ಜೆದ್ದಾ(www.vknews.in): ಮಾರ್ಚ್ 2020 ರ ಕೊವಿಡ್ ಲಾಕ್ ಡೌನ್ ನಂತರದ ಅಂತರರಾಷ್ಟ್ರೀಯ ವಿಮಾನಗಳ ತಾತ್ಕಾಲಿಕ ನಿಷೇಧದ ಬಳಿಕ ಸೌದಿ ಅರೇಬಿಯಾಗೆ ಹಿಂತಿರುಗಲಾರದೇ ತಾಯ್ನಾಡಲ್ಲಿ ಸಿಲುಕಿಕೊಂಡಿರುವ ವಲಸಿಗರ ವೀಸಾವನ್ನು ವಿಸ್ತರಿಸಿ ಕೊಡಲಾಗುವುದು ಎಂದು ಸೌದಿ ಜವಾಝಾತ್ ಸ್ಪಷ್ಟ ಪಡಿಸಿದೆ.
ರೀ ಎಂಟ್ರಿಯನ್ನು ಸಾದಾಡ್ ಪಾವತಿ ವ್ಯವಸ್ಥೆಯ ಮೂಲಕ ಶುಲ್ಕವನ್ನು ಪಾವತಿಸಿದ ನಂತರ ಅಬ್ಷರ್ ಅಥವಾ ಮುಕೀಮ್ ಪ್ಲಾಟ್ಫಾರ್ಮ್ ಮೂಲಕ ವಿದ್ಯುನ್ಮಾನವಾಗಿ ವಿಸ್ತರಿಸಬಹುದು ಎಂದು ಪಾಸ್ಪೋರ್ಟ್ಗಳ ಸಾಮಾನ್ಯ ನಿರ್ದೇಶನಾಲಯ (ಜವಾಜತ್) ಸ್ಪಷ್ಟಪಡಿಸಿದೆ.
ಕಳೆದ ವರ್ಷ ಫೆಬ್ರವರಿ 25 ಮತ್ತು ಮೇ 24 ರ ನಡುವೆ ಯಾವುದೇ ಶುಲ್ಕವಿಲ್ಲದೆ ವಲಸಿಗರ ವೀಸಾ ಮಾನ್ಯತೆಯ ಅವಧಿಯನ್ನು ವಿಸ್ತರಿಸಿ ಕೊಡಲಾಗುವುದು ನಂತರದ ಅವಧಿಗೆ ಹೆಚ್ಚುವರಿ ಶುಲ್ಕ ಪಾವತಿಸುವ ಮೂಲಕ ರೀ ಎಂಟ್ರಿಯನ್ನು ವಿಸ್ತರಿಸಿ ಕೊಡಲಾಗುವುದೆಂದು ಜವಾಝಾತ್ ಪ್ರಕಟಣೆಯಲ್ಲಿ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.