ಆ ತರಹದ ಲಿಂಕ್ ಗಳನ್ನು ತೆರೆಯದಿರಲು ಎಮಿರೇಟ್ಸ್ ಸಂಸ್ಥೆ ಸಾರ್ವಜನಿಕರಲ್ಲಿ ವಿನಂತಿಸಿದೆ..
ದುಬೈ (ವಿಶ್ವ ಕನ್ನಡಿಗ ನ್ಯೂಸ್) : ನಮ್ಮ ಸಂಸ್ಥೆಯ ಹೆಸರಿನಲ್ಲಿ ನಗದು ಕೊಡುಗೆಗಳನ್ನು ನೀಡುವ ನಕಲಿ ಆನ್ಲೈನ್ ಸ್ಪರ್ಧೆಗಳ ಬಗ್ಗೆ ಜಾಗರೂಕರಾಗಿರಿ ಎಂದು ಎಮಿರೇಟ್ಸ್ ಸಂಸ್ಥೆ ಸಾರ್ವಜನಿರಿಗೆ ಹೇಳಿದೆ. ಎಮಿರೇಟ್ಸ್ ವಿಮಾನಯಾನ ಸಂಸ್ಥೆಯು Dh10,000 ನಗದು ಬಹುಮಾನವನ್ನು ನೀಡುವುದಾಗಿ ಹೇಳುವ ನಕಲಿ ಸ್ಪರ್ಧೆಯ ಲಿಂಕ್ ಗಳು ಪ್ರಸಾರವಾಗುತ್ತಿದ್ದು, ಇದರ ಬಗ್ಗೆ ಜಾಗರೂಕರಾಗುವಂತೆ ಸಂಸ್ಥೆಯು ಎಚ್ಚರಿಕೆಯನ್ನು ನೀಡಿದೆ.
ವಾಟ್ಸಾಪ್ ಮತ್ತು ಇತರೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ನಗದು ಬಹುಮಾನವನ್ನು ಗೆಲ್ಲುವ ಅವಕಾಶವನ್ನು ನೀಡುವ ಪ್ರಚಾರದ ಲಿಂಕ್ ಅನ್ನು ತೆರೆಯದಿರಲು ಎಮಿರೇಟ್ಸ್ ಸಂಸ್ಥೆ ಸಾರ್ವಜನಿಕರಲ್ಲಿ ವಿನಂತಿಸಿದೆ.
ನಗದು ಕೊಡುಗೆಗಳ ಬಗ್ಗೆ ಪ್ರಸಾರವಾಗುತ್ತಿರುವ ಸಂದೇಶವು ಅಧಿಕೃತವಲ್ಲ ಇದರ ಬಗ್ಗೆ ಜಾಗರೂಕರಾಗಿರಿ, ನಮ್ಮ ಏನೇ ಸ್ಪರ್ಧೆಗಳಿದ್ದರೂ ಎಮಿರೇಟ್ಸ್ ಸಂಸ್ಥೆಯ ಅಧಿಕೃತ ಚಾನಲ್ಗಳಲ್ಲಿ ಹಾಕಲಾಗುತ್ತದೆ, ಅದು ಬಿಟ್ಟು ಇತರೇ ಸಾಮಾಜಿಕ ತಾಣಗಳಲ್ಲಿ ಪ್ರಸಾರವಾಗುತ್ತಿರುವ ಯಾವುದೇ ಲಿಂಕ್ ಕೂಡ ಅಧಿಕೃತವಲ್ಲ ಎಂದು ಸಂಸ್ಥೆಯು ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.