(www.vknews.in) : ಈ ಕಾಣುವ ಬ್ರಹ್ಮಾಂಡವು ಮೊದಲಿಗೆ ಒಂದು ಬಿಂದುವಾಗಿದ್ದು ಕಾರಣಾಂತರಗಳಿಂದ ಮಹಾಸ್ಪೋಟಗೊಂಡು ಈಗ ಕಾಣುವ ಆಕಾಶ, ಭೂಮಿ ನಕ್ಷತ್ರ ,ತಾರೆಗಳು ರೂಪುಗೊಂಡಿದೆ ಎಂದು ವಿಜ್ಞಾನವು ಸಾಬೀತುಪಡಿಸಿದೆ ಮಾತ್ರವಲ್ಲ ಖುರ್ಆನಿನ ಕೆಲವು ಸೂಕ್ತಗಳು ಇದಕ್ಕೆ ಪುಷ್ಟಿ ನೀಡುತ್ತಿವೆ.
ಪರಿಶುದ್ಧ ಖುರ್ಆನ್ ಹೇಳುತ್ತದೆ. أَوَلَمْ يَرَ الَّذِينَ كَفَرُوا أَنَّ السَّمَاوَاتِ وَالْأَرْضَ كَانَتَا رَتْقًا فَفَتَقْنَاهُمَا ۖ وَجَعَلْنَا مِنَ الْمَاءِ كُلَّ شَيْءٍ حَيٍّ ۖ أَفَلَا يُؤْمِنُونَ (ಧಿಕ್ಕಾರಿಗಳು ಅರಿತಿಲ್ಲವೇ, ಆಕಾಶಗಳು ಮತ್ತು ಭೂಮಿ ಕೂಡಿಕೊಂಡಿದ್ದವು. ಕೊನೆಗೆ ನಾವು ಅವೆರಡನ್ನೂ ಬೇರ್ಪಡಿಸಿದೆವು. ಇನ್ನು ಪ್ರತಿಯೊಂದು ಜೀವಂತ ವಸ್ತುವನ್ನೂ ನಾವು ನೀರಿನಿಂದ ಸೃಷ್ಟಿಸಿರುವೆವು. ಅವರೇನು ನಂಬುವುದಿಲ್ಲವೇ?)
ಬ್ರಹ್ಮಾಂಡದ ಉಗಮದ ಕುರಿತು ಈ ಸೂಕ್ತದಲ್ಲಿ ಕಾಣಬಹುದು.ಪ್ರಥಮವಾಗಿ ಬ್ರಹ್ಮಾಂಡವು ಒಂದು ಬಿಂದುವಾಗಿದ್ದು ನಂತರ ಬಿಸಿ ಮತ್ತು ಸಾಂದ್ರತೆ ಬಿಂದುವಿನಿಂದ ವಿಸ್ತರಣೆಗೊಂಡು ನಂತರ ಪಾರದರ್ಶಕವಾಗಿ ತಂಪಾಗಿ ನಕ್ಷತ್ರ ಹಾಗೂ ಗ್ಯಾಲಕ್ಸಿಗಳಾಗಿ ಮಾರ್ಪಾಡುಗೊಂಡಿವೆ.
ಪ್ರಖ್ಯಾತ ವಿಜ್ಞಾನಿ ಎಲ್ವಿನ್ ಹಬಲ್ ಮೊಟ್ಟ ಮೊದಲಿಗೆ 1920 ರಲ್ಲಿ ಈ ಬ್ರಹ್ಮಾಂಡದ ಸೃಷ್ಟಿ ಸುಮಾರು 12 ರಿಂದ 20 ಬಿಲಿಯನ್ ಅಥವಾ 1200-2000 ಕೋಟಿ ವರ್ಷಗಳ ಹಿಂದೆ ಪ್ರಾರಂಭವಾಗಿರಬೇಕೆಂದು ತರ್ಕಿಸಿದ್ದನು (ಹಬಲ್ಲನ ನಿಯಮ). ಆದರೆ ಇತ್ತೀಚಿನ ಸಂಶೋಧನೆಗಳು ನಮ್ಮ ಬ್ರಹ್ಮಾಂಡದ ವಿಕಾಸ ಸುಮಾರು 13.75 ಬಿಲಿಯನ್ ಅಥವಾ 1375 ಕೋಟಿ ವರ್ಷಗಳ ಹಿಂದೆ ಪ್ರಾರಂಭವಾಗಿರಬೇಕೆಂದು ತರ್ಕಿಸಿದ್ದಾರೆ. ಬಹಳಷ್ಟು ವಿಜ್ಞಾನಿಗಳು ಇದಕ್ಕೆ ಹೆಚ್ಚಿನ ಸಹಮತ ಹೊಂದಿದ್ದಾರೆ.
