(www.vknews.com) : ಸರಳ ವ್ಯಕ್ತಿತ್ವ, ನೇರ ನಡೆ ದಿಟ್ಟ ನುಡಿಯ, ಸ್ವಲ್ಪ ಮುಂಗೋಪಿ, ಹೆಸರಿಗೆ ತಕ್ಕಂತ ಕಂಚಿನ ಧ್ವನಿ, ತುಂಬಿ ತುಳುಕುವ ಆತ್ಮವಿಶ್ವಾಸ, ಅಷ್ಟೇನೂ ದೊಡ್ಡ ಮಟ್ಟದಲ್ಲಿ ವಿದ್ಯಾಭ್ಯಾಸ ಪಡೆದಿಲ್ಲವಾದರೂ ಕೇಳಿ, ತಿಳಿದು ಅರಿಯುವ ತವಕವಿತ್ತು, ಸಮುದಾಯಕ್ಕೆ, ಸಮಾಜಕ್ಕೆ ನನ್ನಿಂದೇನಾದರೂ ಅಲ್ಪಮಟ್ಟಿನಲ್ಲಾದರೂ ಸಹಾಯ ಅಗಬೇಕೆಂಬ ಮನೋಭಾವವಿತ್ತು, ಸಂಘಟನೆಗಾಗಿ ದೇಹದಲ್ಲಿ ಜೀವ ಇರುವ ತನಕ ದುಡಿಯುವ ಅತ್ಮವಿಶ್ವಾಸ ಇತ್ತು, ಸರಿಸುಮಾರು ಇಪ್ಪತ್ತು ವರುಷಗಳ ಹಿಂದೆ ಇವರು ದಮ್ಮಾಮ್ ವಲಯ ಅಧ್ಯಕ್ಷರಾಗಿದ್ದ ಸಂದರ್ಭ ಸುನ್ನಿ ಸೆಂಟರ್ ದಮ್ಮಾಮ್ ಘಟಕದ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಜ್ ಮೂಡುತೋಟ ಇವರೊಂದಿಗೆ ನಾನು ಜೊತೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಅರಿತುಕೊಂಡಂತಹ ಕೆಲವೊಂದು ವೈಶಿಷ್ಟ್ಯಗಳು.
ವೈಯಕ್ತಿಕವಾಗಿ ಒಬ್ಬ ಸ್ನೇಹಪರ ವ್ಯಕ್ತಿತ್ವ, ಆತ್ಮವಿಶ್ವಾಸಿ, ಯಾರೊಂದಿಗೂ ವೈರತ್ವ ಕಟ್ಟಿಕೊಳ್ಳುವಂತಹ ಮನೋಭಾವ ಇರಲಿಲ್ಲ, ಮೇಲು ಕೀಳು, ಹಿರಿಯರು ಕಿರಿಯರು ಎಂಬ ಭಾವನೆ ಇರಲಿಲ್ಲ, ಘನತೆ ಗೌರವಗಳಿಂದ ಹಿಗ್ಗುವ, ಹೀಯಾಳಿಕೆಗಳಿಂದ ಕುಗ್ಗುವ, ಅಪಹಾಸ್ಯಗಳಿಗೆ ಜಗ್ಗುವ, ಬೆದರಿಕೆಗಳಿಗೆ ಬಗ್ಗುವ ಜಯಾ ಮಾನ ಅವರದ್ದಾಗಿರಲಿಲ್ಲ, ಧೀರ್ಘ ಸಮಾಲೋಚನೆಗಳ ಸಂಧರ್ಭ ಮಾತುಗಳಲ್ಲಿ ತಾನು ಬೆಳೆದು ಬಂದ ರೀತಿ, ವಾತಾವರಣ ಪ್ರತಿಬಿಂಬಿಸುತ್ತಿದ್ದರೂ ಒಬ್ಬ ಸ್ನೇಹಜೀವಿ. ಅದರೆ ಅವರಿಗೆ ಸಂಘಟನೆಯ ಬಗ್ಗೆ ಎಷ್ಟೊಂದು ಒಲವು ಇತ್ತೆಂದರೆ ಎಲ್ಲರ ಮಾತು ಕೇಳುತ್ತಿದ್ದರೂ ಅದರ ಒಳಿತು, ಭಾಧಕಗಳನ್ನು ಪರಾಮರ್ಶನೆ ಮಾಡುವುತ್ತಿರಲಿಲ್ಲ ಅಷ್ಟೊಂದು ಆತ್ಮವಿಶ್ವಾಸ ಇತ್ತು ಯಾಕೆಂದರೆ ಅವರಿಗೆ ಅವರ ಸಂಘಟನೆ, ಯತೀಮ್ ಮಕ್ಕಳು, ಅದರಲ್ಲಿ ಕಲಿಯುತ್ತಿರುವ ವಿಧ್ಯಾರ್ಥಿಗಳ ಬಗ್ಗೆ ಒಲವು ಹಾಗೂ ಅವರ ಭವಿಷ್ಯತ್ತಿನ ಬಗ್ಗೆ ಅಪಾರವಾದ ಒಳ್ಳೆಯ ಕನಸುಗಳು ಹೊಂದಿದ್ದರು.
