ಕಲ್ಪೆಟ್ಟ (www.vknews.in): ಎಂಡಿಎಂಎ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಝಿಕ್ಕೋಡ್ನ ಖಾಸಗಿ ಆಸ್ಪತ್ರೆಯೊಂದರ ತುರ್ತು ಆಘಾತ ಆರೈಕೆ ವಿಭಾಗದ ಮುಖ್ಯಸ್ಥರಾಗಿರುವ ವೈದ್ಯರನ್ನು ವೈತಿರಿ ಪೊಲೀಸರು ಬಂಧಿಸಿದ್ದಾರೆ.ಬಂಧಿತ ವೈದ್ಯರನ್ನು ಮಲಪ್ಪುರಂ ಜಿಲ್ಲೆಯ ಮೊರಾಯೂರ್ ಮೂಲದ ಕೆ. ಮುಹಮ್ಮದ್ ಫ್ಯಾಬಿನ್ (41) ಎಂದು ಗುರುತಿಸಲಾಗಿದೆ.
ವೈದ್ಯರು ಎಂಡಿಎಂಎಯನ್ನು ನಿಯಮಿತವಾಗಿ ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಆರೋಪಿಗಳು ಮತ್ತು ವೈದ್ಯರ ನಡುವಿನ ದೂರವಾಣಿ ಸಂಭಾಷಣೆಗಳ ವಿವರ ಹಾಗೂ ಬ್ಯಾಂಕ್ ವಹಿವಾಟಿನ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.ಈ ದಾಖಲೆಗಳ ಆಧಾರದಲ್ಲಿ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.