ಗಜಲ್ ಸಂಜೆ ನೀ ತಿರುಗಾಡಬಾರದು ತುಡುಗು ದನಗಳಿರುತ್ತವೆ ಇಲ್ಲಿ ಹೆಚ್ಚು ನೀ ಮಾತಾಡಬಾರದು ಮೌನ ಸಮ್ಮತಿಯಾಗುತ್ತದೆ ಇಲ್ಲಿ ಬೆಂಕಿ ನೀರು ಹಾವು ಎಲ್ಲಾ ಸಾವಿನ ಪರೀಕ್ಷೆಗಳು ನಿನಗಾಗಿ ಮಾತ್ರ ತಪ್ಪು ನೀ ಮಾಡಲೇಬಾರದು ತಪ್ಪಿನ ಮೀಸೆ ಮೇಲಿರುತ್ತದೆ ಇಲ್ಲಿ ಝಂಡಾ ಊರುವ ಷಂಡರಿಗೆ ರಕ್ತ ಕಣ್ಣೀರು ಕಾಣಿಸುವುದಿಲ್ಲ ಜೋರು ನೀ ಕೂಗಲೇಬಾರದು ತೀರದ ಐಬು ರೊಚ್ಚಿಗೇಳುತ್ತದೆ ಇಲ್ಲಿ ತೊಡುವ ಬಟ್ಟೆ ನಿನಗೆ ಹಿತವಾಗಿ ಇರಬೇಕು ಎಂದೇನೂ ಇಲ್ಲ ಅಂದ ನೀ ತೋರಲೇಬಾರದು ಕಣ್ಣಲ್ಲೇ ವೀರ್ಯ ಸ್ಖಲನವಾಗುತ್ತದೆ ಇಲ್ಲಿ ಮೃಗ ಖಗ ಕೀಟಗಳು ಕೂಡ ಸಾಕು ಎಂದ ಮೇಲೆ ಕೇಳುವುದಿಲ್ಲ ಪ್ರಿಯಾ ನೀ ಹೆಣ್ಣಾಗಲೇಬಾರದು ಹುಟ್ಟು ಹೇಗಾಗುತ್ತದೆ ಇಲ್ಲಿ ಸಾವನ್ ಕೆ ಸಿಂಧನೂರು ಮೊ 9902858592
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.