(www.vknews.in) ; ಸರ್ಕಾರಿ ಕಚೇರಿಯಾಗಿರಲಿ, ಸರ್ಕಾರಿ ಶಾಲೆಯಾಗಿರಲಿ, ಶಿಕ್ಷಣ ಇಲಾಖೆಯಾಗಿರಲಿ, ಸ್ಥಳೀಯ ಸಂಸ್ಥೆಯಾಗಿರಲಿ ಅಥವಾ RTI ಕಾಯ್ದೆಯ ವ್ಯಾಪ್ತಿಗೆ ಬರುವ ಯಾವುದೇ ಸಾರ್ವಜನಿಕ ಪ್ರಾಧಿಕಾರವಾಗಿರಲಿ, ನಿಮ್ಮ ಕೆಲಸ ಕಾನೂನುಬದ್ಧವಾಗಿದ್ದರೆ, ದಾಖಲೆಗಳು ಸರಿಯಾಗಿದ್ದರೆ, ಕಾರ್ಯವೈಖರಿ ಪಾರದರ್ಶಕವಾಗಿದ್ದರೆ, ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಭಯಪಡುವ ಅಗತ್ಯವೇನು? ಪ್ರಶ್ನೆ ಕೇಳುವುದು ಅಪರಾಧವಲ್ಲ. ಮಾಹಿತಿ ಕೇಳುವುದು ಶತ್ರುತೆಯಲ್ಲ. RTI ಅರ್ಜಿ ಸಲ್ಲಿಸುವುದು ಸಾರ್ವಜನಿಕರ ಕಾನೂನುಬದ್ಧ ಹಕ್ಕು.
ಸರ್ಕಾರಿ ಶಾಲೆಗಳು ಸಾರ್ವಜನಿಕ ಹಣದಿಂದ ನಡೆಯುವ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು. ಆದ್ದರಿಂದ ಶಾಲೆಯ ಆಡಳಿತ, ಸರ್ಕಾರಿ ಅನುದಾನ, ಖರೀದಿ, ಕಾಮಗಾರಿ, ವಿದ್ಯಾರ್ಥಿಗಳಿಗೆ ದೊರೆಯಬೇಕಾದ ಸೌಲಭ್ಯಗಳು, SDMCಗೆ ಸಂಬಂಧಿಸಿದ ದಾಖಲೆಗಳು, ಸರ್ಕಾರಿ ಯೋಜನೆಗಳ ಅನುಷ್ಠಾನ, ಶಿಕ್ಷಕರ ಮತ್ತು ಸಿಬ್ಬಂದಿಯ ಕರ್ತವ್ಯ ನಿರ್ವಹಣೆ ಮುಂತಾದ ಕಾನೂನುಬದ್ಧವಾಗಿ ದಾಖಲಾಗಿರುವ ಮಾಹಿತಿಗಳ ಬಗ್ಗೆ ಸಾರ್ವಜನಿಕರು ಪ್ರಶ್ನಿಸುವ ಹಕ್ಕು ಹೊಂದಿದ್ದಾರೆ.