ಧಾರ್ಮಿಕವಾಗಿ ನಾವು ಒಂದೇ ಧರ್ಮದ ಪಾಲಕರಾಗಿದ್ದರೂ ಆಚರಣೆ ಹಾಗೂ ಪರಿಪಾಲನೆಯಲ್ಲಿ ಸ್ವಲ್ಪಮಟ್ಟಿಗೆ ಭಿನ್ನತೆಗಳಿದ್ದವು, ಸೈದ್ಧಾಂತಿಕವಾಗಿ ಬಹಳಷ್ಟು ಬಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕವಾಗಿ ನಾವು ಬಹಳಷ್ಟು ಅಚ್ಚುಮೆಚ್ಚಿನವರಾಗಿದ್ದೇವೂ, ಹೌದು ಇದು ತನ್ನ ಜೀವಮಾನವಿಡೀ ತನ್ನ ಸಂಘಟನೆಗೆ ಮೀಸಲಾಗಿಟ್ಟು ಹಾಗೂ ತನ್ನಲ್ಲಿದ್ದ ಅತ್ಮವಿಶ್ವಾಸದಂತೆ ದೇಹದಲ್ಲಿ ಜೀವವಿರುವ ತನಕ ಸಂಘಟನೆಯ ಅಭಿವ್ರದ್ದಿಗಾಗಿ ದುಡಿಯುತ್ತಿರಬೇಕು ಎಂಬ ಕನಸಿನಂತೆ ಅದನ್ನು ನನಸು ಮಾಡಿ, ನಾವೆಲ್ಲರೂ ಪವಿತ್ರವಾದ ರಮಾಳಾನ್ ತಿಂಗಳಿನ ಉಪವಾಸ ವ್ರತವನ್ನು ಮುಗಿಸಿ ಸಂತೋಷದಿಂದ ಈದ್ ಅಚರಿಸುತ್ತಿರುವ ಶುಭ ಸಂಧರ್ಭದಲ್ಲಿ ನಮಗೆಲ್ಲರಿಗೂ ಗರಬಡಿತರನ್ನಾಗಿಸಿದ ಸುಧ್ಧಿ, ಅ ಸರ್ವಶಕ್ತನ ಅನುವಲ್ಲಂಘನೀಯ ಕರೆಗೆ ಓಗೊಟ್ಟು ನಮ್ನೆಲ್ಲರನ್ನೂ ದುಃಖದ ಕಡಲಿನಲ್ಲಿ ತೇಲಿಸಿ ಇಹಲೋಕವನ್ನು ತ್ಯಜಿಸಿದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಇದರ ಮೇರು ನಾಯಕ ಮರ್ಹೂಮ್ ಹತೀಮ್ ಕಂಚಿ, ಅಲ್ಲಾಹು ಅವರಿಗೆ ಸರ್ವೋನ್ನತ ದರ್ಜೆಯನ್ನು ನೀಡಿ ಜನ್ನತ್-ಉಲ್-ಫಿರ್ದೌಸನ್ನು ಕರುಣಿಸಲಿ ಆಮೀನ್.
ಅಶ್ಫಾಕ್ ಎ. ಕಾರ್ನಾಡ್,
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.