ಮಂಗಳೂರು (www.vknews.in): ಅಲ್ ಹಿದಾಯ ಇಂಟರ್ನ್ಯಾಷನಲ್ ಚಾರಿಟೇಬಲ್ ಟ್ರಸ್ಟ್ (ರಿ), ಮರ್ದಾಳ ವತಿಯಿಂದ ಮೀಲಾದುನ್ನಬಿ ಪ್ರಯುಕ್ತ ಮರ್ದಾಳ ಜಮಾಅತ್ ವ್ಯಾಪ್ತಿಯ ಮಹಿಳೆಯರಿಗಾಗಿ ಅರಬಿಕ್ ಕ್ಯಾಲಿಗ್ರಫಿ ಸ್ಪರ್ಧೆ ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ಇಸ್ಲಾಮಿಕ್ ಕ್ಯಾಲಿಗ್ರಫಿಯನ್ನು ಸ್ವತಃ ರಚಿಸಿರಬೇಕು. ಡಿಜಿಟಲ್ ಕ್ಯಾಲಿಗ್ರಫಿ ಹಾಗೂ ಕ್ಯಾನ್ವಾಸ್ ಕ್ಯಾಲಿಗ್ರಫಿಗೆ ಅವಕಾಶ ಇರುವುದಿಲ್ಲ. ಕ್ಯಾಲಿಗ್ರಫಿ ಪೆನ್, ಕ್ಯಾಲಿಗ್ರಫಿ ಮಾರ್ಕರ್ ಅಥವಾ ಶಾಯಿಯಿಂದ ಖಲಂ ಬಳಸಿ ರಚಿಸಿದ ಕಲಾಕೃತಿಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಕ್ಯಾಲಿಗ್ರಫಿಯಲ್ಲಿ ಹೆಸರು, ವಯಸ್ಸು, ಆಧಾರ್ ನಂಬರ್ ಹಾಗೂ ಮೊಬೈಲ್ ನಂಬರ್ ನಮೂದಿಸಬೇಕು. ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವವರಿಗೆ ಬಹುಮಾನ ನೀಡಲಾಗುವುದು. ಭಾಗವಹಿಸುವವರು ತಮ್ಮ ರಚಿಸಿದ ಕ್ಯಾಲಿಗ್ರಫಿಯನ್ನು ಆಗಸ್ಟ್ 26ರೊಳಗಾಗಿ ಮರ್ದಾಳ ಸದರ್ ಉಸ್ತಾದರಿಗೆ ತಲುಪಿಸುವಂತೆ ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು: 7676611307 | 9019081608 | 9108588717
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.