(www.vknews.in). ಕುಂದಾಪುರ :75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವನ್ನು ಅ. 15 ರಂದು ಕುಂದಾಪುರ ತಾಲೂಕಿನ ಕೋಡಿ ಮುಹಿಯ್ಯದ್ದೀನ್ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದರಸ ಮತ್ತು ದಾರು ಸಿಬಿಯಾನ್.& ದರ್ಸಿನ ಮುತಳ್ಳಿಮ್ ಗಳು ಕೋಡಿ ಕುಂದಾಪುರ ಇದರ ಜಂಟಿ ಆಶ್ರಯದಲ್ಲಿ ಅದ್ಯಾಪಕ ವೃಂದ ಹಾಗೂ ವಿಧ್ಯಾರ್ಥಿಗಳು ಬಹಳ ವಿಜ್ರಂಭನೆಯಿಂದ ಆಚರಿಸಿದರು.
ಧ್ವಜಾರೋಹಣವನ್ನು ಜಮಾಅತಿನ ಖತೀಬರಾದ ಎಚ್.ಐ. ಯೂಸುಫ್ ಸಖಾಫಿ ಉಸ್ತಾದವರು ನೆರವೇರಿಸಿದರು. ಅವರು ದುವಾ ಪ್ರವಾಚನ ಗೈದು ದೇಶವು ಬ್ರಿಟಿಷರ ಕಪಿಮುಷ್ಟಿಯಿಂದ ಸ್ವಾತಂತ್ರ್ಯಗೊಂಡು ಇಂದು ಅಮೃತಮಹೋತ್ಸವವನ್ನು ನಾವು ಆಚರಿಸುತ್ತಿದ್ದೇವೆ, ಈ ಸಂದರ್ಭದಲ್ಲಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಹೋರಾಟಗಾರರನ್ನು ನೆನೆಯುತ್ತಾ ಅವರ ಹೋರಾಟದ ಚರಿತ್ರೆಯನ್ನು ಪುನರಾವರ್ತಿಸಿ ಪ್ರಸಕ್ತ ದೇಶದ ಸರ್ವಾಧಿಕಾರದ ವಿರುದ್ಧ ಹೋರಾಟಕ್ಕೆ ಶಕ್ತಿ ತುಂಬ ಬಹುದಾಗಿದೆ ಎಂದರು. ನಂತರ ದುವಾ ನೆರವೇರಿಸಿ ಕೊಟ್ಟರು.
ಈ ಸಂದರ್ಭದಲ್ಲಿ ಜಮಾಅತಿನ ಮುದಾರ್ರಿಷ್ ಸದರ್ ಮಅಲ್ಲಿಮ್ , ಜಮಾಅತ್ ಕಮೀಟಿಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಕೋಶಾಧಿಕಾರಿ, ಕಮೀಟಿ ಸದಸ್ಯರು ಹಾಗು ಜಮಾತಿನ ಹಲವಾರು ಗಣ್ಯರು ಉಪಸ್ತಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.