ಶಿಕ್ಷಕರು ಮತ್ತು ಸಿಬ್ಬಂದಿಯ ಹಾಜರಾತಿ ದಾಖಲೆಗಳು, ಕರ್ತವ್ಯಕ್ಕೆ ಸಂಬಂಧಿಸಿದ ಅಧಿಕೃತ ಹಾಜರಾತಿ/ಲಾಗ್ಬುಕ್ ದಾಖಲೆಗಳು, ಸರ್ಕಾರಿ ಶಾಲೆಯ ಅಧಿಕೃತ ಕರ್ತವ್ಯ ಸಮಯದ ಅನುಷ್ಠಾನ, ಶಾಲಾ ಕೆಲಸಕ್ಕೆ ಸಂಬಂಧಿಸಿದ ಅಧಿಕೃತ ಚಲನವಲನ/ಡ್ಯೂಟಿ ದಾಖಲೆಗಳು, ತರಗತಿಗೆ ಸಂಬಂಧಿಸಿದಂತೆ ನಿರ್ವಹಿಸಲಾಗಿರುವ ಪಾಠ ಯೋಜನೆ, Lesson Plan, Teaching Plan ಮುಂತಾದ ದಾಖಲೆಗಳು, ಪಠ್ಯ ಬೋಧನೆಗೆ ಸಂಬಂಧಿಸಿದ ಅಧಿಕೃತ ಪೂರ್ವತಯಾರಿ ದಾಖಲೆಗಳು, ವಿದ್ಯಾರ್ಥಿಗಳ ಹಾಜರಾತಿ ಮತ್ತು ಶೈಕ್ಷಣಿಕ ದಾಖಲೆಗಳಿಗೆ ಸಂಬಂಧಿಸಿದ ಕಾನೂನುಬದ್ಧವಾಗಿ ನೀಡಬಹುದಾದ ಮಾಹಿತಿ, ಶಾಲೆಗೆ ಬಂದಿರುವ ಅನುದಾನ ಮತ್ತು ಅದರ ಬಳಕೆ, ದಾನಿಗಳಿಂದ ಪಡೆದು ಕೊಂಡ ವಸ್ತುಗಳು,ದೇಣಿಗೆ,ಪೋಷಕರಿಂದ ಪಡೆಯುತ್ತಿರುವ ದೇಣಿಗೆಗಳು ಅದರ ಬಳಕೆಯ ವಿವರಗಳು, ಶಾಲಾ ಕಟ್ಟಡ, ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಮುಂತಾದ ಸೌಲಭ್ಯಗಳಿಗೆ ಸಂಬಂಧಿಸಿದ ಕಾಮಗಾರಿ ದಾಖಲೆಗಳು, ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್, ಮಧ್ಯಾಹ್ನದ ಬಿಸಿಯೂಟ ಮುಂತಾದ ಸರ್ಕಾರಿ ಸೌಲಭ್ಯಗಳ ವಿತರಣೆ ದಾಖಲೆಗಳು, SDMC ಸಭೆಗಳ ನಿರ್ಣಯಗಳು ಮತ್ತು ಸಂಬಂಧಿತ ದಾಖಲೆಗಳು, ಸರ್ಕಾರಿ ಆದೇಶಗಳ ಅನುಷ್ಠಾನಕ್ಕೆ ಸಂಬಂಧಿಸಿದ ದಾಖಲೆಗಳು, ಖರೀದಿ, ಟೆಂಡರ್, ಬಿಲ್, ವೌಚರ್ ಮತ್ತು ಪಾವತಿ ದಾಖಲೆಗಳು, ಇಲಾಖೆಯ ಪರಿಶೀಲನಾ ವರದಿಗಳು ಮತ್ತು ಸಂಬಂಧಿತ ದಾಖಲೆಗಳು RTI ಮೂಲಕ ಅಧಿಕಾರಿಯಿಂದ ಹೊಸ ಉತ್ತರ, ಅಭಿಪ್ರಾಯ, ವಿವರಣೆ ಅಥವಾ ಕಾರಣವನ್ನು ಸೃಷ್ಟಿಸಿ ಕೊಡಿಸುವುದು RTIಯ ಉದ್ದೇಶವಲ್ಲ.
ಕಾಯ್ದೆಯ Section 2(f)ಯಲ್ಲಿ “information” ಎಂದರೆ ದಾಖಲೆಗಳು, ದಾಖಲೆಪತ್ರಗಳು, memo, e-mail, order, logbook, report, electronic data ಮುಂತಾದ ಅಸ್ತಿತ್ವದಲ್ಲಿರುವ ಮಾಹಿತಿ ಒಳಗೊಂಡಿದೆ. Section 2(j) ನಾಗರಿಕರಿಗೆ ಸಾರ್ವಜನಿಕ ಪ್ರಾಧಿಕಾರದ ನಿಯಂತ್ರಣದಲ್ಲಿರುವ ಮಾಹಿತಿಯನ್ನು ಪಡೆಯುವ ಹಕ್ಕನ್ನು ನೀಡುತ್ತದೆ.
“ನೀವು ಏಕೆ ಶಾಲೆಗೆ ತಡವಾಗಿ ಬಂದಿರಿ?” ಎಂದು ವಿವರಣೆ ಕೇಳುವುದಕ್ಕಿಂತ,
“ದಿನಾಂಕ ___ ರಿಂದ ___ ರವರೆಗೆ ಹಾಜರಾತಿ ದಾಖಲೆಯ ಪ್ರಮಾಣೀಕೃತ ಪ್ರತಿಯನ್ನು ನೀಡಿ” ಎಂದು ದಾಖಲೆ ಆಧಾರಿತವಾಗಿ ಕೇಳುವುದು ಹೆಚ್ಚು ಪರಿಣಾಮಕಾರಿ ಹಾಗೂ ದಾಖಲೆಗಳ ನಿರ್ವಹಣೆಕೂಡ ಇದಕ್ಕೆ ಪೂರಕವಾಗಿಯೇ ಇರತಕ್ಕದ್ದು
ಸರ್ಕಾರಿ ಕಚೇರಿಗಳಲ್ಲೂ ಇದೇ ನಿಯಮ ಸರ್ಕಾರಿ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕಾನೂನುಬದ್ಧವಾಗಿ ನಿರ್ವಹಿಸಲಾದ ದಾಖಲೆಗಳಿದ್ದರೆ, ಅವುಗಳ ಬಗ್ಗೆ RTI ಮೂಲಕ ಮಾಹಿತಿ ಕೇಳಬಹುದು. ಹಾಜರಾತಿ, ಅಧಿಕೃತ ಡ್ಯೂಟಿ, ಪ್ರವಾಸ/ಚಲನವಲನಕ್ಕೆ ಸಂಬಂಧಿಸಿದ ದಾಖಲೆಗಳು, ಕೆಲಸದ ಹಂಚಿಕೆ, ಅಧಿಕೃತ ಆದೇಶಗಳು, ಪರಿಶೀಲನಾ ವರದಿಗಳು, ಕಡತದ ಚಲನವಲನ ಮತ್ತು ನಿರ್ಧಾರ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳು—ಮಾಹಿತಿ ಕಾಯ್ದೆಯ ವ್ಯಾಪ್ತಿಯಲ್ಲಿ ಪ್ರಶ್ನಿಸಬಹುದಾದ ವಿಷಯಗಳಾಗಬಹುದು
RTI Act Section 4(1)(a) ಸಾರ್ವಜನಿಕ ಪ್ರಾಧಿಕಾರಗಳು ತಮ್ಮ ದಾಖಲೆಗಳನ್ನು ಸರಿಯಾಗಿ catalogued ಮತ್ತು indexed ಆಗಿ ನಿರ್ವಹಿಸಬೇಕು ಎಂದು ಹೇಳುತ್ತದೆ. Section 4(1)(b) ಸಂಸ್ಥೆಯ ಕಾರ್ಯಗಳು, ಅಧಿಕಾರಿಗಳ ಕರ್ತವ್ಯಗಳು, ನಿರ್ಧಾರ ಪ್ರಕ್ರಿಯೆ, ನಿಯಮಗಳು, manuals ಮತ್ತು records ಮುಂತಾದ ಮಾಹಿತಿಯನ್ನು ಸಾರ್ವಜನಿಕಗೊಳಿಸುವ ಕರ್ತವ್ಯವನ್ನೂ ಒತ್ತಿಹೇಳುತ್ತದೆ.
