ಅಬುಧಾಬಿ (ವಿಶ್ವ ಕನ್ನಡಿಗ ನ್ಯೂಸ್) : ಕೋವಿಡ್ ಸುರಕ್ಷತಾ ಕ್ರಮವಾಗಿ ಯುಎಇ ಯಾದ್ಯಂತ ಈದ್ ಅಲ್ ಫಿತರ್ ಕೂಟಗಳನ್ನು ನಿಷೇಧಿಸಲಾಗಿದೆ ಎಂದು ಅಬುಧಾಬಿ ಪೊಲೀಸರು ಪ್ರಕಟಿಸಿದ್ದಾರೆ.
ಅಂತಹ ಕೂಟಗಳಿಗೆ ಆತಿಥ್ಯ ವಹಿಸುವವರಿಗೆ 10,000 ದಿರ್ಹಾಂ ಮತ್ತು ಪಾಲ್ಗೊಂಡ ಪ್ರತಿಯೊಬ್ಬನಿಗೂ 5,000 ದಿರ್ಹಾಂ ದಂಡ ವಿಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಸ್ಕ್ ಬಳಕೆ ಮತ್ತು ಸಾಮಾಜಿಕ ದೂರವಿರಿಕೆ ಸೇರಿದಂತೆ ಎಲ್ಲಾ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಅಬುಧಾಬಿ ಪೊಲೀಸರು ಕರೆ ನೀಡಿದರು. ಆರೋಗ್ಯ ಮತ್ತು ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಸಾಮಾಜಿಕ ಅಭ್ಯಾಸಗಳನ್ನು ತಪ್ಪಿಸಬೇಕೆಂದು ಪೊಲೀಸರು ನಿವಾಸಿಗಳನ್ನು ಕೋರಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.