ಮಂಗಳೂರು (www.vknews.com) : ಮಂಗಳೂರಿನ ನಲ್ಲಿ ಐಬೆಕ್ ಇಂಟೆರ್ ನ್ಯಾಶನಲ್ ಸಂಸ್ಥೆಯು ಬ್ಯಾರಿ ಭಾಷೆಯ ಮೂಲಕ ಇಂಗ್ಲಿಷ್ ಕಲಿಯುವ ಒಂದು ವಿನೂತನವಾದ ಆನ್ ಲೈನ್ ಕಾರ್ಯಕ್ರಮಕ್ಕೆ ರವಿವಾರ ಚಾಲನೆ ನೀಡಿದೆ.
ಸಂಸ್ಥೆಯ ನಿರ್ದೇಶಕರಾದ, ಗ್ಲೊಬಲ್ ಟೀಚರ್ ಅವಾರ್ಡ್ ಖ್ಯಾತಿಯ ಮೊಹಮ್ಮದ್ ರಿಫಾಯಿ ಇದರಿಂದಾಗುವ ಪ್ರಯೋಜನವನ್ನು ವಿವರಿಸುತ್ತಾ, ಇದರಿಂದ ಮುಖ್ಯವಾಗಿ ಬ್ಯಾರಿ ಮಾತನಾಡುವವರಿಗೆ ಮನೆಯೊಳಗಿದ್ದುಕೊಂಡೇ ಅನ್ ಲೈನಿನಲ್ಲಿ ಇಂಗ್ಲಿಷ್ ಕಲಿಯುವ ಸರಳ ವಿದಾನ ವನ್ನು ಒತ್ತಿ ಹೇಳಿದರು.
ಪೆಂಡಾಮಿಕ್ ಅವದಿಯಲ್ಲಿ ಮಕ್ಕಳಿಗೆ ಮನೆಯಲ್ಲೇ ಆನ್ ಲೈನು ಶಿಕ್ಷಣವಾದ ಕಾರಣ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮಗಳಲ್ಲಿ ಕಲಿಯುತ್ತಿರುವ ವಿಧ್ಯಾರ್ಥಿಗಳ ಹಲವಾರು ರಕ್ಷಕರಿಗೆ ತಮ್ಮ ಮಕ್ಕಳಿಗೆ ಕಲಿಕೆಯಲ್ಲಿ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ ಕಾರಣ ಇಂಗ್ಲಿಷ್ ಬಾರದಿರುವುದು. ತಾಯಿಯೇ ಮಗುವಿಗೆ ಮೊದಲ ಗುರು. ಆದ್ದರಿಂದ ಹೆತ್ತವರಿಗೆ ತಮ್ಮ ಮಕ್ಕಳಿಗೆ ಹೇಳಿಕೊಡುವಷ್ಟು ಇಂಗ್ಲಿಷಿನ ಅಗತ್ಯ ಇದೆ.
ಸ್ವದೇಶದಲ್ಲಿರಲಿ ಗಲ್ಫ್ ದೇಶದಲ್ಲಿರಲಿ ಉದ್ಯೋಗಿಗಳಿಗೆ ನಿತ್ಯವೂ ತನ್ನ ಕಾರ್ಯ ಕ್ಷೇತ್ರಗಳಲ್ಲಿ ವ್ಯವಹರಿಸುವಷ್ಟು ಮತ್ತು ಉದ್ಯೋಗಾಕಾಂಕ್ಷಿ ಗಳಿಗೆ ಸಂದರ್ಶನ ಎದುರಿಸುವಲ್ಲಿಯೂ ಇಂಗ್ಲಿಷ್ ನ ಅನಿವಾರ್ಯತೆ ಇದೆ. ಇಂಗ್ಲಿಷ್ ಗೆ ಔದ್ಯೋಗಿಕವಾಗಿಯೂ, ಶೈಕ್ಷಣಿಕವಾಗಿಯೂ, ವ್ಯಾವಹಾರಿಕವಾಗಿಯೂ ತನ್ನದೇ ಮಹತ್ವ ಇರುವುದು ಸಾಮಾನ್ಯರಿಗೂ ತಿಳಿದ ವಿಚಾರ.
ಮನೋ ವಿಜ್ನಾನ ಮತ್ತು ಭಾಷಾ ಶಾಸ್ತ್ರದ ಸಂಪನ್ಮೂಲದ ಸಹಾಯ ದಿಂದ ಭಾಷಾ ಕಲಿಕೆಯಲ್ಲಿ ಅವೆರಡರ ಮಹತ್ವದ ಹಿನ್ನಲೆಯಲ್ಲಿ ಹಲವಾರು ಚಟುವಟಿಕೆಗಳ ಮೂಲಕ ಇಂಗ್ಲಿಷನ್ನು ಆನ್ ಲೈನಿನಲ್ಲಿ ಕಲಿಸಲಾಗುತ್ತದೆ. ಇದೊಂದು ಇಂಟೆರ್ಯಾಕ್ಟಿವ್ ಕಾರ್ಯಕ್ರಮವಾಗಿದೆ. ವಿದೇಶಗಳಲ್ಲಿರುವ ಬ್ಯಾರಿ ಭಾಷಿಗರಿಗೂ ತನ್ನ ಸ್ವಂತ ಭಾಷೆಯ ಮೂಲಕ ಇಂಗ್ಲಿಷ್ ಕಲಿಯುವ ಒಂದು ಉತ್ತಮ ಅವಕಾಶ ಇದಾಗಿದೆ. ಪುರುಷರಿಗೂ ಮಹಿಳೆಯರಿಗೂ ಪ್ರತ್ಯೇಕ ಮತ್ತು ಅನುಕೂಲವಾಗುವಂತಹ ಬ್ಯಾಚುಗಳು ಲಭ್ಯವಿರುತ್ತದೆ.
ದೇಶ ವಿದೇಶಗಳಲ್ಲಿ ಶಿಕ್ಷಕರಾಗಿ ಅನುಭವ ವಿರುವ ಶಿಕ್ಷಕರಾದ ಗ್ಲೊಬಲ್ ಟೀಚರ್ ಅವಾರ್ಡ್ ಕ್ಯಾತಿಯ ಮೊಹಮ್ಮದ್ ರಿಫಾಯಿ ಮತ್ತು ಅಬುಬಕರ್ ಅವರು ಆನ್ ಲೈನು ತರಗತಿಗಳನ್ನು ನಡೆಸಿಕೊಡುತ್ತಾರೆ.
ಕೋವಿಡ್ ನಿರ್ಧೇಶನಗಳು ಜಾರಿಯಲ್ಲಿರುವುದರಿಂದ ಖಾಸಗಿ ಸ್ಥಳದಲೇ ಬಿಡುಗಡೆ ಕಾರ್ಯ ನೆರವೇರಿತು.
ಪ್ರಥಮ ಬ್ಯಾಚು ಪ್ರಾರಂಭ ದಿನಾಂಕ : 17-05-2021
ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಸಂಪರ್ಕಿಸಿರಿ: ಎಜು ಕಂಸಲ್ಟೆಂಟ್ ಎಂಡ್ ಇಂಗ್ಲಿಷ್ ಲ್ಯಾಂಗ್ವಿಜ್ ಟ್ರೈನರ್: 8867039777, 8867038777
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.