(www.vknews.in) : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಹೂಡೆ ಘಟಕದ ವತಿಯಿಂದ ಪ್ರತಿ ವರ್ಷದಂತೆ ಇಂದು ಹೂಡೆಯ ಉರ್ದು ಶಾಲಾ ವಿಧ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ಹೂಡೆಯ ಉರ್ದು ಶಾಲಾ ಸಭಾಂಗಣದಲ್ಲಿ ಜರಗಿತು. ಪಿ.ಎಫ್.ಐ.ಕೋಸ್ಟಲ್ ಡಿವಿಜನ್ ಅಧ್ಯಕ್ಷರಾದ ಇಲ್ಯಾಸ್ ನೂರಾ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಆಗಮಿಸಿ ಗ್ರಾಮ ಪಂಚಾಯತ್ ಸದಸ್ಯ ಹೈದರ್ ಆಲಿ ಮಾತನಾಡಿದರು.
ವೇದಿಕೆಯಲ್ಲಿ ಎಸ್.ಡಿ.ಪಿ.ಐ.ಗ್ರಾಮ ಸಮಿತಿ ಅಧ್ಯಕ್ಷರಾದ ಅಲ್ತಾಫ್ ಕೆ,ಮಾಜಿ ಅಧ್ಯಕ್ಷರಾದ ಜಿ.ಮುಖ್ತಾರ್,ಸಮಿತಿ ಸದಸ್ಯರಾದ ಮುನೀರ್ ಎನ್,ಅಬ್ದುಲ್ ಖಾದರ್ ಹಾಗೂ ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಲೀಲಾವತಿ ಉಪಸ್ಥಿತರಿದ್ದರು.ಇಮ್ತಿಯಾಜ್ ಜಿ.ಕಾರ್ಯಕ್ರಮ ನಿರೂಪಿಸಿದರು.ಆಸಿಫ್ ಕುದುರ್ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.