ಶಾರ್ಜಾ: ಕೋಝಿಕ್ಕೋಡ್ ಜಿಲ್ಲೆಯ ಕುಟ್ಟಿಯಾಡಿ ಚೆರಿಯಕುಂಬಲಂ ನಿವಾಸಿ ಆರ್.ಪಿ. ನವಾಸ್ (50) ಅವರು ಶಾರ್ಜಾದಲ್ಲಿ ನಿಧನರಾದರು. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಅವರು ಶುಕ್ರವಾರದಿಂದ ಶಾರ್ಜಾದ ಖಾಸಿಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾದರು.
ನವಾಸ್ ಅವರು ಶಾರ್ಜಾದ ರಿಯಲ್ ಎಸ್ಟೇಟ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಮೃತದೇಹವನ್ನು ಊರಿಗೆ ಕೊಂಡೊಯ್ಯುವ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮೃತರು ಪತ್ನಿ ಹಸೀನಾ, ಮಕ್ಕಳಾದ ನಿಜಾಜ್, ಫಾತಿಮಾ, ಫಾಡಿಯಾ ಹಾಗೂ ನಾಡಾ ನಾಸ್ವಿನ್ ಸೇರಿದಂತೆ ಕುಟುಂಬಸ್ಥರು ಮತ್ತು ಬಂಧು-ಬಳಗವನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.