(www.vknews.in) : ಭಾನುವಾರ ಸೌದಿ ಅರೇಬಿಯಾದಲ್ಲಿ ಗಲ್ಲಿಗೇರಿಸಲ್ಪಟ್ಟ ಕಣ್ಣೂರು ಮೂಲದ ಅಬೌಟಿ ವಲ್ಲಯಿಲ್ ರವರ ನೈಜ ಕಥೆಯನ್ನು ಕೇಳಿದರೆ ಯಾರೂ ಕೂಡ ಬೆಚ್ಚಿಬೀಳದಿರಲ್ಲ.
ಡಿಸೆಂಬರ್ 2 ರಂದು, ಅಬೌಟಿ ಅವರು ರಾತ್ರಿ 11:45 ಕ್ಕೆ ರಿಯಾದ್ ವಿಮಾನ ನಿಲ್ದಾಣದಿಂದ ತಮ್ಮ ತಾಯ್ನಾಡಿಗೆ ಏರ್ ಇಂಡಿಯಾ ವಿಮಾನದಲ್ಲಿ ಹೊರಟು ಬೆಳಿಗ್ಗೆ 7 ಗಂಟೆಗೆ ಕರಿಪುರದಲ್ಲಿ ಇಳಿಯುವುದಾಗಿ ಕುಟುಂಬಗಳಿಗೆ ನೇರವಾಗಿ ತಿಳಿಸಿದ್ದರು. ಅದರಂತೆ, ಕುಟುಂಬ ಸದಸ್ಯರು ಕರಿಪುರ ವಿಮಾನ ನಿಲ್ದಾಣದಲ್ಲಿ ಅಬುಟ್ಟಿಗಾಗಿ ಕಾಯುತ್ತಿದ್ದರು. ಆದರೆ ವಿಮಾನದಲ್ಲಿ ಅಬುಟ್ಟಿಯನ್ನು ಕಾಣಲೇ ಇಲ್ಲ. ವಿಮಾನದಲ್ಲಿದ್ದ ಪ್ರತಿಯೊಬ್ಬರು ತಮ್ಮ ಕುಟುಂಬದವರೊಂದಿಗೆ ತಂತಮ್ಮ ಮನೆಗಳಿಗೆ ಸಂತೋಷದಿಂದ ಮರಳಿದರೆ, ಅಬುಟ್ಟಿ ಕುಟುಂಬ ಮಾತ್ರ ನಿರಾಶೆ ಆತಂಕದಿಂದ ಕಣ್ಣೀರಿಡುತ್ತಾ ಮನೆಗೆ ಹಿಂದಿರುಗಿತು. ಅಬುಟ್ಟಿ ವಲ್ಲಿಯಿಲ್ ಎಂಬ ವ್ಯಕ್ತಿ ಕಣ್ಮರೆಯಾದ ಬಗ್ಗೆ ತನಿಖೆ ನಡೆಸಬೇಕೆಂದು ಅವರ ಕುಟುಂಬವು ರಾಯಭಾರ ಕಚೇರಿಗೆ ದೂರು ನೀಡಿತ್ತು. ರಾಯಭಾರ ಕಚೇರಿಯು ವಲಸೆ ಇಲಾಖೆ ಮತ್ತು ರಿಯಾದ್ ವಿಮಾನ ನಿಲ್ದಾಣದಲ್ಲಿರುವ ಏರ್ ಇಂಡಿಯಾ ಕಚೇರಿಯನ್ನು ಸಂಪರ್ಕಿಸಿದಾಗ, ಮೇಲೆ ತಿಳಿಸಿದ ದಿನದಂದು ಅಂತಹ ಯಾವುದೇ ಪ್ರಯಾಣಿಕರು ಆ ವಿಮಾನದಲ್ಲಿ ಪ್ರಯಾಣಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ನಂತರ ಸಾಮಾಜಿಕ ಕಾರ್ಯಕರ್ತರ ಸಹಾಯದಿಂದ ರಿಯಾದ್ ವಿಮಾನ ನಿಲ್ದಾಣದ ಪೊಲೀಸ್ ಠಾಣೆ ಮತ್ತು ರಿಯಾದ್ನ ಆಸ್ಪತ್ರೆಗಳನ್ನು ಸಂಪರ್ಕಿಸಿ ಕಣ್ಮರೆಯಾದ ಅಬೌಟಿಗಾಗಿ ವ್ಯಾಪಕ ಹುಡುಕಾಟ ನಡೆಸಲಾಯಿತು. ಆದರೆ ಆ ಕಾಣೆಯಾದ ವ್ಯಕ್ತಿ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ.