ಶಿಕ್ಷಕರು ತಮ್ಮ ಪಾಠಕ್ಕೆ ಸಂಬಂಧಿಸಿದಂತೆ Lesson Plan, Teaching Plan, Work Diary, Preparation Record ಅಥವಾ ಇತರ ಅಧಿಕೃತ ದಾಖಲೆಗಳನ್ನು ನಿಯಮಾನುಸಾರವಾಗಿ ನಿರ್ವಹಿಸಬೇಕು, ಆ ದಾಖಲೆಗಳ ಅಸ್ತಿತ್ವ ಮತ್ತು ಕಾನೂನುಬದ್ಧವಾಗಿ ನೀಡಬಹುದಾದ ಪ್ರತಿಗಳನ್ನು RTI ಮೂಲಕ ಕೇಳಿದಾಗ ಕೊಡಲೇ ಬೇಕು
ಆದರೆ, “ಪ್ರತಿ ಶಿಕ್ಷಕರು ತಮ್ಮ ಮನಸ್ಸಿನಲ್ಲಿ ಏನು ಯೋಚಿಸಿ ಪಾಠಕ್ಕೆ ತಯಾರಾದರು?” ಎಂಬ ವೈಯಕ್ತಿಕ ಮನಸ್ಥಿತಿಯನ್ನು RTI ಮೂಲಕ ಸೃಷ್ಟಿಸಿ ಕೊಡಿಸಲು ಸಾಧ್ಯವಿಲ್ಲ. ಹಾಗೂ ಈ ರೀತಿ ಕೇಳಲೂ ಬಾರದು
ಆದ್ದರಿಂದ RTI ಅರ್ಜಿಯನ್ನು ದಾಖಲೆ ಆಧಾರಿತವಾಗಿ ರೂಪಿಸುವುದು ಅತ್ಯಂತ ಮುಖ್ಯ.
ಅದರೊಂದಿಗೆ “ಖಾಸಗಿ ಶಾಲೆ ಎಂದಾಕ್ಷಣ RTI ಅನ್ವಯಿಸುವುದಿಲ್ಲ” ಎನ್ನುವುದು ಸಂಪೂರ್ಣ ಸತ್ಯವಲ್ಲ! ಇಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರೂ ಕಾನೂನಿನ ಒಂದು ಪ್ರಮುಖ ಅಂಶವನ್ನು ಅರ್ಥಮಾಡಿಕೊಳ್ಳಬೇಕು. ಖಾಸಗಿ ಶಾಲೆ ಎಂಬ ಹೆಸರೇ RTIಯಿಂದ ಶಾಶ್ವತ ವಿನಾಯಿತಿ ನೀಡುವುದಿಲ್ಲ.
RTI Act, 2005ರ Section 2(h) ಪ್ರಕಾರ ಸರ್ಕಾರದಿಂದ owned, controlled ಅಥವಾ substantially financed ಆಗಿರುವ ಸಂಸ್ಥೆಗಳು ಮತ್ತು ಸರ್ಕಾರದ ಹಣದಿಂದ directly ಅಥವಾ indirectly substantially financed ಆಗಿರುವ ಕೆಲವು non-government organisations “Public Authority” ವ್ಯಾಪ್ತಿಗೆ ಬರುತ್ತದೆ
ಸುಪ್ರೀಂ ಕೋರ್ಟ್ D.A.V. College Trust & Management Society v. Director of Public Instructions ಪ್ರಕರಣದಲ್ಲಿ, ಸರ್ಕಾರದಿಂದ substantial financing ದೊರೆಯುವ ಖಾಸಗಿ ಶಿಕ್ಷಣ ಸಂಸ್ಥೆಗಳೂ Section 2(h) ಅಡಿಯಲ್ಲಿ Public Authority ಆಗಬಹುದು ಎಂದು ಸ್ಪಷ್ಟಪಡಿಸಿದೆ.
“ಇದು ಖಾಸಗಿ ಶಾಲೆ, ಆದ್ದರಿಂದ RTI ಇಲ್ಲ” ಎಂದು ಒಂದೇ ಮಾತಿನಲ್ಲಿ ತಿರಸ್ಕರಿಸುವ ಮೊದಲು, Section 2(h)ಯ ಕಾನೂನು ಮಾನದಂಡಗಳನ್ನು ಪರಿಶೀಲಿಸಬೇಕು.
