ಬಂಟ್ವಾಳ (www.vknews.in) : ಇಂದಿನ ಬದಲಾಗುತ್ತಿರುವ ಸಾಮಾಜಿಕ ಪರಿಸರದಲ್ಲಿ ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸುವುದು, ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಅವರೊಂದಿಗೆ ಆರೋಗ್ಯಕರ ಸಂಬಂಧವನ್ನು ಬೆಳೆಸುವ ನಿಟ್ಟಿನಲ್ಲಿ ಆಫ್ಜಲ್ ಮೆಮೋರಿಯಲ್ ಎಜುಕೇಷನಲ್ &ವೆಲ್ಫೇರ್ ಟ್ರಸ್ಟ್ ಅದೀನದಲ್ಲಿ ಕಾರ್ಯಚರಿಸುತ್ತಿರುವ ಹವ್ವಾಸ್ ಇಸ್ಲಾಮಿಕ್ ಅಕಾಡಮಿ ವತಿಯಿಂದ ಪೋಷಕರಿಗಾಗಿ ವಿಶೇಷ Parenting Training ಕಾರ್ಯಗಾರ ದಿನಾಂಕ 02.09.2026 ರಂದು ಆಯೋಜಿಸಲಾಗಿದೆ.ಎಂದು ಪ್ರಧಾನ ಕಾರ್ಯದರ್ಶಿ ಫಾತಿಮಾ ಜೋಹರ ಪೊನ್ನೋಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ಮನೋಭಾವ, ಅವರ ವರ್ತನೆಯ ಹಿಂದಿರುವ ಕಾರಣಗಳು, ಮಕ್ಕಳೊಂದಿಗೆ ಪರಿಣಾಮಕಾರಿ ಸಂವಹನ, ಶಿಸ್ತು ಮತ್ತು ಸ್ನೇಹದ ಸಮತೋಲನ, ಮೊಬೈಲ್ ಹಾಗೂ ಡಿಜಿಟಲ್ ಜಗತ್ತಿನ ಸವಾಲುಗಳು, ಮಕ್ಕಳ ಆತ್ಮವಿಶ್ವಾಸ ಬೆಳೆಸುವುದು, ಕೌಟುಂಬಿಕ ವಾತಾವರಣದ ಮಕ್ಕಳ ವ್ಯಕ್ತಿತ್ವದ ಮೇಲಿನ ಪ್ರಭಾವ ಸೇರಿದಂತೆ ಇಂದಿನ ಪೋಷಕರಿಗೆ ಅಗತ್ಯವಿರುವ ಹಲವು ಪ್ರಮುಖ ವಿಷಯಗಳ ಕುರಿತು ನುರಿತ ಹಾಗೂ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು.
“ಮಕ್ಕಳಿಗೆ ಉತ್ತಮ ಭವಿಷ್ಯ ನೀಡಬೇಕಾದರೆ, ಮೊದಲು ಪೋಷಕರಿಗೆ ಸರಿಯಾದ ಪೋಷಕತ್ವದ ಅರಿವು ಅಗತ್ಯ” ಎಂಬ ಆಶಯದೊಂದಿಗೆ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಹೊಂದಿರುವ ಎಲ್ಲಾ ಪೋಷಕರು, ಪಾಲಕರು ಹಾಗೂ ಮಕ್ಕಳೊಂದಿಗೆ ಕೆಲಸ ಮಾಡುವ ಆಸಕ್ತರು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಹವ್ವಾಸ್ ಇಸ್ಲಾಮಿಕ್ ಅಕಾಡಮಿ ಪ್ರಾಂಶುಪಾಲರಾದ ಮುಹಮ್ಮದ್ ಇಮ್ತಿಯಾಜ್ ದಾರಣಿ ಹುದವಿ ತಿಳಿಸಿದ್ದಾರೆ
ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ: +91 73497 99058+ಮತ್ತು 91 82963 43955 ನಂಬರನ್ನು ಸಂಪರ್ಕಿಸಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.