(www.vknews.com) : ಅದೊಂದು ಆಗಸ್ಟ್ ತಿಂಗಳ ಕೊನೆಯ ದಿನ ಬೆಳಿಗ್ಗೆ ಬೇಗನೆ ಎದ್ದು ಎಲ್ಲಾ ಕೆಲಸವನ್ನು ಮುಗಿಸಿ ಅವಸರದಲ್ಲಿ ಕಾಲೇಜ್ ಗೆ ಹೊರಟಿದ್ದೆ ನನ್ನ ದಿನಚರಿ ಸರಿ ಇರಲಿಲ್ಲವೇನೋ ಕಾಲೇಜ್ ಬಸ್ ನನ್ನ ಕಣ್ಣು ಮುಂದೆಯೇ ತಪ್ಪಿ ಹೋಯಿತು . ನನ್ನ ದುರದೃಷ್ಟವನ್ನು ನೆನೆದು ಕಣ್ಣಲ್ಲಿ ನೀರು ತುಂಬಿತ್ತು ಹೇಗೋ ಬೇರೆ ಬಸ್ ಹಿಡಿದು ಕಾಲೇಜ್ ತಲುಪಿದೆ ಅಲ್ಲಿಯೂ ನನ್ನ ಅದೃಷ್ಟ ಸರಿ ಇರಲಿಲ್ಲ . ಅದವುದನ್ನು ಗಮನಿಸುವ ಸ್ಥಿತಿಯಲ್ಲಿ ನಾ ಇರಲಿಲ್ಲ ಏನೋ ಮನದಲ್ಲೊಂದು ಚಡಪಡಿಕೆ ಶುರುವಾಗಿತ್ತು. ಯಾರಿಗೆ ಏನಾಗಿದೆಯೋ ಎಂಬ ಭಯ ಬೇರೆ ಕಾಡುತಿತ್ತು . ನನ್ನ ೬ ಜನ ಗೆಳತಿಯರು ನನ್ನ ಬಳಿ ಕುಳಿತು ಏನಾಯಿತು? ಎಂದು ಕೇಳುತ್ತಲೇ ಅಂದಿನ ದಿನ ಕಳೆದರೂ . ಮನೆಗೆ ತಲುಪಿದೆ ಎಲ್ಲರನ್ನೂ ನೋಡಿ ಸಮಾಧಾನದ ಉಸಿರಾಡಿದೆ.
ಆದರೆ ಅದು ಹೆಚ್ಚು ಹೊತ್ತು ಇರಲಿಲ್ಲ ಎಲ್ಲವೂ ವಿಧಿಯ ಆಟವಲ್ಲವೆ? ಯಥಾ ಪ್ರಕಾರ ಅಂದಿನ ನಮಾಜ್ ಮಾಡಿ ಕುಳಿತಿದ್ದೆ ಅಷ್ಟರಲ್ಲಿ ಅಣ್ಣ ಬಾಗಿಲ ಮೇಲೆ ಶಬ್ದ ಮಾಡಿದ ಅವನು ಬರುವುದು ಅನಾರಿಕ್ಷಿತವಲ್ಲದಿದ್ದರಿಂದ ಯಾರಿಗೂ ಆಶ್ಚರ್ಯವಾಗಲಿಲ್ಲ. ಅಮ್ಮ ಬಾಗಿಲು ತೆಗೆದಾಗ ಅವನು ಕುಂಟುತ್ತಾ ಒಳ ಬಂದ ಇದರಿಂದ ನನ್ನ ದೃಷ್ಟಿ ಅವನ ಕಾಲಿನ ಮೇಲೆ ಹೋಯಿತು. ಗಾಯವಾಗಿ ಕಾಲಿನಿಂದ ರಕ್ತ ಹರಿಯುತ್ತಿತ್ತು. ನಾನು ಅವನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಆದರೆ ಅವನನ್ನು ಈ ಸ್ಥಿತಿಯಲ್ಲಿ ನೋಡಿ ನನ್ನ ಹೃದಯವೇ ಕಿತ್ತು ಬಂದ ಹಾಗಾಯಿತು. ನನ್ನ ಕಣ್ಣಲ್ಲಿ ಒಂದೇ ಸಮ ನೀರಿಲಿಯುತಿತ್ತು . ಆದ್ರೂ ಸಹಿಸಿದೆ. ಇದನ್ನು ಹೇಳಿದಾಗ ಎಲ್ಲರೂ ಅಂದುಕೊಳ್ಳುವರು ಆಫಘಾತವಾಗುದು ಸಹಜವೆಂದು ಆದರೆ ನಾವು ಪ್ರೀತಿಸುವವರಿಗೆ ಚಿಕ್ಕ ಗಾಯವದರೂ ಅದು ನಮ್ಮ ಮನಸಿಗೆ ತುಂಬಾ ನೋವು ಮಾಡುತ್ತೆ..
✍️ ರಫೀಝ ವಿ.ಕೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.