ಕಡಬ (www.vknews.com) : ಶ್ರೀ ಉದಯ್ಶಂಕರ್, ಇವರು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಡಬ ಘಟಕದ ಗೃಹರಕ್ಷಕರಾಗಿದ್ದು, 1997 ರಲ್ಲಿ ಗೃಹರಕ್ಷಕದಳದ ಸದಸ್ಯನಾಗಿ ಸೇರ್ಪಡೆಯಾಗಿ, 24 ವರ್ಷಗಳಿಂದ ಸ್ವಾರ್ಥ ರಹಿತ ನಿಷ್ಕಾಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ. ಇವರ ಸೇವಾ ಅವಧಿಯಲ್ಲಿ ಅನೇಕ ಬಂದೋಬಸ್ತು ಕರ್ತವ್ಯ, ಕವಾಯತು, ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಿರುತ್ತಾರೆ. ಶ್ರೀಯುತರು ಒರ್ವ ದಕ್ಷ, ಪ್ರಾಮಾಣಿಕ ಮತ್ತು ಮಾದರಿ ಗೃಹರಕ್ಷಕರಾಗಿದ್ದು, ಕಡಬ ಗೃಹರಕ್ಷಕದಳದ ಸಕ್ರಿಯ ಸದಸ್ಯರಾಗಿರುತ್ತಾರೆ. ಅವರ ಸೇವೆಯನ್ನು ಗುರುತಿಸಿ ಗೌರವಿಸಿ ಅವರನ್ನು ಸನ್ಮಾನಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ನುಡಿದರು.
ದಿನಾಂಕ 26-12-2021 ನೇ ರವಿವಾರದಂದು ಕಡಬದ ಗೃಹರಕ್ಷಕದಳದ ಕಛೇರಿಗೆ ಭೇಟಿ ನೀಡಿ, ವಾರದ ಕವಾಯತನ್ನು ವೀಕ್ಷಿಸಿದರು ಮತ್ತು ಇದೇ ಸಂದರ್ಭದಲ್ಲಿ ಶ್ರೀ ಉದಯಶಂಕರ್ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಿದರು. ಕಡಬ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ತೀರ್ಥೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಡಬ ಘಟಕದ ಸುಮಾರು 40 ಮಂದಿ ಗೃಹರಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.