(ವಿಶ್ವ ಕನ್ನಡಿಗ ನ್ಯೂಸ್) : ಘಾಡ ಇಸ್ಲಾಮಿಕ್ ಪರಂಪರೆಯ ಚರಿತ್ರೆ ಹೊಂದಿರುವ ಲಕ್ಷದ್ವೀಪ ದ ಸಂಸ್ಕೃತಿ, ಜನ ಜೀವನ,ನೈಸರ್ಗಿಕ ಸೌಂದರ್ಯ ವನ್ನು ಅಭಿವೃದ್ದಿ ಮತ್ತು ಪ್ರವಾಸೋದ್ಯಮದ ಕಾರಣ ನೀಡಿ ಕೇಂದ್ರ ಸರಕಾರ ನಾಶ ಪಡಿಸುವ ಷಡ್ಯಂತ್ರದ ಭಾಗವಾಗಿ ವಿವಿಧ ಜನವಿರೋಧಿ ಕಾನೂನುಗಳನ್ನು ಅನುಷ್ಟಾನ ಗೊಳಿ ಸಲು ಪ್ರಯತ್ನ ಸುತ್ತಿದ್ದು, ಸ್ಥಳೀಯ ಮತ್ತು ನೂರು ವರ್ಷಕ್ಕಿಂತಲೂ ಅಧಿಕ ಇತಿಹಾಸ ಇರುವ ಪ್ರಾಚೀನ ಮಸೀದಿ ಕಟ್ಟಡ ಮತ್ತು ದಫನ ಭೂಮಿಯನ್ನು ನಾಶ ಪಡಿಸಲು ಪ್ರಯತ್ನಿಸುತ್ತಿದೆ.ಕೇಂದ್ರ ಸರಕಾರದ ಈ ನಡೆಯನ್ನು ಸ್ಥಳೀಯ ಮತ್ತು ಕೇರಳ ರಾಜ್ಯ ನಿಯಮ ಸಭೆ ಮತ್ತು ವಿವಿಧ ರಾಜ್ಯದ ಪ್ರಮುಖರು ವಿರೋಧಿಸಿದ್ದಾರೆ.
ಈ ಬಗ್ಗೆ ತೀವ್ರ ಪ್ರತಿರೋಧ ವ್ಯಕ್ತವಾ ಗಿದೆ. ಹೋರಾಟಗಳು ನಡೆಯುತ್ತಿವೆ. ಪ್ರಸ್ತುತ ಈ ಹಂತದಲ್ಲಿ ಕೇಂದ್ರ ಸರಕಾರದ ಷಡ್ಯಂತ್ರ ವಾದ ಆರಾಧನಾಲಯದ ತೆರವು ಕ್ರಮದ ವಿರುದ್ಧ ಮುಸ್ಲಿಮ್ ಜನತೆ ಪ್ರತಿರೋಧ ವ್ಯಕ್ತ ಪಡಿಸಬೇಕಿದೇ. ಹೋರಾಟದ ಭಾಗವಾಗಿ ಸರ್ವರೂ ಆರಾಧನಾಲ ಗಳ ಸಂರಕ್ಷಣೆಗಾಗಿ ಪ್ರಾರ್ಥನೆ(ದುವಾ) ನಿರ್ವಹಿಸಬೇಕೆಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷರಾದ ಮಾಜಿ ಮೇಯರ್ ಕೆ.ಅಶ್ರಫ್ ಮನವಿ ಮಾಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.