ನವದೆಹಲಿ (www.vknews.in): ಪ್ರಧಾನಿ ನರೇಂದ್ರ ಮೋದಿ ಅವರು ಜಂತರ್ ಮಂತರ್ ಪ್ರತಿಭಟನೆ ಕುರಿತಾಗಿ ಬಿಡುಗಡೆ ಮಾಡಿದ ಭಾವನಾತ್ಮಕ ವಿಡಿಯೊಗೆ ಬಹುಭಾಷಾ ನಟ ಪ್ರಕಾಶ್ ರಾಜ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಮಕ್ಕಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಬದಲು ಅವರಿಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿರುವ ಅವರು, ಸರ್ಕಾರವೂ ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವಿಡಿಯೊ ಹಂಚಿಕೊಂಡಿರುವ ಪ್ರಕಾಶ್ ರಾಜ್, “ಮಕ್ಕಳು ಹಿರಿಯರಿಗೆ ಅವಾಚ್ಯ ಭಾಷೆ ಬಳಸಿದಾಗ ಅಥವಾ ತಪ್ಪಾಗಿ ಮಾತನಾಡಿದರೆ, ನಾವು ಅವರಿಗೆ ಬುದ್ಧಿ ಹೇಳುತ್ತೇವೆ. ಹಾಗೆ ಮಾಡದಂತೆ ಎಚ್ಚರಿಸುತ್ತೇವೆ. ಆದರೆ ಅವರ ವಿರುದ್ಧ ಪೊಲೀಸ್ ದೂರು ನೀಡಿ, ಕ್ರಿಮಿನಲ್ ಪ್ರಕರಣ ದಾಖಲಿಸಿ ಕಿರುಕುಳ ನೀಡುವುದಿಲ್ಲ” ಎಂದು ಹೇಳಿದ್ದಾರೆ.
ದೋಷಪೂರಿತ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಯುವಜನರಲ್ಲಿ ನೋವು ಹಾಗೂ ಅಸಹಾಯಕತೆ ಉಂಟಾಗಿದೆ. ಇದಕ್ಕೆ ಸರ್ಕಾರವೂ ಹೊಣೆಗಾರಿಕೆ ವಹಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿಗಳ ವಿರುದ್ಧ ಲಾಠಿ ಪ್ರಹಾರ, ಪೆಲೆಟ್ ಗನ್ ಬಳಕೆ ಹಾಗೂ ಪೊಲೀಸ್ ದೌರ್ಜನ್ಯ ನಡೆದಿರುವ ಆರೋಪಗಳಿಗೂ ಉತ್ತರದಾಯಿತ್ವ ನಿಗದಿಯಾಗಬೇಕು ಎಂದು ಹೇಳಿರುವ ಅವರು, “ಮಕ್ಕಳ ವಿರುದ್ಧ ಪ್ರಕರಣ ದಾಖಲಿಸುವ ಬದಲು, ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
“My Friend… ಸ್ವಲ್ಪ ಜವಾಬ್ದಾರಿ ತೆಗೆದುಕೊಳ್ಳಿ. ನಮ್ಮ ಮಕ್ಕಳ ಭವಿಷ್ಯ ಮತ್ತು ವೃತ್ತಿಜೀವನವನ್ನು ಹಾಳು ಮಾಡಬೇಡಿ. ಅವರನ್ನು ಮತ್ತೆ ಆಘಾತಕ್ಕೆ ದೂಡಬೇಡಿ. ಅವರಿಗೆ ದಯೆ ತೋರಿಸಿ” ಎಂದು ಪ್ರಕಾಶ್ ರಾಜ್ ತಮ್ಮ ವಿಡಿಯೊ ಸಂದೇಶದಲ್ಲಿ ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಪ್ರತಿಭಟನಾಕಾರರನ್ನು “ದಾರಿತಪ್ಪಿದ ಮಕ್ಕಳು” ಎಂದು ಬಣ್ಣಿಸಿ ಕ್ಷಮಿಸುವಂತೆ ಮನವಿ ಮಾಡಿದ ಬೆನ್ನಲ್ಲೇ ಪ್ರಕಾಶ್ ರಾಜ್ ಈ ಪ್ರತಿಕ್ರಿಯೆ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
Dear Phraand .. we are #justasking pic.twitter.com/OvnHfpTn1R — Prakash Raj (@prakashraaj) July 31, 2026
Dear Phraand .. we are #justasking pic.twitter.com/OvnHfpTn1R
— Prakash Raj (@prakashraaj) July 31, 2026
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.