ಐಸಿಎಫ್ ರಿಯಾದ್ ಸೇರಿದಂತೆ ಹಲವಾರು ಸಾಮಾಜಿಕ ಸಂಘಟನೆಗಳು ಅಬುಟ್ಟಿ ಅವರ ಕಣ್ಮರೆಗೆ ಸಂಬಂಧಿಸಿದಂತೆ ಅವರ ಪತ್ತೆಗಾಗಿ ತೀವ್ರ ಪ್ರಯತ್ನ ನಡೆಸಿತು. . ಕಣ್ಮರೆಯಾದ ಅಬೌಟಿ ಅವರ ಯಾವುದೇ ಮಾಹಿತಿ ಸಿಗದ ಕಾರಣ ಕಣ್ಮರೆಗೆ ಸಂಬಂಧಿಸಿದಂತೆ ರಾಯಭಾರ ಕಚೇರಿಯು ಭಾರೀ ಒತ್ತಡಕ್ಕೆ ಒಳಗಾಯಿತು. ರಾಯಭಾರ ಕಚೇರಿಯು ಸೌದಿ ವಿದೇಶಾಂಗ ಸಚಿವಾಲಯದ ಗಮನಕ್ಕೆ ಈ ವಿಷಯವನ್ನು ತಂದಿತು. ಆಗ ರಾಯಭಾರ ಕಚೇರಿ ತಂಡಕ್ಕೆ ಪೂರ್ವ ಪ್ರಾಂತ್ಯದ ಅಲ್-ಅಹ್ಸಾ ಜೈಲಿಗೆ ಭೇಟಿ ನೀಡಲು ಅವಕಾಶ ನೀಡಲಾಯಿತು. ಆ ಸಮಯದಲ್ಲಿ, ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 202 ಭಾರತೀಯರು ಅಲ್-ಅಹ್ಸಾ ಜೈಲಿನಲ್ಲಿದ್ದರು. ರಾಯಭಾರಿ ಕಚೇರಿ ಅಧಿಕಾರಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಎಲ್ಲಾ ಭಾರತೀಯ ಕೈದಿಗಳನ್ನು ಭೇಟಿಯಾಗಿ ಅವರ ಮಾಹಿತಿಯನ್ನು ದಾಖಲಿಸುತ್ತಿದ್ದ ಸಮಯದಲ್ಲಿ . ಅದೇ ಜೈಲಿನ ಒಂದು ಮೂಲೆಯಲ್ಲಿ ಮೌನವಾಗಿ, ಕೈಯಲ್ಲಿ ಗಲ್ಲವನ್ನು ಹಿಡಿದು ಕುಳಿತಿದ್ದ ಯುವಕನೊಬ್ಬನನ್ನು ಗಮನಿಸಿದ ರಾಯಭಾರಿ ಕಚೇರಿ ಅಧಿಕಾರಿಗಳು ಅವನ ಹೆಸರನ್ನು ಕೇಳಿದಾಗ ‘ಅಬೌಟಿ ವೆಲ್ಲಯಿಲ್’ ಎಂದು ಹೇಳಿದ. ರಾಯಭಾರ ಕಚೇರಿ ಮತ್ತು ಅವನ ಸಂಬಂಧಿಕರು ಸುಮಾರು ಎರಡು ವಾರಗಳಿಂದ ಹುಡುಕುತ್ತಿರುವುದು ಇದೇ ವ್ಯಕ್ತಿಯನ್ನು ಎಂಬುವುದು ಆಗ ದೃಢವಾಯಿತು.
ಜೈಲಿಗೆ ಹೋದ ನಿಯೋಗವು ಅಬೌಟಿ ಅವರೊಂದಿಗೆ ಸುಮಾರು ಹನ್ನೊಂದೂವರೆ ಗಂಟೆಗಳ ಕಾಲ ದೀರ್ಘ ಮಾತುಕತೆ ನಡೆಸಿತು. ಆಗ ತಿಳಿದು ಬಂದದ್ದು ಮಾತ್ರ ಬೆಚ್ಚಿಬೀಳಿಸುವ ಮಾಹಿತಿ.
