ದುಬೈ (www.vknews.in) : ದುಬೈನ ಬಿಸಿನೆಸ್ ಬೇ ಪ್ರದೇಶದಲ್ಲಿರುವ ಪ್ರತಿಷ್ಠಿತ ರೀಗಲ್ ಟವರ್ನಲ್ಲಿ ಬೇ ಬೈಟ್ಸ್ ರೆಸ್ಟೋರೆಂಟ್ನ ನಾಲ್ಕನೇ ಶಾಖೆಯು ಶನಿವಾರ, ನವೆಂಬರ್ 14ರಂದು ಅದ್ದೂರಿಯಾಗಿ ಶುಭಾರಂಭಗೊಂಡಿತು.
ಖ್ಯಾತ ಕಂಟೆಂಟ್ ಕ್ರಿಯೇಟರ್ ಅಲಪ್ಪುಝಾದ ಅನ್ಸಾರಿ ಝುಹ್ರಿ ಅವರು ರಿಬ್ಬನ್ ಕತ್ತರಿಸುವ ಮೂಲಕ ನೂತನ ಶಾಖೆಯನ್ನು ಉದ್ಘಾಟಿಸಿದರು. ಬಳಿಕ ಪ್ರಾರ್ಥನೆಯೊಂದಿಗೆ ರೆಸ್ಟೋರೆಂಟ್ನ ಕಾರ್ಯಾರಂಭಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬೇ ಬೈಟ್ಸ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಉದ್ಯಮ ಮಿತ್ರರು, ಗಣ್ಯ ಅತಿಥಿಗಳು, ಹಿತೈಷಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ನೂತನ ಶಾಖೆಗೆ ಶುಭ ಹಾರೈಸಿದರು.
ಗ್ರಾಹಕರಿಗೆ ಗುಣಮಟ್ಟದ ಆಹಾರ, ಉತ್ತಮ ಸೇವೆ ಹಾಗೂ ಆತ್ಮೀಯ ಆತಿಥ್ಯವನ್ನು ನೀಡುವ ಉದ್ದೇಶದೊಂದಿಗೆ ಬೇ ಬೈಟ್ಸ್ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ. ರುಚಿಕರವಾದ ಆಹಾರ ವೈವಿಧ್ಯಗಳು, ಸ್ವಚ್ಛತೆ ಮತ್ತು ಗ್ರಾಹಕರ ತೃಪ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸಂಸ್ಥೆಯು ದುಬೈನಲ್ಲಿ ತನ್ನದೇ ಆದ ವಿಶಿಷ್ಟ ಗುರುತನ್ನು ಮೂಡಿಸುತ್ತಿದೆ. ನೂತನ ಶಾಖೆಯು ಇನ್ನಷ್ಟು ಗ್ರಾಹಕರನ್ನು ಆಕರ್ಷಿಸಿ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.