ಕೋಟೆಕಾರ್ (www.vknews.in) : ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್ ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ, ಕೆ.ಎಮ್.ಜೆ, ಎಸ್ ವೈ ಎಸ್, ಎಸ್ಸೆಸ್ಸೆಫ್ ಹಿದಾಯತ್ ನಗರ ಇದರ ಜಂಟಿ ಆಶ್ರಯದಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಧ್ವಜಾರೋಹಣ ಮಾಡಿದರು.
ಮುಹಧ್ಸಿನ್ ಶಕೂರ್ ಸಅದಿ, ಸದರ್ ಅಬ್ದುಲ್ ನಯೀಮಿ, ಮುಅಲ್ಲಿಂ ಫಾರೂಕ್ ಸಅದಿ ಕೊಮರಂಗಳ, ಮಸೀದಿ ಉಪಾಧ್ಯಕ್ಷ ಕೆ ಎಮ್ ಅಬ್ದುಲ್ ಕಾದರ್, ಸಬೀರ್ ಅಶ್ ಅರಿ, ಝುಬೈರ್ ಝುಹ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಮದರಸ ಮಕ್ಕಳಿಗೆ ಸಿಹಿ ಹಂಚಲಾಯಿತು. ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿ ಎಚ್ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.