ಮೂರಕ್ಕೆ ಏರಿದ ಭಾರತದ ಪದಕಗಳ ಸಂಖ್ಯೆ..
ಬರ್ಮಿಂಗ್ಹ್ಯಾಮ್ (ವಿಶ್ವ ಕನ್ನಡಿಗ ನ್ಯೂಸ್) : ಮೀರಾಬಾಯಿ ಚಾನು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದರು. ವೇಟ್ ಲಿಫ್ಟಿಂಗ್ ನಲ್ಲಿ 49 ಕೆಜಿ ವಿಭಾಗದಲ್ಲಿ ಚಾನು ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದರು. ಚಾನು ಎರಡು ಸುತ್ತುಗಳಲ್ಲಿ 84 ಕೆಜಿ ಮತ್ತು 88 ಕೆಜಿ ಎತ್ತಿದರು. ಚಾನು ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ಪದಕ ಗೆದ್ದರು.
ಚಾನು ಈ ಹಿಂದೆ 2014 ಮತ್ತು 2018ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆದ್ದಿದ್ದರು. ಚಾನು 2014 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಮತ್ತು 2018 ರಲ್ಲಿ ಚಿನ್ನ ಗೆದ್ದಿದ್ದರು. ಚಾನು 2021ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಇದರೊಂದಿಗೆ, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ ಮೂರಕ್ಕೆ ಏರಿದೆ. ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ಸಂಕಟ್ ಸರ್ಕಾರ್ ಬೆಳ್ಳಿ ಗೆದ್ದರೆ, ಗುರುರಾಜ ಕಂಚಿನ ಪದಕ ಗೆದ್ದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.