ಬೆಳ್ತಂಗಡಿ (www.vknews.in) ; ಇತ್ತೀಚೆಗೆ ಮಂಗಳೂರು ಕೇಂದ್ರವಾಗಿಟ್ಟುಕೊಂಡು ಜಿಲ್ಲೆಯ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ ಪ್ರಸಿದ್ದ ಖಾಝಿ ಪರಂಪರೆಯ ಕೊಂಡಿ, ಸೂಫೀವರ್ಯ, ಸ್ವಾಹಿಬ್ ಮೌಲಾ ಸುನ್ನೀ ನಾಯಕ ಪಾಣಕ್ಕಾಡ್ ನಾಸಿರ್ ಅಬ್ದುಲ್ ಹಯ್ಯ್ ತಂಙಳ್ ರವರ ಖಾಝಿ ಸ್ವೀಕಾರದ ಮುಂದುವರೆದ ಭಾಗವಾಗಿ ಬೆಳ್ತಂಗಡಿ ತಾಲೂಕು ಕೇಂದ್ರ ಖಿಳ್ರ್ ಜುಮಾ ಮಸೀದಿಯ ಖಾಝಿಯಾಗಿ ವಿಧ್ಯುಕ್ತವಾಗಿ ಅಧಿಕಾರ ಸ್ವೀಕರಿಸಿದರು.
ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಖಾಝಿಗಳು ದಕ ಜಿಲ್ಲೆಗೆ ಧಾರ್ಮಿಕವಾಗಿ ಅದರದ್ದೇ ಆದ ಪರಂಪರೆ ಇದೆ. ಇಲ್ಲಿನ ಜನರ ಧಾರ್ಮಿಕ ಶೃದ್ದೆಗೆ ನಾನು ಮನಸೋತಿದ್ದೇನೆ. ಸಯ್ಯಿದರನ್ನು ಉಲಮಾಗಳನ್ನು ಬಹಳ ಗೌರವಿಸುವ ಜನ ಇಲ್ಲಿಯವರು. ವೈವಿಧ್ಯಮಯ ಸಂಸ್ಕೃತಿಗಳ ತವರೂರು ದಕ್ಷಿಣ ಕನ್ನಡ ಜಿಲ್ಲೆ. ಎಲ್ಲಕ್ಕಿಂತಲೂ ಇಲ್ಲಿ ವಿವಿಧ ಗುಂಪುಗಳ ಮಧ್ಯೆ ಶಾಂತಿ ಸೌಹಾರ್ದ ಭದ್ರಗೊಳ್ಳಬೇಕು. ಅದನ್ನು ಬಲಪಡಿಸಲು ನನ್ನಿಂದಾದ ಸೇವೆ ನಾನು ಮಾಡುವೆ. ನಿಮ್ಮ ಸಹಕಾರ ಮುಖ್ಯ. ಖಾಝಿ ಮಾಡುವುದೆಂದರೆ ಕತ್ತಿ ಇಲ್ಲದೆ ಕೊಯ್ಯುವುದಕ್ಕೆ ಸಮಾನ ಎಂದು ಪೂರ್ವಿಕ ಇಮಾಮರು ತಿಳಿಸಿದ್ದಾರೆ.
ನನ್ನ ಮೇಲೆ ಭರವಸೆ ಇಟ್ಟು ಖಾಝಿಯಾಗಲು ಸಂಭಂದಪಟ್ಟವರಿಂದ ಬಹಳ ಒತ್ತಡ ಬಂತು. ಸಮಸ್ತದ ಉಲಮಾಗ್ರೇಶ್ವರರು ತುಂಬಾ ಒತ್ತಡ ಹೇರಿದರು. ಹಾಗಾಗಿ ಅನಿವಾರ್ಯ ಪರಿಸ್ಥಿಯಲ್ಲಿ ಒಪ್ಪಿಕೊಳ್ಳಬೇಕಾಯಿತು. ಖಾಝಿ ವಿಚಾರದಲ್ಲಿ ಕೆಲವೊಂದು ಕಡೆ ಗೊಂದಲ ಉಂಟಾಗಿದೆ ಎಂಬ ಮಾಹಿತಿ ದೊರಕಿತು. ನಾನು ನಿನ್ನೆಯೇ ಸಂಭಂದ ಪಟ್ಟವರಿಗೆ ಕರೆದು ಗೊಂದಲ ಇರುವಲ್ಲಿ ಖಾಝಿ ಮಾಡಲು ಪ್ರಯತ್ನ ಮಾಡಬೇಡಿ. ಈ ಕಾರ್ಯಕ್ರಮವನ್ನು ಮುಂದೂಡಿ ಇನ್ನೊಂದು ಸಂಧರ್ಭದಲ್ಲಿ ಮಾಡೋಣ ಎಂದಿದ್ದೆ. ಆದರೆ ಈ ಮೊಹಲ್ಲಾದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಜವಾಬ್ದಾರಿಯುತರು ತಿಳಿಸಿದರು. ಆ ನಂತರ ಒಪ್ಪಿಕೊಂಡೆ. ನಮ್ಮದು ಸಮುದಾಯವನ್ನು ಜೋಡಿಸುವ ಕೆಲಸವಾಗಬೇಕೇ ಹೊರತು ಅನೈಕ್ಯತೆ ಸೃಷ್ಟಿಸುವ ಕೆಟ್ಟ ಕೆಲಸ ನಮ್ಮಿಂದ ಆಗಬಾರದು ಎಂದು ಖಾಝಿಗಳು ಮಾರ್ಮಿಕವಾಗಿ ನುಡಿದರು.
