ಕುವೈತ್ (ವಿಶ್ವ ಕನ್ನಡಿಗ ನ್ಯೂಸ್) : ಮಹಾಮಾರಿ ಕೊರೊನಾ ಸಂಕಷ್ಟದ ವೇಳೆಯಲ್ಲಿ ಹಲವು ರಾಷ್ಟ್ರಗಳು ಭಾರತಕ್ಕೆ ಸಹಾಯ ಹಸ್ತ ಚಾಚಿದೆ. ಇದೀಗ ಈ ಪಟ್ಟಿಗೆ ಕುವೈಟ್ ಸಹ ಸೇರಿದೆ.
ಈ ಮೊದಲು ಅಮೆರಿಕ, ರಷ್ಯಾ, ಸೌದಿ ಅರೇಬಿಯಾ ಸೇರಿ ಹಲವು ರಾಷ್ಟ್ರಗಳು ಭಾರತಕ್ಕೆ ವೈದ್ಯಕೀಯ ಪರಕರಗಳನ್ನು ನೀಡಿ ಸಹಾಯಸ್ತ ನೀಡಿ, ಭಾರತದ ಕೋವಿಡ್ ಹೋರಾಟಕ್ಕೆ ಬೆಂಬಲ ಸೂಚಿಸಿದೆ.
ಇದೇ ವೇಳೆ ಕುವೈತ್ ಕೂಡ ಭಾರತದ ಸಹಾಯಕ್ಕೆ ದೌಡಾಯಿಸಿದ್ದು, ವೈದ್ಯಕೀಯ ಪರೀಕರಗಳನ್ನು ಕಳಿಸಿಕೊಟ್ಟಿದೆ. ಆಕ್ಸಿಜನ್ ಸಿಲಿಂಡರ್ ಹಾಗೂ ಕಾನ್ಸನ್ಟ್ರೇಟರ್ ಮತ್ತು ವೆಂಟಿಲೇಟರ್ಗಳನ್ನು ತುಂಬಿದ ವಿಮಾನ ಕುವೈತ್ನಿಂದ ದೆಹಲಿಗೆ ಬಂದಿಳಿದಿದೆ. ಇದನ್ನು ಪರಿಶೀಲನೆ ಮಾಡಿದ ಬಳಿಕ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಂಚಿಕೆ ಮಾಡಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.