ಕೇವಲ ಒಮ್ಮಿಂದೊಮ್ಮೆಲೆ ಸ್ಪೋಟಗೊಂಡು ಒಮ್ಮೆಲೆ ರಚನೆಯಾದ ಕ್ರಿಯೆಯಲ್ಲ ಇದು.ಅಂದಾಜು ಸುಮಾರು ಮಿಲಿಯನ್ ವರ್ಷದಷ್ಟು ಸ್ಪೋಟಕ್ಕೂ ನಂತರದ ಕ್ರಿಯೆಗೂ ತೆಗೆದುಕೊಂಡಿದೆ. ಮಹಾ ಸ್ಪೋಟ ಸಿದ್ಧಾಂತದ ಪ್ರಮುಖ ಅಂಶಗಳು: 1. ಏಕ ಬಿಂದುವಿನಿಂದ ಆರಂಭ: ವಿಶ್ವದ ಎಲ್ಲಾ ವಸ್ತು ಮತ್ತು ಶಕ್ತಿಯು ಅನಂತ ಸಾಂದ್ರತೆ ಮತ್ತು ತಾಪಮಾನದ ಒಂದು ಅತಿ ಸಣ್ಣ ಬಿಂದುವಿನಲ್ಲಿತ್ತು. 2. ತೀವ್ರ ವಿಸ್ತರಣೆ: ಸುಮಾರು 13.8 ಶತಕೋಟಿ ವರ್ಷಗಳ ಹಿಂದೆ ಈ ಬಿಂದುವು ಅತಿ ವೇಗವಾಗಿ ವಿಸ್ತರಿಸಲು ಪ್ರಾರಂಭಿಸಿತು (ಮಹಾ ಸ್ಪೋಟ). 3. ಶೀತಲಿಕೆ ಮತ್ತು ರಚನೆ: ವಿಸ್ತರಿಸಿದಂತೆ, ಶಕ್ತಿಯು ದ್ರವ್ಯವಾಗಿ ಪರಿವರ್ತನೆಗೊಂಡಿತು. ಮೊದಲ ಪರಮಾಣುಗಳು ಮೊದಲ ಕೆಲವು ನಿಮಿಷಗಳಲ್ಲಿ ರೂಪುಗೊಂಡವು. ಸುಮಾರು 3 ಲಕ್ಷ ವರ್ಷಗಳ ನಂತರ, ಬ್ರಹ್ಮಾಂಡವು ತಂಪಾಗಿ ಪಾರದರ್ಶಕವಾಯಿತು, ಮತ್ತು ನಕ್ಷತ್ರಗಳು ಹಾಗೂ ಗ್ಯಾಲಕ್ಸಿಗಳು ರೂಪುಗೊಳ್ಳಲು ಕಾರಣವಾಯಿತು. 4. ನಿರಂತರ ವಿಸ್ತರಣೆ: ಈ ವಿಸ್ತರಣೆ ಇಂದಿಗೂ ಮುಂದುವರಿದಿದೆ, ಗ್ಯಾಲಕ್ಸಿಗಳು ಒಂದರಿಂದ ಇನ್ನೊಂದು ದೂರ ಸರಿಯುತ್ತಿವೆ(ಹಬಲ್ ನಿಯಮ)
ಬ್ರಹ್ಮಾಂಡದ ವಿಸ್ತರಣೆ (Expansion of the Universe): 1920 ರ ದಶಕದಲ್ಲಿ ಖಗೋಳಶಾಸ್ತ್ರಜ್ಞ ಎಲ್ವಿನ್ ಹಬಲ್, ಬ್ರಹ್ಮಾಂಡದಲ್ಲಿ ಅಸ್ತಿತ್ವದಲ್ಲಿರುವ ಅನ್ಯ ದೂರದ ಗ್ಯಾಲಕ್ಸಿಗಳು ನಮ್ಮಿಂದ ದೂರ ಸರಿಯುತ್ತಿವೆ ಮತ್ತು ಹೆಚ್ಚು ದೂರದಲ್ಲಿರುವ ಗ್ಯಾಲಕ್ಸಿಗಳು ವೇಗವಾಗಿ ದೂರ ಸರಿಯುತ್ತಿವೆ ಎಂಬುದನ್ನು ಗಮನಿಸಿದರು. ಇದನ್ನು ‘ಹಬಲ್ನ ನಿಯಮ’ ಎನ್ನುತ್ತಾರೆ. ಗ್ಯಾಲಕ್ಸಿಗಳಿಂದ ಬರುವ ಬೆಳಕಿನ ‘ಕೆಂಪು ಪಲ್ಲಟ’ (Redshift) ಇದನ್ನು ಸಾಬೀತುಪಡಿಸುತ್ತದೆ. ಹಬಲ್ಲನ ನಿಯಮದ ಮುಂಚೆಯೇ ಖುರ್ಆನ್ ಬ್ರಹ್ಮಾಂಡದ ವಿಸ್ತರಣೆ ಬಗ್ಗೆ ಹೇಳಿದೆ. ಪರಿಶುದ್ಧ ಖುರ್ಆನಿನಲ್ಲಿ وَالسَّمَاءَ بَنَيْنَاهَا بِأَيْدٍ وَإِنَّا لَمُوسِعُونَ (ನಾವು ಆಕಾಶವನ್ನು ಕೈಯಾರೆ ನಿರ್ಮಿಸಿರುವೆವು. ನಾವು ಅದನ್ನು ವಿಶಾಲಗೊಳಿಸುತ್ತಿರುವೆವು.) ಈ ಒಂದು ಸೂಕ್ತದಲ್ಲಿ ಗ್ಯಾಲಕ್ಸಿಗಳು,ಆಕಾಶಗಳು ವಿಸ್ತಾರಗೊಳ್ಳುತ್ತಿವೆ ಎಂದು ಮನದಟ್ಟಾಗುತ್ತದೆ.
ಬ್ರಹ್ಮಾಂಡ ವಿಸ್ತಾರವಾಗುವುದು ಎಂಬ ಖುರ್ಆನಿನ ಸೂಕ್ತಕ್ಕೆ ಮತ್ತೊಂದು ಉದಾಹರಣೆಯಿಂದ ತಿಳಿಯಬಹುದು. ಕೃಷ್ಣವೇಣಿ (ಕೋಮಾ ಬೆರೆನಿಸಸ್) ನಕ್ಷತ್ರಪುಂಜದಲ್ಲಿಯ 300 ಮಿಲಿಯನ್ ಜ್ಯೋತಿರ್ವಷ್ರ ದೂರದ ಬ್ರಹ್ಮಾಂಡಗಳ ಗುಂಪು ಸೆಕೆಂಡಿಗೆ 7200 ಕಿಮೀ ವೇಗದಿಂದ ಧಾವಿಸುತ್ತಿದ್ದರೆ, ಅಜಗರ (ಹೈಡ್ರಾ) ಪುಂಜದ (2600 ಮಿಲಿಯನ್ ಜ್ಯೋತಿರ್ವಷ್ರ ದೂರದಲ್ಲಿದೆ) ಗುಂಪು ಸೆಕೆಂಡಿಗೆ 60,000 ಕಿಮೀ ವೇಗದಿಂದ ಓಡುತ್ತಿದೆ. ಅಂದರೆ ಪ್ರತಿಯೊಂದು ಬ್ರಹ್ಮಾಂಡವೂ ನಮ್ಮಿಂದ ಮಾತ್ರವಲ್ಲ, ಪರಸ್ಪರವಾಗಿಯೂ ದೂರದೂರ ಸರಿಯುತ್ತಿವೆ ಎಂದಾಯಿತು. ಈ ವಿದ್ಯಮಾನಕ್ಕೆ ವ್ಯಾಕೋಚನಶೀಲ ವಿಶ್ವ (ಎಕ್ಸ್ಪಾಂಡಿಂಗ್ ಯೂನಿವರ್ಸ್) ಎಂದು ಹೆಸರು.
