(www.vknews.in) : ಎಲಿಮಲೆ ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಇದರ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆಯು ಎಲಿಮಲೆ ಬದ್ರಿಯಾ ಜುಮಾ ಮಸೀದಿಯ ವಠಾರದಲ್ಲಿ ಜರುಗಿತು. ಆಧ್ಯಾತ್ಮಿಕ ನಾಯಕರಾದ ಬಹು ಮುಹ್ಸಿನ್ ಸೈದಲವಿಕೋಯ ಅಲ್ ಬುಖಾರಿ ಎಲಿಮಲೆ ತಂಙಳ್ ರವರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರಿಗೆ ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಇಕ್ರಾಮುಸ್ಸುನ್ನ ದರ್ಸ್ ಹಾಗೂ ಹಿಫ್ಲ್ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು. ಸ್ಥಳೀಯ ಮದರ್ರಿಸರಾದ ರಫೀಕ್ ಸಕಾಫಿಯವರು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಸರ್ವರೂ ಭಾರತ ದೇಶದ ಅಭಿವೃದ್ಧಿಗೆ ಮತ್ತು ಸ್ವಾತಂತ್ರ್ಯದ ರಕ್ಷಣೆಗಾಗಿ ಶ್ರಮಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಪಾಣಾಜೆ, ಎಲಿಮಲೆ ಹಿಫ್ಲುಲ್ ಕುರಾನ್ ಕಾಲೇಜು ಪ್ರಾಧ್ಯಾಪಕರಾದ ಹಾಫಿಝ್ ಹಾಶಿರ್ ಸಕಾಫಿ, ನೂರುಲ್ ಹುದಾ ಮದ್ರಸ ಎಲಿಮಲೆ ಇದರ ಮುಖ್ಯೋಪಾಧ್ಯಾಯರಾದ ಸಿದ್ದೀಕ್ ಹಿಮಮಿ, ಜೀರ್ಮುಖಿ ಮುಹಿಯದ್ದೀನ್ ಮಸೀದಿ ಇಮಾಮ ರಾದ ಅಬ್ದುಲ್ ಜಲೀಲ್ ಮುಈನಿ , ಮುಸ್ತಫಾ ಹಿಶಾಮಿ, ಜಮಾಅತ್ ಉಪಾಧ್ಯಕ್ಷರಾದ ಮಹಮೂದ್ ಸಖಾಫಿ, ಕಾರ್ಯದರ್ಶಿ ಇಬ್ರಾಹಿಂ ಜೀರ್ಮುಖಿ, ಮೀಲಾದ್ ಸಮಿತಿಯ ಅಧ್ಯಕ್ಷ ಹನೀಫ್ ಜೀರ್ಮುಕಿ, ಹಿರಿಯರಾದ ಮಹಮ್ಮದ್ ಹಾಜಿ ಹರ್ಳಡ್ಕ, ಮಹಮ್ಮದ್ ಕುಂಞಿಮೇಲೆ ಬೈಲು , ಅಬೂಬಕ್ಕರ್ ಪಾಣಾಜೆ, ತರ್ಬಿಯತ್ ಅಧ್ಯಕ್ಷ ಲತೀಫ್ ಕ್ವಾಲಿಟಿ, ನುಸ್ರತ್ ನ ಪದಾಧಿಕಾರಿಗಳು ಹಾಗೂ ಇಕ್ರಾಮುಸ್ಸುನ್ನ ದರ್ಸ್ ಮತ್ತು ಹಿಫ್ಲ್ ವಿದ್ಯಾರ್ಥಿಗಳು, ನೂರುಲ್ ಹುದಾ ಮದ್ರಸ ವಿದ್ಯಾರ್ಥಿಗಳು, ಬುಸ್ತಾನುಲ್ ಉಲೂಂ ಮದ್ರಸ ವಿದ್ಯಾರ್ಥಿಗಳು, ಇಕ್ರಾಮುಸ್ಸುನ್ನ ಸ್ಕೌಟ್ಸ್ ವಿದ್ಯಾರ್ಥಿಗಳು ಹಾಗೂ ಊರವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸೂಫಿ ಎಲಿಮಲೆ ಸ್ವಾಗತಿಸಿ ವಂದಿಸಿದರು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿವಿಧ ಕಲಾ ಸ್ಪರ್ಧೆಗಳು ಇಂದು ಸಾಯಂಕಾಲ ಇಕ್ರಾಮುಸ್ಸುನ್ನ ಕ್ಯಾಂಪಸ್ ನಲ್ಲಿ ನಡೆಯಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.