ಜೆದ್ದಾ(www.Vknews.in): ಕರೋನವೈರಸ್ ಮುಂಜಾಗ್ರತಾ ಕ್ರಮಗಳ ಪಾಲನೆಯೊಂದಿಗೆ ನೆರವೇರಲಿರುವ ಈ ಬಾರಿಯ ಹಜ್ ಕರ್ಮಕ್ಕಾಗಿ ಸೌದಿ ಅರೇಬಿಯಾಗೆ ಪ್ರಯಾಣಿಸುವವರಿಗೆ ಕೊವಿಡ್ ಲಸಿಕೆ ಕಡ್ಡಾಯವಾಗಲಿದೆ. ಕೊವಿಡ್ ಲಸಿಕೆ ಹಾಕಿಸಿಕೊಂಡ ವಿದೇಶಿಗಳಿಗೆ ಹಾಗೂ ಸ್ವದೇಶಿಗಳಿಗೆ ಈ ಬಾರಿಯ ಹಜ್ ಕರ್ಮಕ್ಕೆ ಅವಕಾಶ ನೀಡಲಾಗುವುದೆಂದು ಸೌದಿ ಅರೇಬಿಯಾದ ಹಜ್ ಮಂತ್ರಾಲಯ ಸ್ಪಷ್ಟಪಡಿಸಿದೆ.
ಈ ವರ್ಷದ ಜುಲೈ ಮಧ್ಯದಲ್ಲಿ ನಡೆಯುವ ಹಜ್ ಕರ್ಮವು ಬಹಳ ಕಟ್ಟುನಿಟ್ಟಿವ ಕೊವಿಡ್ ಪ್ರೊಟೊಕಾಲ್ ಮೂಲಕ ನೆರವೇರಲಿದ್ದು, ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿದೆ. ಹಜ್ ಕರ್ಮಕ್ಕಾಗಿ ಆಗಮಿಸಿದ ಹಜ್ಜಾಜ್ ಗಳು ಕೊವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೋ ಎಂದು ಪರೀಕ್ಷಿಸಲು ವಿಮಾನ ನಿಲ್ಗಾಣದಲ್ಲಿ ಪ್ರತ್ಯೇಕ ಆರೋಗ್ಯ ತಪಾಸಣಾಕಾರನ್ನು ನೇಮಿಸಲಾಗಿದ್ದು, ಲಸಿಕೆ ಹಾಕಿಸದ ಯಾತ್ರಾರ್ಥಿಗಳಿಗೆ ಸೌದಿ ಪ್ರವೇಶವನ್ನು ನಿರಾಕರಿಸಲಾಗುವುದು ಎಂದು ಮಂತ್ರಾಲಯವು ಎಚ್ಚರಿಕೆ ನೀಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.