ಉಮ್ರಾ ಯಾತ್ರಾರ್ಥಿಗಳ ಸ್ವಾಗತಕ್ಕೆ ಮಕ್ಕಾ ನಗರ ಸಜ್ಜು; ಕೊವಿಡ್ ಪ್ರೊಟೊಕಾಲ್ ನೊಂದಿಗೆ ಉಮ್ರಾ ಯಾತ್ರೆಗೆ ಶೀಘ್ರವೇ ಅವಕಾಶ

ಜೆದ್ದಾ(www.vknews.in): ಕೊವಿಡ್ ಪ್ರೊಟೊಕಾಲ್ ಪಾಲಿಸಿಕೊಂಡು ನಡೆಸಿದ ಈ ಬಾರಿಯ ಹಜ್ ಕರ್ಮವು ಯಶಸ್ವಿಯಾದ ನಂತರ ಸೌದಿ ಹಜ್ ಮಂತ್ರಾಲಯವು ವಿಶ್ವಾಸಿಗಳ ಉಮ್ರಾ ಯಾತ್ರೆಗೆ ಅವಕಾಶ ನೀಡಲು ತೀರ್ಮಾನಿಸಿದೆ. ಈ ಕುರಿತು ಸುಳಿವು ನೀಡಿದ ಹಜ್ ಹಾಗೂ ಉಮ್ರಾ ಮಂತ್ರಾಲಯವು, ಶೀಘ್ರವೇ ಕೊವಿಡ್ ಪ್ರೊಟೊಕಾಲ್ ಪಾಲಿಸಿಕೊಂಡು ಉಮ್ರಾ ಯಾತ್ರೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದೆ. ಉಮ್ರಾ ವೇಳೆಯಲ್ಲಿ ಯಾತ್ರಾರ್ಥಿಗಳು ಪಾಲಿಸಬೇಕಾದ ನಿಯಮಾವಳಿಗಳನ್ನು ಮುಂದೆ ಪ್ರಕಟಿಸಲಾಗುವುದು ಎಂದು ಮಂತ್ರಾಲಯ ಸ್ಪಷ್ಟಪಡಿಸಿದೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...