(www.vknews.com) : ಒಂದು ದಿನ ಹೀಗೆ ಇದ್ರೀಸ್ ನಬಿಯರು ನಡೆಯುತ್ತಿದ್ದಾಗ ಸೂರ್ಯನ ಪ್ರಖರತೆ ಸಹಿಸಲು ಸಾಧ್ಯವಿಲ್ಲದಂತಾಗಿತ್ತು.ಅತಿಯಾದ ಸುಡು ಬಿಸಿಲಿನಬೇಗೆ ಸಹಿಸಲಸಾಧ್ಯವಿತ್ತು. ಸೂರ್ಯನನ್ನು ನಿಯಂತ್ರಿಸುವ,ಸೂರ್ಯ ಬಿಸಿಲ ಭಾರವನ್ನು ಹೊತ್ತು ಕರ್ತವ್ಯ ನಿರ್ವಹಿಸುವ ಆ ಮಲಕ್ ಅದೆಷ್ಟು ಬಿಸಿ, ತಾಪ ಅನುಭವಿಸುತ್ತಿರಬಹುದು ಎಂದು ಚಿಂತಿಸಿ ಮಲಕ್ ಗಾಗಿ ದುಆ ಗೈದರು.ಬಿಸಿಲ ಪ್ರಖರತೆ ,ತಾಪವನ್ನು ಮಲಕುವಿಗೆ ಕಡಿಮೆ ಗೊಳಿಸಬೇಕೆಂದು ಅಲ್ಲಾಹ್ ನಲ್ಲಿ ಗೋಗರೆದು ದುಆ ನಡೆಸಿದರು.
ಅಂತೆಯೇ ಮಾರನೇ ದಿನದಿಂದ ಸೂರ್ಯ ನಿಯಂತ್ರಿಸುವ ಮಲಕ್ ಗೆ ಹಗುರತೆಯ ಅನುಭವವಾಯಿತು.ಪ್ರಖರತೆ, ಬಿಸಿಲ ತಾಪ ಕಡಿಮೆಗೊಂಡ ಅನುಭವವಾಗಿ ಅಲ್ಲಾಹ್ ನಲ್ಲಿ ವಿಶ್ಲೇಷಣೆ ನಡೆಸಿದರು. ಆಗ ಅಲ್ಲಾಹ್ ಆ ಮಲಕ್ ಗೆ ವಿವರಿಸಿದರು…”ಆದಮ್ ಸಂತತಿಯಲ್ಲಿ ಇದ್ರೀಸ್ ಅನ್ನುವ ನನ್ನಅಡಿಮಒಬ್ಬನಿರುವನು,ಅವನು ಮಹಾನ್ ಇಬಾದತ್ ನಡೆಸುವವನು ಆಗಿರುವನು.ಅವನ ಕೋರಿಕೆಯ ಮೇರೆಗೆ ಸೂರ್ಯ ಪ್ರಖರತೆ ಕಡಿಮೆ ಗೊಳಿಸಲಾಗಿದೆ”ಎಂದು ವಿವರಿಸಲಾಯಿತು.
ತನ್ನ ಭಾರ ಇಳಿಸಲು ಕಾರಣನಾದ ಆ ನಬಿಯನ್ನು ಬೇಟಿ ಆಗಲು ಹಾಗೂ ಸ್ನೇಹ ಬೆಳೆಸಲು ಈ ಮಲಕ್ ಗೆ ಆಸೆ ಮೂಡಿತು.ಮಲಕ್ ತಕ್ಷಣ ಅಲ್ಲಾಹ್ ನಲ್ಲಿ ಆ ವ್ಯಕ್ತಿಯ ಬೇಟಿಗಾಗಿ ಅನುಮತಿ ಕೋರಿಕೊಂಡರು….
ಅಲ್ಲಾಹ್ ನ ಅನುಮತಿಯ ಮೇರೆಗೆ ಇದ್ರೀಸ್ ನಬಿಯನ್ನು ಬೇಟಿಯಾದರು ಹಾಗೂ ಕೃತಜ್ಞತೆ ಸಲ್ಲಿಸಿದರು. ಸುಮಧುರ ಮಾತುಕತೆ ನಡೆಸಿದರು.
ಹಾಗೇ… ಇದ್ರೀಸ್ ನಬಿ ಸ.ಅ ವಿನಂತಿಯೊಂದನ್ನು ಆ ಮಲಕ್ ನ ಮುಂದಿಟ್ಟರು.ಅದೇನೆಂದರೆ, ಯಾ ಮಲಕುಗಳೆ…”ನನ್ನ ಪರವಾಗಿ ನೀವು ಮಲಕುಲ್ ಮೌತ್ ಹಾಯ್ರಾಹಿಲ್ ರನ್ನು ಬೇಟಿಯಾಗಬೇಕು.ಹಾಗೂ ನನ್ನಯ ಮರಣದ ಸಮಯವನ್ನು ದೀರ್ಘ ಕಾಲಗಳಷ್ಟು ಮುಂದೂಡುವಿಕೆಗಾಗಿ ,ನನ್ನಯ ಆಯುಷ್ಯದ ಅವಧಿಯನ್ನು ಮತ್ತೂ ಏರಿಸಿ ಕೊಡಲು ವಿನಂತಿಸಬೇಕು.”ಎಂದು ಕೇಳಿಕೊಂಡರು. ಇದ್ರೀಸ್ ನಬಿ ಗೆ ಇನ್ನೂ ಅಧಿಕ ಕಾಲ ಇಬಾದತ್ ನಡೆಸುವ ಹಾಗೂ ಇನ್ನೂ ದೀನ್ ಪ್ರಸರಿಸುವ ಬಯಕೆ ಅಧಿಕವಾಗಿತ್ತು. ಮೌತುಲ್ ಮಲಕ್ ಹಯ್ರಾಹಿಲ್ ಒಪ್ಪಿಕೊಳ್ಳುವ ಬಗ್ಗೆ ಸೂರ್ಯ ನಿಯಂತ್ರಣ ಮಲಕ್ ಸಂಶಯ ವ್ಯಕ್ತ ಪಡಿಸಿದ್ದರು ಹಾಗೂ ವಿನಂತಿಸಿಕೊಳ್ಳುವದಾಗಿ ಒಪ್ಪಿಕೊಂಡರು ಕೂಡ.
ಹಾಗೇ,ಸೂರ್ಯನ ನಿಯಂತ್ರಿಸುವ ಈ ಮಲಕ್ ಕೊನೆಗೂ ಹಯ್ರಾಹಿಲ್ ಅ. ಸ ರನ್ನು ಬೇಟಿಯಾಗಿ, ಇದ್ರೀಸ್ ಅ. ಸ ಕೋರಿಕೊಂಡ ವಿನಂತಿಗೆ ಮಧ್ಯಸ್ಥಿಕೆ ವಹಿಸಿಕೊಂಡು ನಬಿಯರ ಪರವಾಗಿ ಕೋರಿಕೊಂಡರು.
ಹಿಂದಿನ ಭಾಗಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ…
ಮುಂದುವರೆಯುವುದು….
– ಸಾರ ಅಲಿ, ಪರ್ಲಡ್ಕ, ಪುತ್ತೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.