ಮಂಗಳೂರು (www.vknews.in) : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ನಂದಿ ಹಿಲ್ಸ್ನಲ್ಲಿ ನೂತನ ಶೋ ರೂಂ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಂಗಳೂರಿನ ಹೆಸರಾಂತ ಭಾವ ಬಿಲ್ಡರ್ಸ್ ಮಾಲಕ ಇಸ್ಮಾಯಿಲ್, ಜೂನಿಯರ್ ಭಾವ ಬಿಲ್ಡರ್ಸ್ ಶಾಫಿನ್, ಸಾಮಾಜಿಕ ಕಾರ್ಯಕರ್ತ ರಿಯಾಝ್ ಹರೇಕಳ ಅವರು ಭಾಗವಹಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾವ ಬಿಲ್ಡರ್ಸ್ ಮಾಲಕ ಇಸ್ಮಾಯಿಲ್ ಅವರು ಕಣ್ಣಿನ ಮಹತ್ವದ ಬಗ್ಗೆ ಮಾತನಾಡಿದರು. ಕನ್ನಡಕ ಮತ್ತು ಉಡುಪುಗಳು ಶೋ ರೂಂ, ಇದು ಎರಡು ಅಗತ್ಯ ಇರುವಂತಹ ವಸ್ತು. ಪ್ರತಿಯೊಬ್ಬರೂ ಕಣ್ಣು ತಪಾಸಣೆ ಮಾಡಿ, ಕನ್ನಡಕ ಬೇಕಾದವರು ಕನ್ನಡಕ ಹಾಕಲೇಬೇಕು. ಯಾಕೆಂದರೆ ಕಣ್ಣಿನ ಜಾಗೃತಿ ಆದಷ್ಟು ಇದ್ದರೆ ಮಾತ್ರ ಮನುಷ್ಯನ ಜೀವನ ಇರುತ್ತೆ. ಕಣ್ಣಿನ ಬಗ್ಗೆ ತುಂಬಾ ಕಾಳಜಿ ಇರಬೇಕು. ಕಣ್ಣು ಇಲ್ಲದಿದ್ದರೆ ಯಾವ ಕೆಲಸವೂ ನಡೆಯುವುದಿಲ್ಲ. ಕಣ್ಣಿಗೆ ತೊಂದರೆಯನ್ನು ಅನುಭವಿಸಿದ್ದವರಿಗೆ ಅದರ ಅನುಭವ ಗೊತ್ತು. ಆದ್ದರಿಂದ ಕಣ್ಣಿನ ಬಗ್ಗೆ ತುಂಬಾ ಕಾಳಜಿ ಇರಲಿ, ಕಣ್ಣು ಇಲ್ಲದಿದ್ದರೆ ಏನು ಮಾಡಲಿಕ್ಕೆ ಸಾಧ್ಯವಿಲ್ಲ” ಎಂದು ಅವರು ನುಡಿದರು.
ಮುಂದುವರಿದು ಮಾತನಾಡಿದ ಅವರು, “ಜನರ ಪ್ರೀತಿ ವಿಶ್ವಾಸ ಪ್ರತಿಯೊಬ್ಬರು ಗಳಿಸಬೇಕು. ವ್ಯವಹಾರದಲ್ಲಿ ಶಾಂತಿ, ಸಮಾಧಾನ ಇರಬೇಕು. ಈ ವ್ಯವಹಾರ ಶುಭವಾಗಲಿ. ನಾಸಿರ್ ರವರ ಎರಡು ವ್ಯವಹಾರಕ್ಕೆ ಅಲ್ಲಾಹನು ಬರ್ಕತ್ ನೀಡಲಿ” ಎಂದು ಶುಭ ಹಾರೈಸಿದರು.
ಜೆಡಿಎಸ್ ಮಾಜಿ ಕಾರ್ಪೊರೇಟರ್ ರಮೀಜಾ ಅವರಿಂದ ಗೌರವ: ಈ ಸಂದರ್ಭದಲ್ಲಿ ಜೆಡಿಎಸ್ ಮಾಜಿ ಕಾರ್ಪೊರೇಟರ್ ರಮೀಜಾ ಅವರು ಹೂಗುಚ್ಛ ನೀಡಿ ಇಸ್ಮಾಯಿಲ್ ರವರನ್ನು ಗೌರವಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.