ಬ್ರಹ್ಮಾಂಡವು ಸ್ಪೋಟಗೊಂಡು ಒಮ್ಮಿಂದೊಮ್ಮೆಲೆ ಭೂಮಿಯಾಗಿ ಪರಿವರ್ತನೆಗೊಂಡಿಲ್ಲ ಎಂದು ಈಗಾಗಲೇ ನೀವು ಓದಿದ್ದೀರಿ.ಪರಿಶುದ್ಧ ಖುರ್ಆನಿನಲ್ಲಿ ثُمَّ اسْتَوَىٰ إِلَى السَّمَاءِ وَهِيَ دُخَانٌ فَقَالَ لَهَا وَلِلْأَرْضِ ائْتِيَا طَوْعًا أَوْ كَرْهًا قَالَتَا أَتَيْنَا طَائِعِينَ (ತರುವಾಯ ಅವನು ಆಕಾಶದೆಡೆಗೆ ಗಮನ ಹರಿಸಿದನು. ಅದು ಹೊಗೆಯಾಗಿತ್ತು. ಅವನು ಅದರೊಡನೆ (ಆಕಾಶದೊಡನೆ) ಹಾಗೂ ಭೂಮಿಯೊಡನೆ, ಇಷ್ಟವಿದ್ದರೂ, ಇಲ್ಲದಿದ್ದರೂ ನೀವಿಬ್ಬರೂ ಮುಂದೆ ಬನ್ನಿ ಎಂದನು. ಅವೆರಡೂ, ‘‘ನಾವು ಸಂತೋಷದಿಂದ ಬಂದಿರುವೆವು’’ ಎಂದವು.)
ಈ ಸೂಕ್ತದಿಂದ ಪರಿವರ್ತನೆಗಳ ರೀತಿಯೂ ಅಲ್ಲಾಹನು ಹೇಳಿದ್ದಾನೆ.ಬಿಂದುವಾಗಿ,ಹೊಗೆಯಾಗಿ ನಂತರ ಕೆಲವು ಸಾಂಕೇತಿಕ ಬದಲಾವಣೆಗೊಂಡು ಈಗ ಕಾಣುವ ಭೂಮಿ ಆಕಾಶ ನಿರ್ಮಾಣವಾಗಿದೆ ಎಂದು ಇದರಿಂದ ತಿಳಿಯಬಹುದು. ಬ್ರಹ್ಮಾಂಡ ನಿರ್ಮಾಣದ ಆರು ಹಂತಗಳು ಖುರ್ಆನಿನ ಮೂಲಕ ಈ ರೀತಿ ತಿಳಿಯಬಹುದು. 1. Rathq رتق(singularity) ಪ್ರಥಮವಾಗಿ ಬ್ರಹ್ಮಾಂಡ ಒಂದು ಬಿಂದುವಾಗಿತ್ತು. 2. Fathq فتق (expansions) ವಿಸ್ತರಣೆಗೊಳ್ಳುತ್ತಾ ಬರುವುದು. 3. Dukhan دخان (gaseus particles) ಅನಿಲ ಕಣಗಳಾಗಿ,ಹೊಗೆಯಾಗಿ ಮಾರ್ಪಾಡುವುದು. 4. Ithyan اتيان ( universe come into its form) ಬರುಬರುತ್ತಾ ಬ್ರಹ್ಮಾಂಡವು ಅದರ ರೂಪಕ್ಕೆ ಬರುವುದು. 5. Non living things ನಿರ್ಜೀವ ವಸ್ತುಗಳ ಉಗಮ 6. Living things ಜೀವಂತ ವಸ್ತುಗಳ ಉಗಮ
ಈ ರೀತಿ ಖುರ್ಆನಿನ ಪ್ರತಿಯೊಂದು ಸೂಕ್ತವು ಮನುಷ್ಯನನ್ನು ಚಿಂತನಾ ಲೋಕಕ್ಕೆ ಇಳಿಯಲು ಪ್ರೇರೇಪಿಸುವುದಾದರೂ ಮನುಷ್ಯನು ಅದರ ಪರಿವೇ ಇಲ್ಲದೆ ನಿದ್ರೆಯಲ್ಲಿದ್ದಾನೆ.
✍️ ಕೆ.ಎಚ್.ಇಕ್ಬಾಲ್ ನಿಝಾಮಿ ಕಿತ್ತಲೆಗಂಡಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.