ಜೆದ್ದಾ(www.vknews.in): ನಾಳೆಯಿಂದ ಸೌದಿ ಅರೇಬಿಯಾದ ಭೂ, ಜಲ ಹಾಗೂ ವಾಯು ಮಾರ್ಗಗಳು ಪುನರಾರಂಭಗೊಳ್ಳಲಿದ್ದು, ಬಹರೈನ್ ನಿಂದ ಕಿಂಗ್ ಫಹದ್ ಕಾಸ್ ವೇ ಮೂಲಕ ಸೌದಿ ಅರೇಬಿಯಾ ಪ್ರವೇಶಿಸುವ ವಿದೇಶಿಗಳಿಗೆ ಕೊವಿಡ್ ಪಿಸಿಆರ್ ಟೆಸ್ಟ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ ಎಂದು ಕಾಸ್ ವೇ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಕ್ಕೆ 72 ತಾಸುಗಳ ಮೊದಲು ಮಾಡಿದ ಕೊವಿಡ್ ಪರೀಕ್ಷೆಯ ನೆಗೆಟಿವ್ ರಿಪೋರ್ಟ್ ವಿದೇಶಿಗಳು ತಮ್ಮ ಜೊತೆ ಕೊಂಡೊಯ್ಯಬೇಕಾಗಿಯೂ, ಸೌದಿ ನಾಗರೀಕರಿಗೆ ಕೊವಿಡ್ ಪರೀಕ್ಷೆ ಮಾಡಬೇಕಾದ ಅಗತ್ಯವಿಲ್ಲ ಎಂದೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಾಸ್ ವೇಯ ಬಲ ಬದಿಯ ಟ್ರ್ಯಾಕ್ ವಿದೇಶಿಗಳಿಗೂ ಎಡ ಬದಿಯ ಟ್ರ್ಯಾಕ್ ಸ್ವದೇಶಿಗಳಿಗೆ ಮೀಸಲಿಡಲಾಗಿದೆ.
ಕಾಸ್ ವೇ ಮೂಲಕ ಸೌದಿ ಪ್ರವೇಶಿಸುವವರಿಗೆ ಇನ್ಸ್ಟಿಟ್ಯೂಷನಲ್ ಕ್ವಾರೆಂಟೈನ್ ಕಡ್ಡಾಯವಾಗಿದ್ದು, ಇದಕ್ಕೆ ತಗಲುವ ವೆಚ್ಚವನ್ನು ಪ್ರಯಾಣಿಕರಿಂದ ಹೇಗೆ ವಸೂಲಿ ಮಾಡಲಾಗುವುದೆಂಬ ಕುರಿತು ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.