ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕು ಲಕ್ಕೂರು ಹೋಬಳಿ ಅಲಂಬಾಡಿ ಗೇಟ್ ಸಮೀಪದ ಸಾರಂಗರಂಗ ಕೇಂದ್ರದಲ್ಲಿ ಕಷ್ಟದಲ್ಲಿರುವ ಕಲಾವಿದರಿಗೆ ಆಹಾರದ ಕಿಟ್ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾಲೂರಿನ ಜೆ.ಡಿ.ಎಸ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ಸಮಾಜ ಸೇವಕ ಜಿ.ಇ.ರಾಮೇಗೌಡ ಮಾತನಾಡಿ “ಕಲೆಯನ್ನೇ ಬದುಕಾಗಿಸಿಕೊಂಡಿರುವ ಕಲಾವಿದರ ಕಷ್ಟಕ್ಕೆ ದನಿಯಾಗುವ ನಿಟ್ಟಿನಲ್ಲಿ ಇಂದು ನಾವು ಆಹಾರದ ಕಿಟ್ ವಿತರಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಆತ್ಮಸ್ಥೈರ್ಯ ತುಂಬುವ ಮಾನವೀಯ ಕಾರ್ಯ ಮಾಡಿದ್ದೇವೆ. ನಮ್ಮಿಂದ ಬಡವರಿಗೆ, ಕಷ್ಟದಲ್ಲಿರುವವರಿಗೆ ನಿರಂತರ ಸಹಾಯ ಯಾವಾಗಲೂ ಇರುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಜನಪದ ಆಕಾಡೆಮೆ ಅಧ್ಯಕ್ಷರಾದ ಪಿಚ್ಚಳ್ಳಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ದೊಮ್ಮಲೂರು ವಿ.ದೇವರಾಜ್, ಆನಂದ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಮಸ್ವಾಮಿ ರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶ್ರೀನಾಥ್, ನೂರಾರು ಕಲಾವಿದರು ಹಾಗೂ ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.