ಓಮನ್ನಿಂದ ಅಬೌಟಿಗೆ ವಾಹನವನ್ನು ಹಸ್ತಾಂತರಿಸಿದ ವ್ಯಕ್ತಿ ತಾನು ವಿಮಾನದಲ್ಲಿ ರಿಯಾದ್ ಗೆ ಹೋಗುತ್ತಿದ್ದು, ನೀನು ಲ್ಯಾಂಡ್ ಕ್ರೂಸರ್ ಕಾರಿನೊಂದಿಗೆ ಸೌದಿ ಅರೇಬಿಯಾಕ್ಕೆ ಬರುವಂತೆ ಹೇಳುತ್ತಾರೆ. ಹೇಗೋ ರಿಯಾದ್ ವಿಮಾನ ನಿಲ್ದಾಣದಿಂದ ಕರಿಪ್ಪೂರ್ ಗೆ ಹೋಗಬೇಕಿದ್ದ ಅಬೌಟಿ ಈ ಕೆಲಸವನ್ನು ಒಪ್ಪಿಕೊಳ್ಳುತ್ತಾನೆ ಮತ್ತು ಒಮಾನ್ ನಿಂದ ತನ್ನ ಪ್ರಯಾಣವನ್ನು ಶುರು ಮಾಡುತ್ತಾನೆ. ಬರಬರುತ್ತಾ ಒಮಾನ್- ರಿಯಾದ್ ಗಡಿ ಪ್ರದೇಶದಲ್ಲಿರುವ ಉಮ್ ರಾಮೂಲ್ನಲ್ಲಿರುವ ಚೆಕ್ ಪಾಯಿಂಟ್ ನಲ್ಲಿ ಸೌದಿ ಮಾದಕವಸ್ತು ಜಾರಿ ಘಟಕವು ಅಬೌಟಿಯನ್ನು ವಶಕ್ಕೆ ತೆಗೆದುಕೊಂಡಿತು. ಅಲ್ಲಿಂದ ತಂಡವು ಬಂಧನದ ಭಾಗವಾಗಿ ಅಬೌಟಿಯನ್ನು ರಿಯಾದ್ ವಿಮಾನ ನಿಲ್ದಾಣಕ್ಕೆ ಕರೆದೊಯ್ದಿತ್ತು. ಅಬೌಟಿ ಚಲಾಯಿಸುತ್ತಿದ್ದ ಲ್ಯಾಂಡ್ ಕ್ರೂಸರ್ ಕಾರಿನ ಡಬಲ್ ಪೆಟ್ರೋಲ್ ಟ್ಯಾಂಕ್ಗಳ ಪೈಕಿ ಒಂದರಲ್ಲಿ ಮೆಥಾಂಫೆಟಮೈನ್ ಎಂದು ಕರೆಯಲ್ಪಡುವ ಸುಮಾರು 43 ಕೆಜಿ ಮಾರಕ ಮಾದಕ ವಸ್ತುವನ್ನು ಬಚ್ಚಿಡಲಾಗಿತ್ತು. ಆದರೆ ಅಬೌಟಿಗೆ ಈ ಮಾಹಿತಿ ತಿಳಿದಿರಲಿಲ್ಲ. ನಂತರ ರಾಯಭಾರ ಕಚೇರಿಯು ಅಬೌಟಿಯ ಸಂಬಂಧಿಕರಿಗೆ ಎಲ್ಲಾ ಮಾಹಿತಿಯನ್ನು ತಿಳಿಸಿತು.
ಅಲ್-ಅಹ್ಸಾ ವಿಚಾರಣಾ ನ್ಯಾಯಾಲಯವು ಅಬೌಟಿಗೆ 25 ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಮಿಲಿಯನ್ ರಿಯಾಲ್ಗಳ ದಂಡ ವಿಧಿಸಿತ್ತು. ನಂತರ, ಪಬ್ಲಿಕ್ ಪ್ರಾಸಿಕ್ಯೂಷನ್ ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿತು ಮತ್ತು ಮೇಲ್ಮನವಿ ನ್ಯಾಯಾಲಯವು ಪ್ರಾಸಿಕ್ಯೂಷನ್ನ ಮೇಲ್ಮನವಿಯನ್ನು ಅಂಗೀಕರಿಸಿತು ಮತ್ತು ಅಬೌಟಿಗೆ ಮರಣದಂಡನೆ ವಿಧಿಸಿತು. ತಿಳಿದೋ ತಿಳಿಯದೆಯೋ ಮಾದಕ ವಸ್ತು ಜಾಲಕ್ಕೆ ಬಿದ್ದರೆ, ಅವರ ಜೀವ ಬಲಿಯಾಗುತ್ತದೆ ಎಂಬ ಸಂದೇಶವನ್ನು ವಲಸಿಗರು ತಿಳಿದುಕೊಳ್ಳಬೇಕಾಗಿದೆ. ಸೌದಿ ಅರೇಬಿಯಾ ಸರಕಾರವು ಮಾದಕ ವಸ್ತು ಸಂಬಂಧಿತ ಪ್ರಕರಣಗಳಲ್ಲಿ ಯಾವುದೇ ಕರುಣೆ ತೋರಿಸುವುದಿಲ್ಲ. ಮಾದಕ ವಸ್ತುವು ಇಡೀ ಸಮಾಜವನ್ನು ನಾಶಮಾಡುವ ಮಾರಕ ವಿಷವಾಗಿದೆ. ಕ್ಷಣಿಕ ಆನಂದ ಅಥವಾ ಆರ್ಥಿಕ ಲಾಭಕ್ಕಾಗಿ ತಿಳಿದೋ ತಿಳಿಯದೆಯೋ ಅಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಸೌದಿ ಕಾನೂನು ಭಯಾನಕ ಶಿಕ್ಷೆಯನ್ನು ವಿಧಿಸುತ್ತದೆ.
