ದೇರಳಕಟ್ಟೆ (www.vknews.in): ದಾರುನ್ನಜಾತ್ ಕರ್ನಾಟಕ ರಝ್ವಿ ಕೌನ್ಸಿಲ್ ವತಿಯಿಂದ ಆಯೋಜಿಸಲಾಗಿರುವ ವಾರ್ಷಿಕ ಮಹಾಸಭೆ ಹಾಗೂ ರಝ್ವಿ ಸಂಗಮವು ಆಗಸ್ಟ್ 11ರಂದು (ಮಂಗಳವಾರ) ಬೆಳಿಗ್ಗೆ 10 ಗಂಟೆಗೆ ದೇರಳಕಟ್ಟೆಯ ತಾಜುಲ್ ಉಲಮಾ ಮಸೀದಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ “ಹಝ್ರತ್ ಅಹ್ಮದ್ ರಝಾ ಖಾನ್ ಬರೇಲ್ವಿ (ರ) ಆಂಡ್ ಮಜ್ಲಿಸ್” ವಿಶೇಷ ಆಕರ್ಷಣೆಯಾಗಿದ್ದು, ಕರ್ನಾಟಕದ ವಿವಿಧ ಭಾಗಗಳಿಂದ ರಝ್ವಿಗಳು ಭಾಗವಹಿಸಲಿದ್ದಾರೆ.
ದಾರುನ್ನಜಾತ್ ಕರ್ನಾಟಕ ರಝ್ವಿ ಕೌನ್ಸಿಲ್ ಪ್ರಕಟಣೆಯಲ್ಲಿ ತಿಳಿಸಿರುವಂತೆ, ಚಿನಾಲ ದಾರುನ್ನಜಾತ್ ವಿದ್ಯಾಸಂಸ್ಥೆಯಲ್ಲಿ ಬಿರುದು ಪಡೆದಿರುವ ಕರ್ನಾಟಕದ ಎಲ್ಲಾ ರಝ್ವಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಘಟನೆಯ ಚಟುವಟಿಕೆಗಳಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಸಂಘಟನೆಯ ಮುಂದಿನ ಕಾರ್ಯಚಟುವಟಿಕೆಗಳಿಗೆ ದಿಕ್ಕು ನೀಡುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಮಹಾಸಭೆಯಲ್ಲಿ ಅಹ್ಲುಸ್ಸುನ್ನತ್ ವಲ್ ಜಮಾಅತ್ ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವುದು, ಮುಂದಿನ ವರ್ಷದ ಸಂಘಟನಾ ಯೋಜನೆಗಳನ್ನು ರೂಪಿಸುವುದು ಹಾಗೂ ಸಮಾಜಸೇವೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕುರಿತು ಸಮಾಲೋಚನೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
“ನಮ್ಮ ಸಂಘಟನೆಯ ಈ ವರ್ಷದ ಅತಿ ದೊಡ್ಡ ಸಂಗಮ ಇದಾಗಿದ್ದು, ಎಲ್ಲ ರಝ್ವಿಗಳ ಉಪಸ್ಥಿತಿಯೇ ಕಾರ್ಯಕ್ರಮದ ಯಶಸ್ಸು. ಚಿನಾಲದಲ್ಲಿ ವಿದ್ಯಾಭ್ಯಾಸ ಮಾಡಿದ ಪ್ರತಿಯೊಬ್ಬ ರಝ್ವಿಯೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ನಿಮ್ಮ ಗೈರುಹಾಜರಿ ನಮ್ಮ ನಷ್ಟ” ಎಂದು ಕೌನ್ಸಿಲ್ ಮನವಿ ಮಾಡಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಅಧ್ಯಕ್ಷ ಸಯ್ಯಿದ್ CTM ತಂಙಳ್ ರಝ್ವಿ, ಮುಡಿಪು ಹಾಗೂ ಕಾರ್ಯದರ್ಶಿ ಅಬ್ಬಾಸ್ ರಝ್ವಿ ಪಡಿಕ್ಕಲ್ ಅವರು ಎಲ್ಲ ಸದಸ್ಯರು ಮತ್ತು ರಝ್ವಿಗಳಿಗೆ ಆಹ್ವಾನ ನೀಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.