ಫರಂಗಿಪೇಟೆ: ಆಧುನಿಕ ಲ್ಯಾಬ್ ವ್ಯವಸ್ಥೆಯನ್ನು ಹೊಂದಿರುವ “ಲೈಫ್ ಕೇರ್” ಹೆಲ್ತ್ ಸೆಂಟರ್ ಶುಭಾರಂಭ

ಫರಂಗಿಪೇಟೆ(www.Vknews.in):ಆಧುನಿಕ ಲ್ಯಾಬ್ ಹೊಂದಿರುವ ನೂತನ “ಲೈಫ್ ಕೇರ್” ಹೆಲ್ತ್ ಸೆಂಟರ್ ಫರಂಗಿಪೇಟೆಯಲ್ಲಿ ಸೋಮವಾರದಂದು ಶುಭಾರಂಭಗೊಂಡಿತು.


ಡಯಾಗ್ನೋಸ್ಟಿಕ್ ಲ್ಯಾಬ್ ಉದ್ಘಾಟನೆಯನ್ನು ಅಬ್ಬಾಸ್ ದಾರಿಮಿ ಪರಂಗಿಪೇಟೆ, ಫಾದರ್ ಜೆರಾಲ್ಡ್ ರೋಬೋ, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ಸೌಹಾರ್ಧಯುತವಾಗಿ ಉದ್ಘಾಟಿಸಿ ಶುಭ ಹಾರೈಸಿದರು.


ಪಾಲಿಕ್ಲಿನಿಕ್ ಉದ್ಘಾಟನೆಯನ್ನು ಆಯಿಷಾ ಅಬ್ದುಲ್ಲಾ ಅವರು ನೆರವೇರಿಸಿದರು. ಹಾಜಿ ಮೊಹಮ್ಮದ್ ಹನೀಫ್ ಜಿ ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಎಸೈ ಪ್ರಸನ್ನ ಎಂ ಎಸ್, ಡಾ. ಅಬ್ದುರ್ರಶೀದ್ ಝೈನಿ ಖಾಮಿಲ್, ಕೆ.ಕೃಷ್ಣಕುಮಾರ್ ಪೂಂಜ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಉಮ್ಮರ್ ಫಾರೂಕ್ ಮತ್ತು ಎಸ್ ಡಿ ಪಿ ಐ ರಾಷ್ಟ್ರೀಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ, ಜೆಡಿಎಸ್ ನಾಯಕ ಶಫಿ ಮೊದಲಾದವರು ಉಪಸ್ಥಿತರಿದ್ದರು.


ಶಫಿಕ್ ಮೌಲವಿ ಕುಕ್ಕಾಜೆ ಕಿರಾತ್ , ರಶೀದ್ ವಿಟ್ಲ ಸ್ವಾಗತಿಸಿ, ನಿರೂಪಿಸಿದರು. ಪಾಲುದಾರ ಆಶಿಕ್ ಕುಕ್ಕಾಜೆ, ಮುಖ್ತಾರ್ ಅಮೆಮಾರ್ ಸಹಕರಿಸಿದರು.


ಸೇವೆಗಳು:
ಇಲ್ಲಿ ಕಂಪ್ಯೂಟರೀಕೃತ ಲ್ಯಾಬ್, ಡೇ ಕೇರ್, ಇಸಿಜಿ, ನೆಬ್ಯುಲೈಝೇಶನ್, ಹೋಂ ಕಲೆಕ್ಷನ್ ಸರ್ವೀಸ್ , ಹೊಲಿಗೆ ರಹಿತ ಮುಂಜಿ ಕರ್ಮ, ವಿವಿಧ ರೋಗಳಿಗೆ ಸಂಬಂಧಿಸಿದ ಪ್ರಸಿದ್ಧ ವೈದ್ಯರ ಸಂದರ್ಶನ ಮೊದಲಾದ ಸೇವೆಗಳು ಲಭ್ಯವಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.


ಇಲ್ಲಿ ವೈದ್ಯಕೀಯ ತಜ್ಞರು, ಮಹಿಳಾ ತಜ್ಞರು, ಮಕ್ಕಳ ತಜ್ಞರು, ಚರ್ಮ ರೋಗ ತಜ್ಞರು, ಕಿವಿ, ಮೂಗು, ಗಂಟಲು ತಜ್ಞರು, ಎಲುಬು ಮತ್ತು ಮೂಗು ರೋಗ ತಜ್ಞರು ಇಲ್ಲಿ ಸೇವೆ ನೀಡಲು ಲಭ್ಯವಿದ್ದಾರೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...