(www.vknews.com) : ಕೋವಿಡ್ ಸೋಂಕಿನಿಂದ ಸತ್ತವರ ಮೃತರಾದ ವಾರಸದಾರರಿಗೆ( ಹೆಂಡತಿ ,ಮಕ್ಕಳು,ಗಂಡ, ಮು.) ಪರಿಹಾರ ಕೊಡುವ ಪ್ರಕರಣ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮುಂದೆ ಇದೆ. ಕೇಂದ್ರ ಸರಕಾರ ಕ್ಕೆ ನೋಟಿಸ್ ಕೊಡಲಾಗಿದೆ. ಹತ್ತು ದಿನದಲ್ಲಿ ಉತ್ತರಿಸಲು ಕೇಂದ್ರ ಸರ್ಕಾಕ್ಕೆ ಕಾಲಾವಕಾಶ ನೀಡಲಾಗಿದೆ. ತೀರ್ಪು ಎದುರು ನೋಡಬೇಕು.
ಕೋವಿಡ್ನಿಂದ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಸರಕಾರ ರೂ.4 ಲಕ್ಷ ಪರಿಹಾರ ನೀಡಲಿದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಸುದ್ದಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
ಕೋವಿಡ್ನಿಂದ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಸರಕಾರ ರೂ.4 ಲಕ್ಷ ಪರಿಹಾರ ನೀಡಲಿದೆ ಎಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಹಳೆಯ ಆದೇಶ. ಆದರೆ, ಇದು ಸುಳ್ಳು ಸುದ್ದಿ.
ಸದರಿ ಪೋಸ್ಟ್ಗಳ ಜೊತೆಗೆ ಇರುವ ಅರ್ಜಿ ಫಾರ್ಮ್ನ ಮಾದರಿ ಕಳೆದ ವರ್ಷದ್ದು. ಈ ವರ್ಷ, ಇದುವರೆಗೆ ಅಂತಹ ಯಾವುದೇ ಪ್ರಸ್ತಾಪವನ್ನು ಕೇಂದ್ರ ಸರಕಾರ ಹೊರಡಿಸಿಲ್ಲ. ಈ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಎರಡು ಪ್ರತ್ಯೇಕ ಅರ್ಜಿಗಳನ್ನು ದಾಖಲಿಸಲಾಗಿದ್ದು, ಅವುಗಳ ವಿಚಾರಣೆಯೂ ನಡೆಯುತ್ತಿದೆ.
ಇಂತಹ ಪರಿಹಾರ ಪಡೆಯಲು ಸರಕಾರದ ನೀತಿಯೇ ದೊಡ್ಡ ತೊಡಕಾಗಿರುವುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.
ಏಕೆಂದರೆ, ಬಹುತೇಕ ಕೋವಿಡ್ ಸಾವುಗಳನ್ನು ಹೃದಯಾಘಾತ, ರಕ್ತದೊತ್ತಡ ಏರುಪೇರು, ಬಹು ಅಂಗಾಂಗ ವೈಫಲ್, ಪಾರ್ಶ್ವವಾಯು – ಮುಂತಾದ ಕಾಯಿಲೆಗಳಿಂದ ಉಂಟಾದ ಸಾವು ಎಂದು ವರದಿ ನೀಡಲಾಗುತ್ತಿದೆ. ಹೀಗಾಗಿ ಕಳೆದ ವರ್ಷದ ರೂ.4 ಲಕ್ಷ ಪರಿಹಾರ ಪಡೆಯಲು ಹಲವಾರು ಸಂತ್ರಸ್ತರು ವಿಫಲವಾಗಿರುವುದನ್ನು ಸರ್ವೋಚ್ಚ ಕೋರ್ಟ್ ಗಮನಕ್ಕೆ ತರಲಾಗಿದೆ.