ಇತ್ತೀಚೆಗೆ ನಮ್ಮಿಂದ ಅಗಲಿದ ಸಮಸ್ತದ ಕಾರ್ಯದರ್ಶಿ ಶೈಖುನಾ ಆಲಿ ಕುಟ್ಟಿ ಉಸ್ತಾದರ ನ್ನು ಸ್ಮರಿಸಿದರಲ್ಲದೇ, ಶಂಸುಲ್ ಉಲಮಾರ ಜೊತೆಯಲ್ಲಿ ಸಮುದಾಯದ ಐಕ್ಯತೆಗಾಗಿ ಅವರು ಸಹಿಸಿದ ತ್ಯಾಗ ಪರಿಶ್ರಮವನ್ನು ಕೊಂಡಾಡಿದರು. ಖ್ಯಾತ ಸೂಫೀವರ್ಯರೂ ಕವರತ್ತಿ ದ್ವೀಪ ಸಮೂಹದ ಖಾಝಿಗಳೂ ಆದ ಶೈಖುನಾ ಸೈದಾಲಿ ತಂಙಳ್ ಸ್ಥಾನ ವಸ್ತ್ರ ,ಪೇಟ ತೊಡಿಸಿ ಗೌರವಿಸಿದರು.
ಕರ್ನಾಟಕ ಹಜ್ ಸಮಿತಿ ಸದಸ್ಯರಾದ ಸಯ್ಯಿದ್ ಅಶ್ರಫ್ ತಂಙಳ್ ಆದೂರು ಮಾತನಾಡಿ ಸಯ್ಯಿದ್ ನಾಸಿರ್ ಹಯ್ಯ್ ತಂಙಳ್ ರವರು ಸಯ್ಯಿದರ ಪೈಕಿ ವಿಶೇಷ ವ್ಯಕ್ತಿತ್ವ ಹೊಂದಿದ ಒಬ್ಬ ಮೇಧಾವಿಯಾಗಿದ್ದಾರೆ. ಸಾದಾತ್ ಕೌಟುಂಬಿಕ ಸಂಘಟನೆಯ ಅಧ್ಯಕ್ಷರಾಗಿ ಅವರು ಇದ್ದರೆ ಕಾರ್ಯದರ್ಶಿಯಾಗಿ ನಾನು ಅವರ ಜೊತೆ ಇದ್ದೇನೆ. ಅವರದ್ದು ಮೃದು ಸ್ವಭಾವ. ಚಿಕ್ಕ ಮಕ್ಕಳನ್ನೂ ಗೌರವಿಸುವ ಸರಳ ಗುಣ ಇರುವುದರಿಂದಲೇ ಅವರು ಇಷ್ಟು ಎತ್ತರಕ್ಕೆ ಏರಿದ್ದಾರೆ. ಇಂತಹ ಖಾಝಿಗಳು ಜಿಲ್ಲೆಗೆ ದೊರಕಿದ್ದು ಜನತೆಯ ಭಾಗ್ಯವೇ ಸರಿ ಎಂದರು.
