ಅಪಾರ ಅನಾಹುತಗಳು ಸಂಭವಿಸುವ ಮಳೆಗಾಲದಲ್ಲಿ ತಮಗೊಂದು ಎಚ್ಚರಿಕೆಯ ಸಂದೇಶವಿದು. ಅನಾಹುತಗಳಾಗಿ ದುಃಖಿಸುವ ಮುನ್ನ ಇದನ್ನು ಓದಿ ಶೇರ್ ಮಾಡಿ ಜಾಗೃತರಾಗಿ.
(www.vknews.in) : ಮಳೆಗಾಲ ಶುರುವಾಗಿದ್ದು ಹಲವಾರು ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು. ಶಾಲೆಗಳಿಗೆ ರಜೆ ನೀಡಲಾಗಿದ್ದು ಮಳೆಯಿಂದಾಗಿ ನದಿ ಕೆರೆಗಳು ತುಂಬಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ರಸ್ತೆಗಳು ಜಲಾವೃತವಾಗಿದೆ. ಆದುದರಿಂದ ತಮ್ಮ ಮಕ್ಕಳನ್ನು ಹೊರಗಡೆ ಆಟವಾಡಲು ಅಥವಾ ಕಾಲು ಕೆಸರಾಗಿದೆಯೆಂದು ಕಾಲು ತೊಳೆದುಕೊಂಡು ಬರಲು ನದಿ ಕೆರೆಗಳತ್ತಿರ ಅಥವಾ ರಸ್ತೆಯ ಬದಿಯಲ್ಲಿ ಹರಿಯುತ್ತಿರುವ ಕಾಲುವೆಗಳಿಗೆ ಹೋಗಲು ಬಿಡಬೇಡಿ ಧಾರಕಾರ ಮಳೆಯಿಂದಾಗಿ ನದಿ ಕೆರೆಗಳು ತುಂಬಿ ನೀರು ರಭಸವಾಗಿ ಹರಿಯುತ್ತಿದ್ದು ಯಾವುದೇ ಸಮಯದಲ್ಲಿ ಅನಾಹುತ ಸಂಬವಿಸಬಹುದು. ಅದೇ ರೀತಿ ಹೊರಗಡೆ ಆಟವಾಡಲು ಬಿಡಬೇಡಿ ಕೆಲವು ಕಡೆ ಗುಡ್ಡ ಕುಸಿಯುವ ದೃಶ್ಯವಳಿಗಳು ಕಂಡಿರಬಹುದು. ಮಳೆಗಾಲದಲ್ಲಿ ದಿನೇ ದಿನೆ ಸಾಕಷ್ಟು ಅನಾಹುತಗಳು ಸಂಭವಿಸುವ ಕಾರಣ ನಾವು ಎಚ್ಚರವಾದಷ್ಟು ಉತ್ತಮ.
ಕಳೆದ ವರ್ಷ ಬಿ,ಸಿ ರೋಡಿನ ಬಂಗ್ಲಗುಡ್ಡೆಯಲ್ಲಿ ಗುಡ್ಡ ಕುಸಿದು ಮಕ್ಕಳು ದಾರುಣವಾಗಿ ಮರಣಹೊಂದ ವಿಷಯ ಮಾಸುವ ಮುನ್ನ ಮತ್ತೊಂದು ನೋವಿಗೆ ಕಾರಣವಾಗದಿರಲಿ.
ನೆನ್ನೆ ಪುಟ್ಟ ಮಗುವೊಂದು ಕಾಲು ತೊಳೆದುಕೊಂಡು ಬರಲು ಹೋಗಿ ಕೊಚ್ಚಿಹೊಂಡು ಹೋದದ್ದು ನೀವು ಮಾಧ್ಯಮಗಳಲ್ಲಿ ಕೇಳಿರಬಹುದು. ಹಾಗಾಗಿ ತಮ್ಮ ಮಕ್ಕಳನ್ನು ಪೋಷಿಸುವ ಪೋಷಕರ ತಮ್ಮ ಮಕ್ಕಳ ಮೇಲೆ ಗಮನಹರಿಸಿ ಅವರನ್ನು ಜಾಗೃತೆಗೊಳಿಸಿ ಮುಂದಾಗುವ ಅನಾಹುತಗಳಿಂದ ಪಾರಾಗಿ.
ಹಾಗೆಯೇ ಯುವಕರಲ್ಲೊಂದು ಮನವಿ ಏನೆಂದರೆ ಈಜು ಬರುತ್ತದೆ ಎಂದು ತುಂಬಿದ ನದಿಗಳಿಗೆ ಧುಮುಕಿ ಸಾಹಸ ಮೆರೆಯಲು ಹೋಗಬೇಡಿ ನೀರು ತುಂಬಾ ರಭಸವಾಗಿ ಹರಿಯುತ್ತಿರುವುದರಿಂದ ಅನಾಹುತಗಳು ಅಪಾರವಾಗಿ ಸಂಭವಿಸುತ್ತದೆ, ಮನೆಯಲ್ಲಿ ಅಪ್ಪ ಅಮ್ಮ ಅಕ್ಕ-ತಂಗಿ ಅಣ್ಣ-ತಮ್ಮಂದಿರು ನಿನಗಾಗಿ ಕಾಯುತ್ತಿರುತ್ತಾರೆ. ಅವರಿಗೆ ನೀವೆ ಆಧಾರ ಸ್ತಂಭವಾಗಿದ್ದರೆ ! ಈಜಲು ತೆರಳುವ ಮುನ್ನ ಮನೆಯವರ ಕಡೆ ನೆನಪಿರಲಿ.
ರಕ್ಷಣದಳದವರೆ ನಿಮ್ಮ ಸೇವೆ ನಿಜಕ್ಕೂ ಶ್ಲಾಘನಿಯ, ಮತ್ತೊಬ್ಬರ ಜೀವ ಉಳಿಸಲು ಹೋಗಿ ತಮ್ಮ ಜೀವ ಒತ್ತೆಯಿಡುವಾಗ. ಒಂದತ್ತು ನೆನಪಿರಲಿ ಪ್ರಕೃತಿಯ ಮುಂದೆ ನಾವು ಏನು ಅಲ್ಲ ಎಂಬುದು ಗೊತ್ತಿದೆಯಲ್ಲ. ಏನೆ ಆಗಲಿ ಎಲ್ಲರೂ ಸುರಕ್ಷಿತವಾಗಿರಬೇಕು ಅದೇ ಚೆಂದ ಹಾಗಾಗಿ ಎಲ್ಲರೂ ಜಾಗ್ರತೆವಹಿಸಿ. ಎಲ್ಲರನ್ನೂ ಆ ಸೃಷ್ಟಿಕರ್ತ ಕಾಪಾಡಲಿ.
✍🏻 ಸಿದ್ದೀಕ್ ಶನಿವಾರಸಂತೆ, ಕೊಡಗು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.