(ವಿಶ್ವ ಕನ್ನಡಿಗ ನ್ಯೂಸ್) : ಸಾರ್ವಕಾಲಿಕ ಅತ್ಯುತ್ತಮ ಟಿ 20 ಬೌಲರ್ಗಳಲ್ಲಿ ಒಬ್ಬರಾದ ಲಸಿತ್ ಮಾಲಿಂಗ ಅವರು ಇಂಡಿಯನ್ ಪ್ರೀಮಿಯರ್ ಲೀಗ್, ಬಿಗ್ ಬ್ಯಾಶ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್ ಮತ್ತು ಇತರ ಫ್ರಾಂಚೈಸಿ ಪಂದ್ಯಾವಳಿಗಳಲ್ಲಿ ಪ್ರತಿನಿಧಿಸಿದ ತಂಡಗಳಲ್ಲಿ ನಿರ್ಣಾಯಕ ವ್ಯಕ್ತಿಯಾಗಿದ್ದರು. ಅವರು ಮುಂಬೈ ಇಂಡಿಯನ್ಸ್ನೊಂದಿಗೆ ಐದು ಐಪಿಎಲ್ ಚಾಂಪಿಯನ್ಶಿಪ್ ವಿಜಯಗಳಲ್ಲಿ ನಾಲ್ಕರ ಭಾಗವಾಗಿದ್ದರು .
ಇವರು ಟ್ವಿಟರ್ ಮೂಲಕ ಅಧಿಕೃತವಾಗಿ ವಿದಾಯವನ್ನು ಪ್ರಕಟಿಸಿದ್ದಾರೆ. “ನನ್ನ ಶೂಗಳು ವಿಶ್ರಾಂತಿ ಪಡೆಯುತ್ತಿರುವಾಗ, ಆಟದ ಮೇಲಿನ ನನ್ನ ಪ್ರೀತಿ ಎಂದಿಗೂ ವಿಶ್ರಾಂತಿಯನ್ನು ಕೇಳುವುದಿಲ್ಲ. ನಮ್ಮ ಯುವಕರು ಇತಿಹಾಸವನ್ನು ಮಾಡುವುದನ್ನು ನೋಡಲು ಎದುರು ನೋಡುತ್ತಿದ್ದೇನೆ.” ಎಂದು ಟ್ವೀಟ್ ಮಾಡಿದ್ದಾರೆ.
ಇವರು ಆಡಿದ ಟೀಮ್ ಪ್ರಮುಖವಾಗಿ -ಶ್ರೀಲಂಕಾ ಕ್ರಿಕೆಟ್ ಮಂಡಳಿ, ಮುಂಬೈ ಇಂಡಿಯನ್ಸ್, ಮೆಲ್ಬೋರ್ನ್ ಸ್ಟಾರ್ಸ್, ಕೆಂಟ್ ಕ್ರಿಕೆಟ್ ಕ್ಲಬ್, ರಂಗಪುರ ರೈಡರ್ಸ್, ಗಯಾನ ವಾರಿಯರ್ಸ್, ಮರಾಠ ವಾರಿಯರ್ಸ್ ಮತ್ತು ಮಾಂಟ್ರಿಯಲ್ ಟೈಗರ್ಸ್.
– ಹುಸೈನ್ ಶಾನ್
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.