ಅಬುಧಾಬಿ (www.vknews.in) : ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಅಬುಧಾಬಿ ಸಮಿತಿ ವತಿಯಿಂದ ಇತ್ತೀಚೆಗೆ ಅಬುಧಾಬಿಯ ನಾಸಿರಿಯ ಸಭಾಂಗಣದಲ್ಲಿ, ಸಮಾಜದ ಹಲವು ಹಿರಿಯ ಗಣ್ಯರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಯಿತು.
ತಕ್ರೀಮ್ 2022 ಎಂಬ ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕರ್ನಾಟಕ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸಅದಿ, ಎಸ್ಎಸ್ಎಫ್ ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿ ಹಫೀಲ್ ಸಅದಿ ಕೊಡಗು, ಐಸಿಎಫ್ ಸಂಘಟನೆಯ ಪ್ರಮುಖರಾದ ಜನಾಬ್ ಹಮೀದ್ ಪರಪ್ಪ, ಕೆಸಿಎಫ್ ಅಂತರಾಷ್ಟ್ರೀಯ ಪ್ರಮುಖರಾದ ಜನಾಬ್ ಹಮೀದ್ ಸಅದಿ, ಎಂ. ಎಚ್. ಹಮೀದ್ ಈಶ್ವರ ಮಂಗಿಳ, ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಮೌಲಾನ ಇಬ್ರಾಹೀಂ ಸಖಾಫಿ ಹಾಗೂ ನೂತನ ಸಮಿತಿಯ ಇತರ ಪದಾದಿಕಾರಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರವನ್ನು ಐಸಿಎಫ್ ನೇತಾರ ಜನಾಬ್ ಹಮೀದ್ ಪರಪ್ಪ ಉದ್ಘಾಟಿಸಿದರು. ಕೆಸಿಎಫ್ ಅಬುಧಾಬಿ ಸಮಿತಿಯ ಅಧ್ಯಕ್ಷ ಮೌಲಾನ ಹಸೈನಾರ್ ಅಮಾನಿ ಅಧ್ಯಕ್ಷತೆ ವಹಿಸಿದ್ದರು. ಜನಾಬ್ ಕಬೀರ್ ಬಾಯಂಬಾಡಿ ಸ್ವಾಗತಿಸಿದರು. ಜನಾಬ್ ಉಮರ್ ಈಶ್ವರಮಂಗಿಳ ಕೃತಜ್ಞತೆ ಸಲ್ಲಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.