ದುಬೈ(www.vknews.in): ಯುಎಇಯ ದೈನಂದಿನ ಕೊವಿಡ್ ಸೋಂಕಿತರ ಸಂಖ್ಯೆಯಲ್ಲಿ ದಿನೇದಿನೇ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ, ಅಬುಧಾಬಿಯು ದುಬೈಯಿಂದ ಬರುವ ಪ್ರಯಾಣಿಕರಿಗಾಗಿ ತನ್ನ ಗಡಿಯಲ್ಲಿ ಕೊವಿಡ್ ತಪಾಸಣಾ ಕೇಂದ್ರವನ್ನು ಸ್ಥಾಪಿಸಿದೆ.
ಕಳೆದ ಒಂದು ವಾರದಿಂದ ಯುಎಇಯ ದೈನಂದಿನ ಕೊವಿಡ್ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬಂದಿದ್ದು, ಇಂದು ದಾಖಲಾದ ಕೊವಿಡ್ ಪ್ರಕರಣಗಳ ಸಂಖ್ಯೆ 266ಕ್ಕೆ ಏರಿಕೆಯಾಗಿದೆ. ಓಮಿಕ್ರಾನ್ ಪ್ರಬೇಧ ಪತ್ತೆಯಾದ ನಂತರ ಗಲ್ಫ್ ರಾಷ್ಟ್ರಗಳ ಕೊವಿಡ್ ಸೋಂಕಿತರಲ್ಲಿ ಏರಿಕೆ ಕಂಡು ಬರ ತೊಡಗಿದೆ. ಸೌದಿಯಲ್ಲೂ ಕೂಡ ಇಂದು 116 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.