ಸೌದಿ -ಬೀಷಾ (www.vknews.in) : ಸುದೀರ್ಘ ವರ್ಷಗಳಿಂದ ಅನಿವಾಸಿಯಾಗಿದ್ದ ಗುರುಪುರ ಕೈಕಂಬ ನಿವಾಸಿ ಹಮೀದ್ ಎಂಬವರು ದಿನಾಂಕ 21/01/2022 ರ ಶುಕ್ರವಾರ ಮಧ್ಯಾಹ್ನ ಅನಾರೋಗ್ಯದಿಂದ ಸೌದಿ ಅರೇಬಿಯಾದ ಬೀಷಾ ಕಿಂಗ್ ಅಬ್ದುಲ್ಲಾ ಆಸ್ಪತ್ರೆಯಲ್ಲಿ ಅಕಾಲಿಕ ಮರಣಹೊಂದಿರುತ್ತಾರೆ. ದಿನಗಳ ಹಿಂದೆಯಷ್ಟೇ ಅನಾರೋಗ್ಯ ಕಾಣಿಸಿಕೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.
ಮರಣೋತ್ತರ ಕ್ರಿಯೆಗೆ ಬೇಕಾದ ವ್ಯವಸ್ಥೆ ಕಲ್ಪಿಸಲು ಕೂಡಲೇ ಸ್ಪಂದಿಸಿ ಕಾರ್ಯ ಪ್ರವೃತ್ತರಾದ ISF ಕೇರಳ ಹಾಗೂ ಕರ್ನಾಟಕ ಸಮಿತಿಯವರು, ಭಾರತೀಯ ರಾಯಬಾರಿ ಕಛೇರಿ ಹಾಗೂ ಅಂತ್ಯಕ್ರಿಯೆಗೆ ಊರಿನಿಂದ ಬೇಕಾದ ದಾಖಲೆ ಪತ್ರವನ್ನು ಸರಿಪಡಿಸಿ ಇಂದು ದಿನಾಂಕ 24/01/2022ರ ಸೋಮವಾರ ಅಸರ್ ನಮಾಝ್ ನಂತರ ಸ್ಥಳೀಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಿರ್ವಹಿಸಲಾಯಿತು. ಗೆಳೆಯರು ಹಾಗೂ ಸೌದಿಯಲ್ಲಿರುವ ಮೃತರ ಕುಟುಂಬಸ್ಥರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಪ್ರಾರ್ಥಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.