ದುಬೈ (www.vknews.in): ಬಾಡಿಗೆ ವೆಚ್ಚ ಕಡಿಮೆ ಮಾಡಲು ಶೇರಿಂಗ್ ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವ ಅನಿವಾಸಿಗಳು ಮತ್ತು ಪ್ರವಾಸಿಗರಿಗೆ ದುಬೈ ಆಡಳಿತ ಮಹತ್ವದ ಸೂಚನೆ ನೀಡಿದೆ. ಅನಧಿಕೃತ ಸಬ್ಲೆಟಿಂಗ್, ಬೆಡ್ಸ್ಪೇಸ್ ವ್ಯವಸ್ಥೆ ಹಾಗೂ ಅತಿಯಾದ ಜನಸಂದಣಿಯ ವಾಸವನ್ನು ತಡೆಯಲು ಹೊಸ ನಿಯಮಗಳು ಜಾರಿಯಾಗಿದ್ದು, ಉಲ್ಲಂಘಿಸಿದರೆ ಭಾರೀ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಹೊಸ ನಿಯಮಗಳ ಪ್ರಕಾರ, ಕಟ್ಟಡದ ಮಾಲೀಕರ ಸ್ಪಷ್ಟ ಲಿಖಿತ ಅನುಮತಿಯಿಲ್ಲದೆ ಯಾವುದೇ ಬಾಡಿಗೆದಾರರು ತಾವು ಬಾಡಿಗೆಗೆ ಪಡೆದ ಅಪಾರ್ಟ್ಮೆಂಟ್ ಅಥವಾ ಅದರ ಒಂದು ಭಾಗವನ್ನು ಮತ್ತೊಬ್ಬರಿಗೆ ಸಬ್ಲೀಸ್ ಮಾಡಲು ಅಥವಾ ಬಾಡಿಗೆಗೆ ನೀಡಲು ಅವಕಾಶವಿಲ್ಲ. ಮಾಲೀಕರ ಅನುಮತಿಯಿಲ್ಲದೆ ಕೊಠಡಿ ಅಥವಾ ಬೆಡ್ಸ್ಪೇಸ್ ಬಾಡಿಗೆಗೆ ನೀಡಿದರೆ ಅದು ಬಾಡಿಗೆ ಒಪ್ಪಂದದ ಉಲ್ಲಂಘನೆಯಾಗಿ ಪರಿಗಣಿಸಲಾಗುತ್ತದೆ.
ಹೊಸ ನಿಯಮದಂತೆ ಕೆಳಕಂಡ ಸಂದರ್ಭಗಳಲ್ಲಿ ಮಾತ್ರ ಶೇರಿಂಗ್ಗೆ ಅವಕಾಶವಿದೆ:
ಈ ಕೆಳಗಿನ ಚಟುವಟಿಕೆಗಳನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ:
ದುಬೈ ಮುನಿಸಿಪಾಲಿಟಿ ಹಾಗೂ ದುಬೈ ಲ್ಯಾಂಡ್ ಡಿಪಾರ್ಟ್ಮೆಂಟ್ (DLD) ನೀಡುವ ವಿಶೇಷ ಪರ್ಮಿಟ್ ಇಲ್ಲದೆ ಯಾವುದೇ ಕಟ್ಟಡವನ್ನು ಶೇರಿಂಗ್ ಆಧಾರದ ಮೇಲೆ ನಡೆಸಲು ಅವಕಾಶವಿಲ್ಲ. ಕಟ್ಟಡ ಮಾಲೀಕರು ಅಥವಾ ಪರವಾನಗಿ ಪಡೆದ ಏಜೆನ್ಸಿಗಳಿಗೆ ಮಾತ್ರ ಇಂತಹ ಶೇರಿಂಗ್ ಯುನಿಟ್ಗಳನ್ನು ಬಾಡಿಗೆಗೆ ನೀಡುವ ಅಧಿಕಾರವಿದೆ. ಪರ್ಮಿಟ್ ಸಾಮಾನ್ಯವಾಗಿ ಒಂದು ವರ್ಷದ ಅವಧಿಗೆ ನೀಡಲಾಗುತ್ತಿದ್ದು, ಕೆಲವು ಸಂದರ್ಭಗಳಲ್ಲಿ ಎರಡು ವರ್ಷಗಳವರೆಗೆ ಮಾನ್ಯವಾಗಿರಬಹುದು. ಅವಧಿ ಮುಕ್ತಾಯವಾಗುವ 30 ದಿನಗಳ ಮುಂಚಿತವಾಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು.
ಫೈರ್ ಸೇಫ್ಟಿ, ನೈರ್ಮಲ್ಯ, ಸಮರ್ಪಕ ವಿಸ್ತೀರ್ಣ, ಗಾಳಿ ಸಂಚಾರ ಹಾಗೂ ಭದ್ರತಾ ವ್ಯವಸ್ಥೆ ಸೇರಿದಂತೆ ಎಲ್ಲ ಸುರಕ್ಷತಾ ಮಾನದಂಡಗಳನ್ನು ಪೂರೈಸಿದ ವಸತಿಗಳಿಗೆ ಮಾತ್ರ ಪರ್ಮಿಟ್ ನೀಡಲಾಗುತ್ತದೆ.
ಹೊಸ ನಿಯಮಗಳನ್ನು ಉಲ್ಲಂಘಿಸಿದರೆ ಅಪರಾಧದ ಸ್ವರೂಪವನ್ನು ಆಧರಿಸಿ 5,00,000 ದಿರ್ಹಮ್ಗಳವರೆಗೆ (ಸುಮಾರು ₹1 ಕೋಟಿಗೂ ಹೆಚ್ಚು) ದಂಡ ವಿಧಿಸಲು ಅವಕಾಶವಿದ್ದು, ಮರುಕಳಿಸಿದರೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೇರಿಂಗ್ ಆಧಾರದ ಮೇಲೆ ವಾಸಿಸಲು ಅಥವಾ ಕೊಠಡಿ ಬಾಡಿಗೆಗೆ ಪಡೆಯಲು ಬಯಸುವ ಅನಿವಾಸಿಗಳು ತಮ್ಮ ಬಾಡಿಗೆ ಒಪ್ಪಂದವನ್ನು ಸಂಪೂರ್ಣವಾಗಿ ಪರಿಶೀಲಿಸಿ, ಕಟ್ಟಡ ಮಾಲೀಕರ ಅಧಿಕೃತ ಅನುಮತಿ ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ದುಬೈ ಆಡಳಿತ ಸಲಹೆ ನೀಡಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.