(www.vknews.in) : ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶಿವಕುಮಾರ್ ಹೂಟಗಳ್ಳಿ, ಕಾನೂನು ಘಟಕದ ಮುಖ್ಯಸ್ಥರಾದ ವಕೀಲರು ಮೊನಾಲಿಸಾ ಪಟ್ಟಡ, ಖಜಾಂಚಿ ಮತ್ತು ಕೊಡಗು ಉಸ್ತುವಾರಿಯಾದ ಸೌಮ್ಯ ಶ್ರೀ ಏಳನೇ ಹೊಸ ಕೋಟೆ, ಹಾಗೂ ನಮ್ಮ ಸ್ವಯಂ ಸೇವಾ ಅಧಿಕಾರಿಗಳು ಮತ್ತು ಸ್ವಯಂ ಸೇವಕರ ವತಿಯಿಂದ, MLA ಮಂತರ್ ಗೌಡ ಅವರಿಗೆ ಜನ್ಮದಿನದ ಅತ್ಯಂತ ಆತ್ಮೀಯ ಶುಭಾಶಯಗಳು ಮತ್ತು ಅಭಿನಂದನೆಗಳು.
ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರುವುದಿಲ್ಲ ಹಾಗೂ ರಾಜಕೀಯಕ್ಕು ನಮ್ಮ ಸಂಸ್ಥೆಗೂ ಸಂಬಂಧವಿಲ್ಲ, ಆದರೆ ಮಂತರ್ ಗೌಡ ಅವರು ಕೊಡಗಿನ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸಹಾಯ ಮಾಡುವ ರೀತಿ ನಿಜಕ್ಕೂ ಪ್ರಶಂಸನೀಯ, ಕೊಡಗಿನ ಜನರು ಎದುರಿಸುತ್ತಿರುವ ಕಷ್ಟಗಳನ್ನು ಕೇಳಿದಾಗ ಅವರು ನೀಡಿದ ಸ್ಪಂದನೆ ನಿಜಕ್ಕೂ ಅಪರೂಪ.
ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಂತರ್ ಗೌಡ ಅವರ ಮಾನವೀಯತೆ, ಕರುಣೆ, ಪ್ರೀತಿ, ಮತ್ತು ಜನರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವಕ್ಕೆ ನಾವು ತುಂಬಾ ಬೆಲೆ ನೀಡುತ್ತೇವೆ. ನಾವು ಮೈಸೂರುನಿಂದ ಅವರನ್ನು ನೋಡಲು ಬರುತ್ತಿದ್ದೇವೆ ಜನರ ಪಡುತ್ತಿರುವ ಕಷ್ಟಗಳನ್ನು ಅವರಿಗೆ ಮನವರಿಕೆ ಮಾಡಿಕೊಡುವ ನಮ್ಮ ಸಂಸ್ಥೆಯ ಪ್ರಯತ್ನಕ್ಕೆ ನಮಗಾಗಿ ಕಾಯುವ ಅವರ ತಾಳ್ಮೆ ಮತ್ತು ಸೌಜನ್ಯ ನಿಜಕ್ಕೂ ಅವರ ಮಾನವೀಯ ಗುಣಗಳಿಗೆ ಸಾಕ್ಷಿ.
ನಮ್ಮ ಸಂಸ್ಥೆ ಇಲ್ಲಿಯವರೆಗೆ ಮಂತರ್ ಗೌಡ ಅವರಿಂದ ಯಾವುದೇ ಆರ್ಥಿಕ ಸಹಾಯವನ್ನು ಪಡೆದಿಲ್ಲ, ಕೇವಲ ಅವರು ನಡೆದುಕೊಳ್ಳುವ ರೀತಿ, ನಮ್ಮ ಬಳಿ ಸಲಹೆಗಳನ್ನು ಪಡೆಯುವ ರೀತಿ, ಮತ್ತು ಯಾವುದೇ ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸುವ ರೀತಿ ನಮಗೆ ತುಂಬಾ ಇಷ್ಟವಾಗಿದೆ.
ಶಿವಕುಮಾರ್ ಹೂಟಗಳ್ಳಿ ಅವರು ಮಂತರ್ ಗೌಡ ಅವರ ಬಗ್ಗೆ ಅವರ ಆಸಕ್ತಿ, ಕರುಣೆ, ಮತ್ತು ಜನರ ನೋವಿಗೆ ಸ್ಪಂದಿಸುವ ರೀತಿಯ ಬಗ್ಗೆ ನಮ್ಮ ಸಂಸ್ಥೆ ಹಾಗೂ ವೈಯಕ್ತಿಕವಾಗಿ ಶಿವಕುಮಾರ್ ಹೂಟಗಳ್ಳಿ ಸ್ಥಾಪಕ ಅಧ್ಯಕ್ಷರು MLA ಮಂತರ್ ಗೌಡ ಅವರಿಗೆ ಮತ್ತೊಮ್ಮೆ ಮಾನವೀಯತೆ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಜನ್ಮದಿನದ ಶುಭಾಶಯಗಳು ಮತ್ತು ಅಭಿನಂದನೆಗಳು. ದೇವರು ಅವರಿಗೆ ಸುಖ, ಶಾಂತಿ, ನೆಮ್ಮದಿ ನೀಡಲಿ ಮತ್ತು ಅವರು ಇನ್ನೂ ಎತ್ತರದ ಸ್ಥಾನಮಾನ ಪಡೆಯುವಂತಾಗಲಿ ಎಂದು ಹಾರೈಸುತ್ತೇವೆ.
✍️ ಶಿವಕುಮಾರ್ ಹೂಟಗಳ್ಳಿ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.