ಬಂಟ್ವಾಳ (www.vknews.in): ಮರ್ಹೂಂ ಮೊಹಮ್ಮದ್ (ಮೋನಾಕ) ಅವರ ಸ್ಮರಣಾರ್ಥ ಬಂಟ್ವಾಳ ಬ್ರದರ್ಸ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಇವರ ಸಹಯೋಗದಲ್ಲಿ, ಯೆನೆಪೋಯ ಆಸ್ಪತ್ರೆ ರಕ್ತನಿಧಿ, ದೇರಳಕಟ್ಟೆ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಸೆಪ್ಟೆಂಬರ್ 2, 2026ರ ಬುಧವಾರ ಬೆಳಿಗ್ಗೆ 9:30ರಿಂದ ಮಧ್ಯಾಹ್ನ 1:00ರವರೆಗೆ ಬಂಟ್ವಾಳದ ಮೋರ್ ಶೋರೂಂ ಮುಂಭಾಗದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.
ರಕ್ತದಾನದ ಮೂಲಕ ಅಗತ್ಯವಿರುವವರಿಗೆ ನೆರವಾಗುವ ಈ ಮಾನವೀಯ ಕಾರ್ಯದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9611057966, 9632137339, 9535533154 ಸಂಖ್ಯೆಯನ್ನು ಸಂಪರ್ಕಿಸಬಹುದು. “ನಾವು ರಕ್ತ ಸಂಬಂಧಿಗಳಾಗೋಣ” ಎಂಬ ಸಂದೇಶದೊಂದಿಗೆ ಈ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.