ಕೋಝಿಕ್ಕೋಡ್ (www.vknews.in) : ಚಾಲಿಯಾರ್ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ ದೋಣಿ ಮುಳುಗಿ ನಾಪತ್ತೆಯಾಗಿದ್ದ 23 ವರ್ಷದ ಯುವಕನ ಶವ ಪತ್ತೆಯಾಗಿದೆ. ಮೃತರನ್ನು ಮಾವೂರು ಕುತಿರಾಡಂ ನಿವಾಸಿ ಬಾಸಿಲ್ (23) ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ಸುಮಾರು 12.30ರ ವೇಳೆಗೆ ಮನಂತಲ ಕಡವು ಬಳಿಯ ಪೂಲಕೋಡ್ ಪ್ರದೇಶದಲ್ಲಿ ದೋಣಿ ಮುಳುಗಿದ ಘಟನೆ ನಡೆದಿದೆ.
ಬಾಸಿಲ್ ಸೇರಿದಂತೆ ಮೂವರು ದೋಣಿಯಲ್ಲಿ ಮೀನು ಹಿಡಿಯಲು ತೆರಳಿದ್ದರು ಎನ್ನಲಾಗಿದೆ. ದೋಣಿ ಮುಳುಗಿದ ವೇಳೆ ಬಾಸಿಲ್ ಜೊತೆಯಲ್ಲಿದ್ದ ಇತರ ಇಬ್ಬರು ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಬಾಸಿಲ್ ನಾಪತ್ತೆಯಾಗಿದ್ದರಿಂದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು.
ಬಳಿಕ ಅಗ್ನಿಶಾಮಕ ದಳದ ಸ್ಕೂಬಾ ಡೈವರ್ಗಳ ತಂಡ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಬಾಸಿಲ್ ಅವರ ಶವವನ್ನು ಪತ್ತೆಹಚ್ಚಿ ಹೊರತೆಗೆದಿದೆ. ಘಟನೆಯಿಂದ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖ ಆವರಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.