ಕೆಲವು ಸಂದರ್ಭಗಳಲ್ಲಿ ಖಾಸಗಿ ಶಾಲೆಗೆ ನೇರ RTI ಸಾಧ್ಯವಾಗದಿದ್ದರೂ… ಒಂದು ಖಾಸಗಿ ಶಾಲೆ Section 2(h) ಅಡಿಯಲ್ಲಿ Public Authority ಅಲ್ಲ ಎಂದು ನಿರ್ಧಾರವಾದರೂ, ಆ ಶಾಲೆಗೆ ಸಂಬಂಧಿಸಿದ ಕೆಲವು ಮಾಹಿತಿ ಸರ್ಕಾರದ ಶಿಕ್ಷಣ ಇಲಾಖೆ ಅಥವಾ ಇತರ ಸಾರ್ವಜನಿಕ ಪ್ರಾಧಿಕಾರದ ಬಳಿ ಕಾನೂನುಬದ್ಧವಾಗಿ ಲಭ್ಯವಿರುತ್ತದೆ, ಆ ಸಾರ್ವಜನಿಕ ಪ್ರಾಧಿಕಾರದ ಬಳಿ ಇರುವ ಮಾಹಿತಿಯನ್ನು RTI ಮೂಲಕ ಕೇಳುವ ಪ್ರಶ್ನೆ ಉದ್ಭವಿಸುತ್ತದೆ. Section 2(f)ಯೇ “information relating to any private body which can be accessed by a public authority under any other law” ಎಂಬ ಅಂಶವನ್ನು ಒಳಗೊಂಡಿದೆ.
“ಈ ಖಾಸಗಿ ಶಾಲೆಗೆ ಸಂಬಂಧಿಸಿದ ಯಾವ ಮಾಹಿತಿ ಶಿಕ್ಷಣ ಇಲಾಖೆಯ ಬಳಿ ಇದೆ?” ಎಂಬ ಪ್ರಶ್ನೆಯನ್ನೂ ಅರ್ಥ ಮಾಡಿಕೊಳ್ಳಬೇಕು,ಅದರಲ್ಲಿ ಪ್ರಮುಖವಾಗಿ ಶಾಲೆಯ ನೊಂಧಣಿ ಹಾಗೂ ನವೀಕರಣದ ಸಂದರ್ಭದಲ್ಲಿ *ಆರ್ ಟಿ ಈ* ಕಾಯ್ದೆಯಲ್ಲಿ ಉಲ್ಲೇಖಿಸಿದ ಹಲವು ದಾಖಲೆಗಳು ಕಡ್ಡಾಯವಾಗಿದ್ದು ಇದು ನೇರವಾಗಿ ಆರ್ ಟಿ ಐ ವ್ಯಾಪ್ತಿಯಲ್ಲಿರುತ್ತದೆ ಇದು RTI ಬಳಸುವಲ್ಲಿ ಅತ್ಯಂತ ಪರಿಣಾಮಕಾರಿ ಕಾನೂನುಬದ್ಧ ವಿಧಾನ.
RTI ಅರ್ಜಿದಾರರನ್ನು ಶತ್ರುವೆಂದು ನೋಡಬೇಡಿ! ಸರ್ಕಾರಿ ಶಿಕ್ಷಕರಾಗಿರಲಿ, ಮುಖ್ಯೋಪಾಧ್ಯಾಯರಾಗಿರಲಿ, ಶಿಕ್ಷಣಾಧಿಕಾರಿಯಾಗಿರಲಿ, ಸರ್ಕಾರಿ ಕಚೇರಿ ಸಿಬ್ಬಂದಿಯಾಗಿರಲಿ ಅಥವಾ RTI ಕಾಯ್ದೆಯ ವ್ಯಾಪ್ತಿಗೆ ಬರುವ ಯಾವುದೇ ಸಾರ್ವಜನಿಕ ಪ್ರಾಧಿಕಾರವಾಗಿರಲಿ— ಮಾಹಿತಿ ಕೇಳಿದ ವ್ಯಕ್ತಿ ನಿಮ್ಮ ಶತ್ರುವಲ್ಲ. ಅವರು ನಿಮ್ಮ ವಿರುದ್ಧ ವೈಯಕ್ತಿಕ ಹೋರಾಟ ಮಾಡುತ್ತಿದ್ದಾರೆ ಎಂದೇ ಅರ್ಥವಲ್ಲ. ಅವರು ತಮ್ಮ ಕಾನೂನುಬದ್ಧ ಮಾಹಿತಿಯ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ನಿಮ್ಮ ಕೆಲಸ ಸರಿಯಾಗಿದ್ದರೆ— ದಾಖಲೆಗಳು ಮಾತನಾಡಲಿ. ನಿಮ್ಮ ಹಾಜರಾತಿ ಸರಿಯಾಗಿದ್ದರೆ— ಹಾಜರಾತಿ ದಾಖಲೆ ಮಾತನಾಡಲಿ. ನಿಮ್ಮ ಕರ್ತವ್ಯ ನಿರ್ವಹಣೆ ಸರಿಯಾಗಿದ್ದರೆ— ಅಧಿಕೃತ ದಾಖಲೆಗಳು ಮಾತನಾಡಲಿ. ಶಾಲೆಯ ಅನುದಾನ ಸರಿಯಾಗಿ ಬಳಕೆಯಾಗಿದ್ದರೆ— ಲೆಕ್ಕಪತ್ರಗಳು ಮಾತನಾಡಲಿ. ಕಾಮಗಾರಿ ನಿಯಮಾನುಸಾರ ನಡೆದಿದ್ದರೆ— ಬಿಲ್, ವೌಚರ್ ಮತ್ತು ಕಾಮಗಾರಿ ದಾಖಲೆಗಳು ಮಾತನಾಡಲಿ.
ಸತ್ಯಕ್ಕೆ RTIಯ ಭಯವಿಲ್ಲ. ಪಾರದರ್ಶಕತೆಗೆ ಪ್ರಶ್ನೆಗಳ ಭಯವಿಲ್ಲ. ದಾಖಲೆಗಳು ಸರಿಯಾಗಿದ್ದರೆ ಉತ್ತರಿಸಲು ಹಿಂಜರಿಕೆ ಯಾಕೆ?
RTI ಒಂದು ದ್ವೇಷದ ಅಸ್ತ್ರವಲ್ಲ — ಸಾರ್ವಜನಿಕರ ಹಕ್ಕಿನ ಸಾಧನ! RTI ಕಾಯ್ದೆಯ ಉದ್ದೇಶ ಅಧಿಕಾರಿಗಳನ್ನು ಹೆದರಿಸುವುದಲ್ಲ. ಆಡಳಿತದಲ್ಲಿ ಪಾರದರ್ಶಕತೆ ತರಲು, ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವಂತೆ ಮಾಡಲು ಮತ್ತು ಸಾರ್ವಜನಿಕ ಸಂಸ್ಥೆಗಳ ಉತ್ತರದಾಯಕತೆಯನ್ನು ಹೆಚ್ಚಿಸಲು RTI ಒಂದು ಮಹತ್ವದ ಕಾನೂನುಬದ್ಧ ಸಾಧನ.
ಅದನ್ನು ಗೌರವಿಸೋಣ. RTI ಅರ್ಜಿದಾರರನ್ನು ಗೌರವಿಸೋಣ. ಪ್ರಶ್ನಿಸುವ ನಾಗರಿಕರನ್ನು ಶತ್ರುಗಳೆಂದು ನೋಡದೆ, ಪ್ರಜಾಪ್ರಭುತ್ವದ ಭಾಗವಹಿಸುವ ನಾಗರಿಕರೆಂದು ನೋಡೋಣ. ಪ್ರಶ್ನಿಸುವ ಹಕ್ಕು — ಸಾರ್ವಜನಿಕರ ಹಕ್ಕು! ಮಾಹಿತಿ ನೀಡುವುದು — ಕಾನೂನುಬದ್ಧ ಜವಾಬ್ದಾರಿ! ಪಾರದರ್ಶಕ ಆಡಳಿತ — ಪ್ರಜಾಪ್ರಭುತ್ವದ ಶಕ್ತಿ!
RTIಗೆ ಹೆದರಬೇಡಿ — RTIಯನ್ನು ಅರ್ಥಮಾಡಿಕೊಳ್ಳಿ, ಬಳಸಿಕೊಳ್ಳಿ, ಗೌರವಿಸಿ!
Moidin Kutti State President Karnataka State SDMC Co-Ordination Central Forum (R.)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.