ಆದುದರಿಂದ ಯಾರನ್ನೇ ದೂರದಿಂದ ನೋಡಿ ಅವರು ಒಳ್ಳೆಯಯವರೆಂದೋ ಕೆಟ್ಟವರೆಂದೋ ಸರ್ಟಿಫಿಕೆಚ್ ಕೊಡುವುದು ಅಷ್ಟು ಸುಲಭದ ಕೆಲಸವಲ್ಲ. ಆದ್ದರಿಂದ ಗಲ್ಫ್ ನಲ್ಲಿ ಉದ್ಯೋಗಕ್ಕಾಗಿ ಬಂದಿರುವ ವಲಸಿಗರೇ, ಎಚ್ಚರ. ಯಾರ್ಯಾರದೋ ವಾಹನವನ್ನು ಚಲಾಯಿಸುವ ಮೊದಲು ಎರಡೆರಡು ಬಾರಿ ಯೋಚಿಸಿ. ಒಂದೋ ಅದೇ ವಾಹನವು ನಿಮ್ಮ ಸಾವಿಗೂ ಕಾರಣವಾಗಬಹುದು. ಪರಿಚಯ ಇಲ್ಲದವರ ವಾಹನದಲ್ಲಿ ಹೋಗುವುದಾಗಲಿ ಅಥವಾ ಪರಿಚಯ ಇಲ್ಲದವರನ್ನು ನಮ್ಮ ವಾಹನದಲ್ಲಿ ಡ್ರಾಪ್ ಕೊಡುವುದಾಗಲಿ ಈ ಸನ್ನಿವೇಶದಲ್ಲಿ ಅಷ್ಟು ಒಳ್ಳೆಯದಲ್ಲ. ಆದ್ದರಿಂದ ಗಲ್ಫ್ ನಲ್ಲಿ ಉದ್ಯೋಗಕ್ಕಾಗಿ ಬಂದಿರುವ ವಲಸಿಗರೇ, ಎಚ್ಚರ. ಯಾರ್ಯಾರದೋ ವಾಹನವನ್ನು ಚಲಾಯಿಸುವ ಮೊದಲು ಎರಡೆರಡು ಬಾರಿ ಯೋಚಿಸಿ. ಒಂದೋ ಅದೇ ವಾಹನವು ನಿಮ್ಮ ಸಾವಿಗೂ ಕಾರಣವಾಗಬಹುದು. ಪರಿಚಯ ಇಲ್ಲದವರ ವಾಹನದಲ್ಲಿ ಹೋಗುವುದಾಗಲಿ ಅಥವಾ ಪರಿಚಯ ಇಲ್ಲದವರನ್ನು ನಮ್ಮ ವಾಹನದಲ್ಲಿ ಡ್ರಾಪ್ ಕೊಡುವುದಾಗಲಿ ಈ ಸನ್ನಿವೇಶದಲ್ಲಿ ಅಷ್ಟು ಒಳ್ಳೆಯದಲ್ಲ. ಯಾವ ಹುತ್ತದಲ್ಲಿ ಯಾವ ಸರ್ಪ ಇದೆಯೆಂದು ದೂರದಿಂದ ನೋಡಿ ಹೇಳಲು ಸಾಧ್ಯವಿಲ್ಲ.
-ಎಸ್.ಎ.ರಹಿಮಾನ್ ಮಿತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.