆದಿದೆ ಎಂಬ ಅನುಮಾನ ಮೂಡಿತ್ತು” ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಬಳಿಕ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಇಲಿಯೊಂದು ಆಭರಣಗಳನ್ನು ಎಳೆದೊಯ್ದಿರುವುದು ಬೆಳಕಿಗೆ ಬಂದಿದೆ. ಈ ಅಚ್ಚರಿಯ ದೃಶ್ಯ ಕಂಡ ಸಿಬ್ಬಂದಿ ಹಾಗೂ ಮಾಲೀಕರು ಬೆಚ್ಚಿಬಿದ್ದಿದ್ದಾರೆ. ಇಲಿಯು ಆಭರಣಗಳನ್ನು ಎಲ್ಲಿ ಅಡಗಿಸಿದೆ ಎಂಬುದನ್ನು ಪತ್ತೆಹಚ್ಚಲು ಸಿಬ್ಬಂದಿ ಅಂಗಡಿಯ ವಿವಿಧ ಭಾಗಗಳಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.