ಕೋವಿಡ್ನಿಂದಾಗಿಯೇ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದರೂ, ಸಾವಿಗೆ ಬೇರೆ ಕಾರಣಗಳನ್ನು ನೀಡುತ್ತಿರುವುದರ ಕುರಿತೂ ವ್ಯಾಪಕ ವಿರೋಧ ವ್ಯಕ್ತವಾಗಿರುವುದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ವಿಚಾರಣೆ ಇನ್ನೂ ನಡೆಯುತ್ತಿದೆ.
ಹೀಗಾಗಿ, ಸದ್ಯ ಹರಿದಾಡುತ್ತಿರುವ ಕೋವಿಡ್ನಿಂದಾದ ಸಾವಿಗೆ ಪರಿಹಾರ ಎಂಬುದು ಸುಳ್ಳು ಸುದ್ದಿ. ಆ ಕುರಿತು ಪ್ರಸ್ತುತವಾಗಿ ಅಧಿಕೃತ ಯಾವುದೇ ಆದೇಶವಾಗಿಲ್ಲ.
ಪರಿಹಾರ ಸಿಗುತ್ತೆ ಎಂಬುದೆಲ್ಲಾ ಸುಳ್ಳು ಪರಿಹಾರ ಆದೇಶ 2020 ರಲ್ಲೇ ಸರ್ಕಾರ ಹಿಂಪಡೆದ ಆದೇಶ ಪ್ರತಿ ವಾಟ್ಸಪ್ (ಸಾಮಾಜಿಕ ಜಾಲತಾಣದಲ್ಲಿ) ವೈರಲ್ ಆಗುತ್ತಿದೆ. ಕೋವಿಡ್ಗೆ ಮೃತರಾದ ಪ್ರತಿಯೊಬ್ಬರ ಕುಟುಂಬಗಳಿಗೆ ತಲಾ 4 ಲಕ್ಷ ರು . ಪರಿಹಾರ ನೀಡುವ ಆದೇಶ ಜಾರಿ ಮಾಡಿದ ದಿನದಂದೇ ಈ ಆದೇಶವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ . ಹೀಗಾಗಿ ಮೃತ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತದೆ ಎಂಬ ಸಂದೇಶಗಳು ಸತ್ಯಕ್ಕೆ ದೂರವಾದವು ಎಂದು ಕಂದಾಯ ಇಲಾಖೆ ಸ್ಪಷ್ಟಪಡಿಸಿದೆ .
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಕೋವಿಡ್ಗೆ ಮೃತರಾದವರ ಕುಟುಂಬಗಳಿಗೆ ತಲಾ 4 ಲಕ್ಷ ರೂ ಪರಿಹಾರವನ್ನು ರಾಜ್ಯ ಸರ್ಕಾರ ನೀಡಲಿದೆ . ಈ ಬಗ್ಗೆ ಕೇಂದ್ರವು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ( ಎಸ್ಡಿಆರ್ಎಫ್ ) ಪರಿಹಾರ ನೀಡುವಂತೆ ಆದೇಶಿಸಿದೆ ‘ ಎಂಬ ಆದೇಶ ಪ್ರತಿ ವೈರಲ್ ಆಗುತ್ತಿದೆ . ಅಲ್ಲದೆ ಮೃತರ ಕುಟುಂಬದವರು ಸಲ್ಲಿಸಬೇಕಾದ ಅರ್ಜಿ ನಮೂನೆಯೂ ವೈರಲ್ ಆಗುತ್ತಿದೆ . ಇದೆಲ್ಲಾ ಸತ್ಯಕ್ಕೆ ದೂರವಾದ ಸಂಗತಿ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಪರಿಹಾರ ಸಿಗಬಹುದು ಅಥವಾ ಸಿಗದೆನೂ ಇರಬಹುದು. ನಮ್ಮ ಮುಂದೆ ಇರೋದು ಒಂದೆ ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ತಾಳ್ಮೆಯಿಂದ ಕಾಯಬೇಕು.
– ಮರಿಗೌಡ ಬಾದರದಿನ್ನಿ, ವಕೀಲರು , ಬರಹಗಾರರು, ಕುಷ್ಟಗಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.