ಕೋಲಾರ (ವಿಶ್ವಕನ್ನಡಿಗ ನ್ಯೂಸ್) : – ಪವಿತ್ರವಾದ ಶಿಕ್ಷಕ ವೃತ್ತಿಯನ್ನು ೩೨ ವರ್ಷಗಳ ಕಾಲ ನಡೆಸಿಕೊಂಡು ಬಂದು ಸಾವಿರಾರು ಮಕ್ಕಳ ಬಾಳಿಗೆ ಬೆಳಕು ನೀಡಿರುವ ಶಿಕ್ಷಕಿ ಸುಶೀಲಮ್ಮ ಅವರ ಸೇವೆ ಸ್ಮರಣೀಯ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ನಾಗರಾಜ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹೊಗರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೩೨ ವರ್ಷಗಳ ಕಾಲ ಸೇವೆ ನ್ನು ಸಲ್ಲಿಸಿ ಸ್ವಯಂನಿವೃತ್ತಿಯಾಗುತ್ತಿರುವ ಶಿಕ್ಷಕಿ ಸುಶೀಲಮ್ಮ ಅವರನ್ನು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಬೀಳ್ಕೊಟ್ಟ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಎಲ್ಲಾ ವೃತ್ತಿಗಳಿಗಿಂತಲೂ ಶಿಕ್ಷಕ ವೃತ್ತಿ ಶ್ರೇಷ್ಠವಾಗಿದೆ. ಸಮಾಜ ಕಟ್ಟುವ ಇಂತಹ ಕಾಯಕದ ಯೋಗ ಎಲ್ಲಗಿಗೂ ಸಿಗುವುದಿಲ್ಲ , ಅಂತಹ ವೃತ್ತಿ ಘನತೆಗೆ ಕುತ್ತಾಗದಂತೆ ೩೨ ವರ್ಷ ಸಲ್ಲಿಸಿರುವ ಸೇವೆ ಸದಾ ಜೀವನದಲ್ಲಿ ನರಳಗಾಗಿ ಕಾಯುತ್ತದೆ ಎಂದು ತಿಳಿಸಿದರು.
ಕೋವಿಡ್ನಿಂದಾಗಿ ಶಾಲೆಗೆ ಮಕ್ಕಳು ಬರುತ್ತಿಲ್ಲ ಎಂಬ ಕೊರಗು ಶಿಕ್ಷಕರನ್ನು ಕಾಡುತ್ತಿದೆ . ಆನ್ಲೈನ್ ಕ್ಲಾಸ್ ಎಂದಿಗೂ ಕಲಿಕೆಗೆ ಪೂರಕವಾಗದು ಎಂದ ಅವರು , ಗ್ರಾಮೀಣ ಮಕ್ಕಳ ಶೈಕ್ಷಣಿಕ ಹಿನ್ನಡೆಯನ್ನು ಮತ್ತೆ ಸರಿದಾರಿಗೆ ತರುವ ಹೊಣೆ ನಮ್ಮ ಶಿಕ್ಷಕರ ಮೇಲಿದ್ದು , ಬೇಗ ಕೋವಿಡ್ ಮಹಾಮಾರಿ ತೊಲಗಲಿ ಎಂದು ಪ್ರಾರ್ಥಿಸೋಣ ಎಂದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್.ನಾರಾಯಣಸ್ವಾಮಿ , ಕಾರ್ಯಾಧ್ಯಕ್ಷ ಆರ್.ನಾಗರಾಜ್ , ಜಿಲ್ಲಾ ಉಪಾಧ್ಯಕ್ಷರಾದ ಕೃಷ್ಣಪ್ಪ , ಜಿಲ್ಲಾ ಮಹಿಳಾ ಉಪಾಧ್ಯಕ್ಷ ಮಂಜುಳಾ ಮತ್ತಿತರರು ಮಾತನಾಡಿ ನಿವೃತ್ತರಾಗುತ್ತಿರುವ ಶಿಕ್ಷಕಿಗೆ ಶುಭ ಹಾರೈಸಿದರು. ಸಂಘದ ಜಿಲ್ಲಾ ಲೆಕ್ಕಪರಿಶೋಧಕಿ ರುದ್ರಮ್ಮ , ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭಾಗ್ಯಲಕ್ಷ್ಮಿ , ತಾಲ್ಲೂಕು ಸಹ ಕಾರ್ಯದರ್ಶಿಗಳಾದ ಸೋಮಶೇಖರ್ , ನಾಗವೇಣಿ , ಇತರೆ ಪದಾಧಿಕಾರಿಗಳಾದ ನಾಗರಾಜ್ , ಮುನಿರಾಜ್ , ನಾರಾಯಣಸ್ವಾಮಿ , ಮಂಜುನಾಥ್ , ಸುರೇಂದ್ರ , ವೆಂಕಟರಾಮ್ , ನಿವೃತ್ತ ಪದಾಧಿಕಾರಿ ನಾರಾಯಣಪ್ಪ ಶಾಲೆಯ ಮುಖ್ಯ ಶಿಕ್ಷಕಿ ಸರೋಜಮ್ಮ , ದೈ.ಶಿ.ಶಿಕ್ಷಕ ವೆಂಕಟೇಶ್ , ಸಹ ಶಿಕ್ಷಕರಾದ ನಾರಾಯಣಮ್ಮ , ಭಾರತಿ , ರಾಧಾ , ಮುಂತಾದವರಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.