ಮಲ್ಲೂರು(www.vknews.in): ಮಲ್ಲೂರು ಗ್ರಾಮದ ಪ್ರಮುಖ ಸಂಪರ್ಕ ಕೇಂದ್ರವಾಗಿರುವ ಮಲ್ಲೂರು ಜಂಕ್ಷನ್ನ ಬಸ್ಸ್ಟ್ಯಾಂಡ್ ಹಲವು ವರ್ಷಗಳಿಂದ ಅವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಸುಮಾರು 20 ವರ್ಷಗಳು ಕಳೆದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದಿರುವುದು ಮಲ್ಲೂರಿನ ಜನರ ದುರಂತವೇ ಸರಿ. ಪ್ರತಿದಿನ ನೂರಾರು ಜನರು ಸಂಚರಿಸುವ ಪ್ರಮುಖ ಜಂಕ್ಷನ್ ಆಗಿದ್ದರೂ, ಪ್ರಯಾಣಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿ ಕಲ್ಪಿಸಲಾಗಿಲ್ಲ. “ಮಲ್ಲೂರು ಜಂಕ್ಷನ್ ಎಲ್ಲಿ?” ಎಂದು ಇಂದಿಗೂ ಹೊರಗಿನಿಂದ ಬರುವವರು ಕೇಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಮ್ಮ ಅಭಿವೃದ್ಧಿಯ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ವರ್ಷಗಳಿಂದ ಸಮಸ್ಯೆ ಗಮನಕ್ಕೆ ಬರುತ್ತಿದ್ದರೂ, ಶಾಶ್ವತ ಪರಿಹಾರ ಮಾತ್ರ ಕಾಣುತ್ತಿಲ್ಲ. ಮಲ್ಲೂರು ಜಂಕ್ಷನ್ಗೆ ಸೂಕ್ತ ಬಸ್ಸ್ಟ್ಯಾಂಡ್, ಪ್ರಯಾಣಿಕರಿಗಾಗಿ ಅಗತ್ಯ ಸೌಲಭ್ಯಗಳು, ಸಮರ್ಪಕವಾಗಿ ಅಭಿವೃದ್ಧಿಪಡಿಸುವುದು ಅತ್ಯಗತ್ಯವಾಗಿದೆ.
ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಕೇವಲ ಮಾತುಗಳಿಗೆ ಸೀಮಿತವಾಗದೆ ಸ್ಥಳಕ್ಕೆ ಭೇಟಿ ನೀಡಿ, ಯೋಜನೆ ರೂಪಿಸಿ, ಕಾಮಗಾರಿ ಆರಂಭಿಸುವ ಮೂಲಕ ಮಲ್ಲೂರು ಜಂಕ್ಷನ್ಗೆ ಕಾಯಕಲ್ಪ ನೀಡಬೇಕು.
ಇದು ಯಾರೊಬ್ಬರ ವಿರುದ್ಧದ ಆರೋಪವಲ್ಲ. ಮಲ್ಲೂರಿನ ಜನರ ಬಹುಕಾಲದ ನ್ಯಾಯಸಮ್ಮತ ಬೇಡಿಕೆಯಾಗಿದೆ. ಮಲ್ಲೂರಿನ ಅಭಿವೃದ್ಧಿಗಾಗಿ ಪಕ್ಷ-ಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತಬೇಕಾಗಿದೆ.
“20 ವರ್ಷ ಕಾಯಲಾಗಿದೆ; ಇನ್ನೆಷ್ಟು ವರ್ಷ ಕಾಯಬೇಕು?” ಎಂಬ ಪ್ರಶ್ನೆಗೆ ಸಂಬಂಧಪಟ್ಟವರು ಉತ್ತರ ನೀಡುವ ಸಮಯ ಬಂದಿದೆ.
ಮಲ್ಲೂರು ಜಂಕ್ಷನ್ನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ, ಮಲ್ಲೂರಿಗೆ ಅದರ ಅಗತ್ಯವಿರುವ ಅಭಿವೃದ್ಧಿಯನ್ನು ಒದಗಿಸಬೇಕು ಎಂದು ರಹೀಮ್ ಮಲ್ಲೂರು vk ನ್ಯೂಸ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.