ಮೈಸೂರು (www.vknews.com) : ಕರೋನಾ ಲಾಕ್ ಡೌನ್ ನಿಂದ ಹಲವು ಕ್ಷೇತ್ರಗಳಿಗೆ ಹೊಡೆತ ಬಿದ್ದಿದ್ದು, ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿದ ಬಡ ಜನರು ತಮ್ಮ ಒಂದು ಒತ್ತಿನ ಊಟ ಪಡೆಯಲು ಸಮಸ್ಯೆ ಎದುರಾಗಿದೆ.
ಮೈಸೂರು ಜಿಲ್ಲೆಯಲ್ಲಿ ಬಿದಿರು ಕೆಲಸ ಮಾಡುವವರು ತಮ್ಮ ದೈನಂದಿನ ದುಡಿಮೆ ನಂಬಿ ಜೀವನ ಸಾಗಿಸುತ್ತಿದ್ದರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು,
ಬಿದಿರು ಕೆಲಸ ಮಾಡಿ ಜೀವನ ಸಾಗಿಸುವ ಬೀದಿಬದಿಯಲ್ಲಿ ಮೊರ, ಏಣಿ, ಬುಟ್ಟಿ, ಚಟ್ಟ ಹೀಗೆ ಹಲವು ಬಿದಿರಿನಿಂದ ಹಲವು ರೀತಿ ಪರಿಕರಗಳನ್ನು ತಯಾರಿಸಿ ಅದರ ಮಾರಾಟದಿಂದ ಜೀವನ ಸಾಗಿಸುತ್ತಿರುವವರು ತಾವು ಅನುಭವಿಸುತ್ತಿರುವ ನೋವು ಮತ್ತು ವಾಸ್ತವ ಸ್ಥಿತಿಯನ್ನು ಮೈಸೂರಿನ ನಿವಾಸಿ ಶಶಿರೇಖಾ ರವರು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದು,ಕಷ್ಟದಲ್ಲಿ ಇರುವ ಕುಟುಂಬಗಳಿಗೆ ಸಹಾಯ ಹಸ್ತ ನೀಡುವಂತೆ ಮನವಿ ಮಾಡುವಂತೆ ಸರ್ಕಾರಕ್ಕೆ ಚಾಟಿ ಬೀಸಿದ್ದರು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಶಶಿರೇಖಾ ವಿಡಿಯೋ ಭಾರೀ ವೈರಲ್ ಆಗಿದ್ದು, ಹಲವು ನಿಸ್ವಾರ್ಥ ಸೇವಕರು ಬಿದಿರು ನಂಬಿ ಜೀವನ ಸಾಗಿಸುತ್ತಿದ್ದ ಐವತ್ತು ಕುಟುಂಬಗಳ ನೆರವಿಗೆ ಧಾವಿಸಿದ್ದಾರೆ.
ವಿಡಿಯೋ ವೀಕ್ಷಿಸಿ :
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.