ಜಮಾತ್ ಅಧ್ಯಕ್ಷ ಸಾಮಾಜಿಕ ಮುಂದಾಳು ಅಕ್ಬರ್ ನೂತನ ಖಾಝಿಯನ್ನು ಬೈಹತ್ ಮಾಡಿದರು. ಹಿರಿಯರಾದ ಅಲ್ ಹಾಜಿ ಎಸ್ ಬಿ ಮುಹಮ್ಮದ್ ದಾರಿಮಿ ತೌಲಿಯತ್ ವಚನ ಹೇಳಿಕೊಟ್ಟರು. ಅಚ್ಚುಕಟ್ಟಾಗಿ ನಡೆದ ಸರಳ ಸಮಾರಂಭದಲ್ಲಿ ನೂರಾರು ಜನರು ಭಾಗವಹಿಸಿ ಧನ್ಯಗೊಂಡರು. ಸ್ಥಳೀಯ ಜಮಾತ್ ಮಾಜಿ ಅಧ್ಯಕ್ಷ ನಝೀರ್ ಬಿ ಎ ಖಾಝಿಗಳಿಗೆ ಶಾಲುಹೊದಿಸಿ ಗೌರವಿಸಿದರು.
ಬಿ.ಎಚ್. ಮಹಮ್ಮದ್ ಗೌರವ ಅಧ್ಯಕ್ಷರು, ಬಿ.ಎಚ್ ರಝಾಕ್, ಪ್ರಧಾನ ಕಾರ್ಯದರ್ಶಿ, ಫೈಝಲ್ ಐ.ಜೆ.ಕೋಶಾಧಿಕಾರಿ ಬಿ.ಶೇಖುಂಞ್ಞ ಉಪಾಧ್ಯಕ್ಷರು ಮಹಮ್ಮದ್ ಶರೀಫ್ ಉಪಾಧ್ಯಕ್ಷರು ಹನೀಫ್ ವರ್ಷಾ, ಮುಹಮ್ಮದ್ ಕುದ್ರಡ್ಕ ಕಾರ್ಯದರ್ಶಿಗಳು ಹಿರಿಯರಾದ ಉಮರ್ ಕುಂಞಿ ಮುಸ್ಲಿಯಾರ್, ಸಮಿತಿ ಸದಸ್ಯರಾದ ಹಾರಿಸ್ ಐ. ಜೆ. ಇಸ್ಮಾಲಿ, ಐ.ಬಿ.ಅಬ್ಬಾಸ್ ಹಂಝಾ, ಅಬ್ದುಲ್ ರಹಮಾನ್, ಸೈದಾಲಿ, ರಿಝ್ವಾನ್ ಬಿ.ಕೆ, ಅಬ್ದುಲ್ ರಹಮಾನ್ ಕಕ್ಕಿಂಜೆ, ನವಾಝ್ ಕಟ್ಡೆ, ಸಮೀಮ್ ಇಸುಫು, ಸ್ವಾದಿಕ್ ಕಟ್ಟೆ, ಸಾಲಿ ಮದ್ದಡ್ಕ, ಸಿರಾಜ್ ಚಿಲಿಂಬಿ, ನೌಶದ್ ಮದ್ದಡ್ಕ, ರಝಾಕ್ ಶಿರ್ಲಾಲ್, ಜಿಲ್ಲಾ ಉಮರಾ ನಾಯಕರಾದ ಮಾಜಿ ಮೇಯರ್ ಅಶ್ರಫ್, ಸೆಂಟ್ರಲ್ ಕಮಿಟಿಯ ಹನೀಫ್ ಹಾಜಿ,ಸಮದ್ ಹಾಜಿ,ಶಾಕಿರ್ ಪರಂಗಿಪೇಟೆ,ಎಸ್ ಹಸನಬ್ಬ ಪರಂಗಿಪೇಟೆ ರೇಂಜ್ ಅಧ್ಯಕ್ಷರು, ಜಿಲಾ ಮೇನೇಜ್ ಮೆಂಟ್ ಅಧ್ಯಕ್ಷರಾದ M H ಹಾಜಿ, ಮೆಟ್ರೋ ಶಾಹುಲ್ ಹಮೀದ್ ಹಾಜಿ, ಇಬ್ರಾಹಿಂ ಹಾಜಿ ಕೊಣಾಜೆ, ಮಯ್ಯದ್ದಿ ಗುಂಡುಕಲ್, ಯೂಸುಪ್ ಕೊಳ್ತಮಜ್, ಶೈಖನಾ ಮರ್ಹೂಂ ತ್ವಾಖ ಉಸ್ತಾದರ ಸುಪುತ್ರ ಹುಸೈನ್ ರಹ್ಮಾನಿ, ಫಕೀರಬ್ಬ ಮಾಸ್ಟರ್, ನಂದಾವರ ಮಜೀದ್ ಫೈಝಿ, ಹುಸೈನ್ ದಾರಿಮಿ ಮೊದಲಾದ ಅನೇಕ ಗಣ್ಯರು ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.