(www.vknews.com) : ಎಪ್ರಿಲ್ 29 ಬುಧವಾರ 2021: ಕಳೆದ ಏಳು ವರ್ಷಗಳಿಂದ ಚಾಲ್ತಿಯಲ್ಲಿರುವ ದಣಿವರಿಯದ ಸೇವೆಗೆ ಇದೀಗ ಎಂಟು ವಸಂತಗಳು.
ಎಲ್ಲೋ ಹುಟ್ಟಿ ಬೆಳೆದ ಒಂದು ಸಣ್ಣ ಸಂಸ್ಥೆ ಇದೀಗ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಚಾಲ್ತಿಯಲ್ಲಿದೆ.ಎಲ್ಲೇ ರಕ್ತ ಬೇಡಿಕೆ ಅವಶ್ಯಕತೆಯು ಕಂಡುಬಂದರೂ ಮೊದಲ ಕರೆ ಬ್ಲಡ್ ಡೋನರ್ಸ್ ಮಂಗಳೂರು (ರಿ)ಸಂಸ್ಥೆಗೆ ಇಷ್ಟೊಂದು ವಿಶ್ವಾಸ ಇಷ್ಟೊಂದು ನಂಬಿಕೆ ಮತ್ತು ಗೌರವದಿಂದ ಕಂಡು, ಜನರು ಈ ಸಂಸ್ಥೆಯನ್ನು ಪ್ರೋತ್ಸಾಹಿಸಿದ್ದಾರೆ.
ಜನರ ಸಹಕಾರ ಪ್ರೋತ್ಸಾಹ ಮತ್ತು ಸಹಾಯದ ಕಾರಣ ಈ ಸಂಸ್ಧೆಯು ಇಷ್ಟು ಎತ್ತರಕ್ಕೆ ಬೆಳೆದು ನಿಂತಿದೆ.ಅದಕ್ಕೆ ಪೂರಕವಾಗಿ ರೋಗಿಗಳಿಗೆ ತುರ್ತು ರಕ್ತವನ್ನು ಕ್ಷಣ ಮಾತ್ರದಲ್ಲಿಯೇ ಪೂರೈಸಿಕೊಡುವ ಮಹೋನ್ನತ ಕಾರ್ಯವನ್ನು ನಮ್ಮ ಸಂಸ್ಥೆಯ ಕಾರ್ಯ ನಿರ್ವಾಹಕರು ನಿಸ್ವಾರ್ಥವಾಗಿ ನಿರ್ವಹಿಸುತ್ತಿದ್ದಾರೆ.
ಕೇವಲ ರಕ್ತದಾನಕ್ಕೆ ಸೀಮಿತಗೊಳ್ಳದೆ ಸಮಾಜಸೇವೆ ,ಸೂರಿಲ್ಲದವರಿಗೆ ಸೂರು, ಅನಾಥ ನಿರ್ಗತಿಕರಿಗೆ ನೆರವು, ಬಡವರಿಗೆ ಸಹಾಯಧನ ಮತ್ತು ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ, ವಿಶೇಷ ಮೆಡಿಕಲ್ ಹೆಲ್ಪ್ ಡೆಸ್ಕ್ ಮುಖೇನ ಕೋವಿಡ್ ಹಾಗೂ ಇತರ ಸಮಯದಲ್ಲಿ ರೋಗಿಗಳ ದಾಖಲಾತಿ ಹಾಗೂ ಡಿಸ್ಚಾರ್ಜ್ ಗೆ ಸಹಕಾರ ,ಲಾಕ್ ಡೌನ್ ವೇಳೆ ಔಷಧಿ ವಿತರಣೆ ,ವಿದೇಶದಲ್ಲಿ ಸಂಕಷ್ಚದಲ್ಲಿರುವ ಅನಿವಾಸಿ ಭಾರತೀಯರಿಗೆ ನೆರವು ಎಂಬಿತ್ಯಾದಿ ಸಮಾಜಮುಖಿ ಸೇವೆಗಳ ಮೂಲಕ ಗುರುತಿಸಿಕೊಂಡು ಜನಮನ್ನಣೆ ಗಳಿಸಿದೆ.
ಈ ಸಂಸ್ಥೆಯಲ್ಲಿ ಹಗಲಿರುಳು ದುಡಿಯುತ್ತಿರುವ ಪ್ರತಿಯೊಬ್ಬ ಕಾರ್ಯನಿರ್ವಾಹಕ ನಿಗೂ, ಹಾಗೂ ರಕ್ತ ಪೂರೈಕೆ ವಿಚಾರದಲ್ಲಿ ಸಹಕರಿಸುತ್ತಿರುವ ಪ್ರತಿಯೊಬ್ಬ ಸದಸ್ಯನಿಗೂ, ನಮ್ಮ ಜೊತೆ ಕೈಜೋಡಿಸುತ್ತಿರುವ ಎಲ್ಲಾ ನಮ್ಮ ಸಂಘ ಸಂಸ್ಥೆಯ ಪದಾಧಿಕಾರಿಗಳಿಗೂ ,ಹಿತೈಷಿಗಳಿಗೂ ಎಲ್ಲಾ ಆಸ್ಪತ್ರೆಗಳ ರಕ್ತ ನಿಧಿಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳಿಗೂ ಈ ದಿನದ ಶುಭಾಶಯಗಳನ್ನು ಕೋರುತ್ತಿದ್ದೇವೆ.
ಅಷ್ಠ ವಾರ್ಷಿಕದ ಸಂಭ್ರಮವನ್ನು ಸಕಾಲಿಕ ಸನ್ನಿವೇಶದ ಮಧ್ಯೆ ಆಚರಿಸಲಾಗುತ್ತಿಲ್ಲ ಆದರೂ ಅಷ್ಟ ದಿಕ್ಕುಗಳಿಗೂ ಪಸರಿಸಿದ ನಮ್ಮ ಸಂಸ್ಥೆ ಇದೀಗಾಗಲೇ ಜನರ ಮನದಂಗಳದಲ್ಲಿ ಮನೆ ಮಾತಾಗಿದೆ ಎಂಬುದರಲ್ಲಿ ಬಹಳ ಹೆಮ್ಮೆ ಮತ್ತು ಅಭಿಮಾನವಿದೆ.
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.