ಭಾರತೀಯ ಪ್ರವಾಸಿ ಫೋರಂ ಯುಎಇ ವತಿಯಿಂದ ರಕ್ತದಾನ ಶಿಬಿರ

(www.vknews.com) : ಯುಎಇ ಯ 49 ನೆ ರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ಭಾರತೀಯ ಪ್ರವಾಸಿ ಫೋರಂ ಯುಎಇ 2020 ರ ನವೆಂಬರ್ 30 ರಂದು ರಕ್ತ ದಾನ ಶಿಬಿರವನ್ನು ದುಬೈನ ಲತಿಫಾ ಆಸ್ಪತ್ರೆಯಲ್ಲಿ ಆಯೋಜಿಸಲಾಯಿತು.

ಈ ಸಂಧರ್ಭದಲ್ಲಿ ಯುಎಇ ರಾಷ್ಟ್ರೀಯ ದಿನವನ್ನು ಗುರುತಿಸಿ ಅದನ್ನು ಅಚ್ಚುಕಟ್ಟಾಗಿ ಆಚರಿಸುವುದು ಮತ್ತು ರಕ್ತವನ್ನು ಯಾವುದೇ ಕೃತಕ ರೂಪದಲ್ಲಿ ಉತ್ಪಾದಿಸಲಾಗದ ಕಾರಣ ಅದನ್ನು ಸ್ವತಃ ಮೌಲ್ಯಯುತವಾಗಿ ದಾನ ಮಾಡುವ ಮೂಲಕ ಹಲವರ ಜೀವಗಳನ್ನು ಉಳಿಸಲು ಸಹಕಾರಿಯಾಗಬಲ್ಲದು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಾಬ್ ಖಾದರ್ ರವರು ವಹಿಸಿ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಚಾಲನೆಯನ್ನು ನೀಡಿದರು. ಭಾರತೀಯ ಪ್ರವಾಸಿ ಫೋರಂ ನ ಸದಸ್ಯರ ಮೂಲಕ ಸುಮಾರು 51 ಯುನಿಟ್ ರಕ್ತವನ್ನು ನೀಡಲಾಯಿತು . ಜನಾಬ್ ರಿಫಾಯಿ ರಕ್ತ ದಾನಿಗಳನ್ನು ,ಬೆಂಬಲಿಗರನ್ನು ಡಿಎಚ್‌ಎ ಸಿಬ್ಬಂದಿ ಮತ್ತು ಅವರ ಸದಸ್ಯರಿಗೆ ಧನ್ಯವಾದ ಅರ್ಪಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...