ಅವಳು ನೆನಪಾಗುತ್ತಾಳೆ ಮುಗಿಲು ಮುಟ್ಟಿದ ಮಳೆಗೆ ತಂಪಾಗಿರುವ ತಂಗಾಳಿಗೆ ಅವಳೆದೆಯ ಬಿಸಿಯನ್ನು ಈ ಎದೆಯೂ ಬಯಸುವಾಗ ಮತ್ತೆ, ಮತ್ತೆ ನೆನಪಾಗುತ್ತಾಳೆ
ಅವಳು ಆಳವಾದ ಶರಧಿ ನಾನು ಇಳಿಯುವೆನೆಂದೆ ಅವಳು ಬೇಡವೆಂದಿಲ್ಲ ನಾನು ಇಳಿದು ಬಿಟ್ಟೆ ಹತ್ತಿರವು ಆದೆ ಅದೇ ರಾತ್ರಿ ಜೊತೆಯಾದೆ
ಆ ದಿನದ ಅದ್ಬುತ ನೋಡಿ ಮಜ್ನೂ ಲೈಲಾಲ ಖಬರಿನ ಮೇಲೆ ಹೃದಯವಿಟ್ಟು, ನಾನು ಅವಳ ಎದೆಬಡಿತದ ಅನುರಾಗ ಆಲಿಸಿ ಮಲಗಿದೆ
ಅನರ್ಘ್ಯವಾದ ಆ ಮಳೆ ಮನದ ಚಿತ್ತಪಟದಲ್ಲಿ ಮೂಡುತ್ತಿದೆ ಬಿಟ್ಟು ಹೋಗಬೇಡ ನನ್ನ ಅವಳೆದೆಯ ಸಂಗೀತದ ಸಾಹಿತ್ಯ ಕಿವಿಯಲ್ಲಿ ಇಂಪಾಗಿ ಕೇಳಿಸುತ್ತಿದೆ
ಅವಳಿದ್ದ, ಅವಳಿಲ್ಲದ ಮೊದಲ ಮತ್ತು ಕೊನೆಯ ಮಳೆಯದು ನಿಮಗೆ ಮಳೆ ಬಂದರೆ ನನಗೆ ಅವಳು ಬರುತ್ತಾಳೆ ಮಳೆಯೆಂದರೆ ಅವಳು
– ಆಮಿರ್ ಬನ್ನೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.